ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಶ್ರೀನಿವಾಸ ಏಳು ಲಕ್ಷ್ಮೀರಮಣ ಏಳು ಬೆಟ್ಟದೊಡೆಯ ಏಳು ಭಕ್ತರ ಪ್ರೀಯ ಏಳಯ್ಯ ಬೆಳಗಾಯಿತು ಹರಿಯೇ ಪ. ಆದಿಶೇಷನ ಮೇಲೆ ಅಪ್ರಮೇಯನು ನೀನು ಆದರದಿ ಮಹಲಕ್ಷ್ಮಿಯೊಡನಿರಲೂ ಸುರರು ಸನಕ ಸನಂದನರು ಆದರಿಸೆ ಬಾ ಬೇಗ ಬಾಗಿಲನು ತೆಗೆದು ಆದಿಮೂರುತಿ ನಿನ್ನ ಮುಖ ದರ್ಶನವ ಮಾಡಿ ಮೋದ ಪಡುತಲೆ ಭಕ್ತ ಕೋಟಿ ಸ್ತುತಿ ಮಾಡಲು ಮಾಧವನೆ ಹಾಸು ಮಂಚವನಿಳಿದು ಬಾ ಕತ್ತಲೆ ಹರಿಪಾ ದಿವಾಕರನ ತೆರದಿ ಹರಿಯೇ ಏಳಯ್ಯ ಬೆಳಗಾಯಿತು 1 ಕಾಸಿದ್ಹಾಲನೆ ತಂದು ಕಾವಡಿಯಲಿ ತುಂಬಿ ಲೇಸಾಗಿ ನಿನ್ನ ಭಕ್ತರು ನಿಂತಿದಾರೆ ವಾಸುದೇವನೆ ನಿನಗೆ ಮಲ್ಲಿಗೆ ಕುಸುಮ ಭಾಸುರಾಂಗನೆ ತಂದು ಅರ್ಪಿಸಲು ಭಕ್ತರು ಏಸು ಹೊತ್ತಿನಿಂದ ತುಳಸೀ ದಳ ತಂದು ವಾಸುಕೀಶಯನಗೆಂದು ಭೂಸುರರು ನಿಂದಾರೆ ವೇದ ಘೋಷದಿಂದ ಈಸು ನುಡಿಗಳು ನಿನ್ನ ಕರ್ಣಕೇಳಲಿಲ್ಲವೆ ಏಸು ಮೆಚ್ಚಿಸಿಹಳೋ ಲಕ್ಷ್ಮೀ ನಿನ್ನ ಸರಸದೊಳು ವಾಸುಕೀಶಯನ ಹಾಸಿಗೆಯಿಂದೇಳೋ ದೊರೆಯೆ ಏಳಯ್ಯ ಬೆಳಗಾಯಿತು2 ಕರುಣಾಸಾಗರ ನಿನಗೆ ಕರುಣೆ ಬರುವಾತೆರ ಪರಿಪರಿಯ ಸ್ತೋತ್ರದೊಳು ನಾರಿಯೇರು ಕರೆವರೋ ಕರಗತ ಕಾಮಧೇನು ನೀನೆಂದು ಕರದೊಳಾರತಿಯ ಪಿಡಿದೂ ತರತರದ ಉಡಿಗೆ ತೊಡಿಗೆ ನಿನಗೀಯಲು ಸರಸರನೆ ದೇಶದೇಶದಿ ಬಂದು ನಿಂತಿದ್ದಾರೆ ಶರಧಿ ಗಂಭೀರನೆ ವರ ಶ್ರೀ ಶ್ರೀನಿವಾಸನೆ ಕರುಣೆ ತೋರುತ್ತ ನಿನ್ನ ಭಕ್ತರ ಮೇಲೆ ವರ ನಾರಿಯರ ನಾಟ್ಯ ವೈಭವದಿ ವರದುಂದುಭಿ ವಾದ್ಯದಲಿ ವರ ತಾಳ ಮೇಳದಿಂ ವರ ಶೇಷಾದ್ರಿವಾಸ ವೆಂಕಟೇಶನೆ ಏಳಯ್ಯ ಬೆಳಗಾಯಿತು 3
--------------
ಸರಸ್ವತಿ ಬಾಯಿ
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀಹರಿಯಾ ಬಲಗೊಂಬೆ ಕೋಲೆ ಪ ಮೊದಲು ನಮ್ಮ ಗುರು ರಘುಪತಿಯ ಪಾದಕ್ಕೆ ಮುದದಿಂದ ಎರಗಿ ಬಿನ್ನೈಪೆ ಕೋಲೆ ಮುದದಿಂದ ಎರಗಿ ಬಿನ್ನೈಪೆ ಮನದಲ್ಲಿ ಪದಮನಾಭನ್ನ ತೋರೆಂದು ಕೋಲೆ1 ಜನುಮ ಜನುಮದಲ್ಲಿ ಅನಿಮಿತ್ಯ ಬಂಧು ನೀಯನಗೀಯೋ ನಮ್ಮ ಸೇವೆಯ ಕೋಲೆ ಎನಾಗಿಯೋ ನಿಮ್ಮ ಸೇವೆಯ ತವ ಪಾದವನು ಧ್ಯಾನ ಮರಿಯಾದೆ ಕೋಲೆ2 ಮೂಢನಾದ ಎನ್ನನೋಡಿ ಕರುಣವನು ಮಾಡಿ ಹರಿಚರಣ ತೋರಿದ ಕೋಲೆ ಮಾಡಿ ಹರಿಚರಣ ತೋರಿದ ನಿಮ್ಮ ದಯ ಕೀಡುಂಟೆ ಜಗದಿ ಗುರುವರ್ಯ ಕೋಲೆ3 ಪತಿಪಾದ ಮಹಿಮೆ ತೋರಿಸಿ ಕೋಲೆ ಪತಿಪಾದ ಮಹಿಮಾ ತೋರಿಸಿ ಸ ದ್ಗತಿ ಪಥsÀವನ್ನು ವಿಡಿಸಿದ ಕರುಣಿಯೆ ಕೋಲೆ 4 ಅನಾಥ ರಕ್ಷಕ ಆಪತ್ತು ಬಾಂಧವ ಶ್ರೀನಿವಾಸನ್ನ ನಿಜದಾಸ ಕೋಲೆ ಶ್ರೀನಿವಾಸನ್ನ ನಿಜದಾಸ ಮಮಕುಲ ಸ್ವಾಮಿಗೆ ನಮಿಪೆ ಮನದಲ್ಲಿ ಕೋಲೆ 5 ಲಕುಮೀಶ ಹರಿ ದೇವಕಿ ತನಯಗೆ ಸಕಲಾ ಕರ್ಮಗಳಾ ಅರ್ಪಿಸೆ ಕೋಲೆ ಸಕಲಾ ಕರ್ಮಗಳಾ ಅರ್ಪಿಪೆ ನಮ್ಮಗುರು ಸುಖನಿಧಿಗಳಿಗೆ ನಮಿಸುವೆ ಕೋಲೆ 6 ಆನಮಿಸುವೆ ಮಹಾನುಭಾವ ಗುರು ನೇಮಕಲ್ಲಾರ್ಯರ ಚರಣಕ್ಕೆ ಕೋಲೆ ನೇಮಕಲ್ಲಾರ್ಯರ ಚರಣಕ್ಕೆ ಕೋಸಗಿ ಸ್ವಾಮಿರಾಚಾರ್ಯರ ಪಾದಕ್ಕೆ ಕೋಲೆ 7 ಪುರಂದರಾದಿ ದಾಸವರ್ಯರ ಸುಂದರ ಚರಣಕ್ಕೆ ಎರುಗುವೆ ಭರದಿಂದ ಕೋಲೆ ಭರದಿಂದ ಮುದಮುನಿ ಇವರನ್ನು ತೋರಿ ಪೊರೆಯಂದು ಕೋಲೆ 8 ಅಂದದಿಂದ ಆನಂದತೀರ್ಥ ರಾಘ ವೇಂದ್ರಾದಿ ಸಕಲ ವಿಭುದಾದಿ ಕೋಲೆ ರಾಘವೇಂದ್ರಾದಿ ಸಕಲ ವಿಭುದ ಆ ಕರ್ಮಂ ದೀಗಳಿಗೆ ನಮಿಸುವೆ ಕೋಲೆ 9 ವಾದಿರಾಜರ ದಿವ್ಯ ಪಾದಕ್ಕೆ ನಮಿಸುವೆ ಸಾಧಿಸಿ ಕೊಡಲಿ ಸತತಾದಿ ಕೋಲೆ ಸಾಧಿಸಿ ಕೊಡಲಿ ಸತತಾದಿ ಹರಿದಾಸ ರಾದವರ ಸೇವೆಯನಗೆಂದು ಕೋಲೆ 10 ಗಣಪಾದಿಗಳು ಸುರಮುನಿ ಪಾದಗಳಿಗಾ ನಮಿಸುವೆ ಮನಸಿಜ ಸುರಪಾಗ ಕೋಲೆ ನಮಿಸುವೆ ಮನಸಿಜ ಸುರಪಾಗ ಭೂತ ಗಣಪತಿ ಶೇಷರಪಾದ ಕಮಲಕ್ಕೆ ಕೋಲೆ 11 ಭಾರತೀವಾಣಿ ಗುರು ಮಾರುತಿ ಪಾದಕೆ ಪರಿ ಮಣಿಯುವೆ ಕೋಲೆ ಪರಿ ಮಣಿಯುತ ಹರಿಪಾದ ತೋರುತ ಮನದಲ್ಲಿ ನಿಲಿಸೆಂದು ಕೋಲೆ 12 ಲಕ್ಷ್ಮೀದೇವಿಯೆ ಲಕ್ಷಣವಂತಿಯೆ ಪಕ್ಷಿವಾಹನನ ಅರ್ಧಾಂಗಿ ಕೋಲೆ ಪಕ್ಷಿವಾಹನನ ಅರ್ಧಾಂಗಿ ಭವದಿಂದ ರಕ್ಷಿಸಲೆನ್ನ ತವಕಾದಿ ಕೋಲೆ 13 ಶಿರಿಗೋವಿಂದವಿಠಲ ವಿಶ್ವವ್ಯಾಪಕ ಮರುತಾಂತರ್ಗತನೆ ಮುರರಿಪು ನಮ್ಮ ಗುರುವರ್ಯರ ಪ್ರೀಯ ಸಲಹಯ್ಯ ಕೋಲೆ14
--------------
ಅಸ್ಕಿಹಾಳ ಗೋವಿಂದ
ವ್ಯಾಸಕೂಟ-ದಾಸಕೂಟದ ಇತರ ಗುರುಗಳ ವರ್ಣನೆ ಮುನಿವರ್ಯ ಶ್ರೀಕಾರ್ಪರ ಮುನಿವರ್ಯ ಪ ಗೃಂಥಾರ್ಥ ಜ್ಞಾನ ವಿಷಯವ ನೆನೆಸದಂದದಿ ಮಾಡೋ ವನಜನಾಭನ ಪ್ರೀಯ ಅ.ಪ ಮುನಿವರ್ಯ ಮನವಾಚಾಕಾಯಾ ದಿಂದ ಅನುದಿನ ನಡೆಯುವ ಕ್ರಿಯಾ ಶ್ರೀ ಕೃಷ್ಣನೆ ಮಾಡಿಸುವನೆಂಬೊ ಮತಿಯಾ ಕೊಡು ಯನಗೆಂದು ಮುಗಿವೆನು ಕೈಯಾ ಆಹಾ ಭವ ವನಧಿ ದಾಟಿಸುವ ಸಜ್ಜನರ ಸಂಗವ ಕೊಡು 1 ಶ್ರೀಕಾಂತನಶ್ವತ್ಥ ರೂಪ ದಿಂದ ಒಲಿದು ಬಂದು ನಿಂತು ಭಕ್ತ ವೃಂದವ ಪಾಲಿಪ ನಿರುತ ಆಹ ಇಂದುಮೌಲಿ ಮುಖರಿಂದ ಸಹಿತನಾಗಿ ಮಂದ ಜಾಸನನಿಲ್ಲಿ ಬಂದು ಪೂಜಿಪನಿತ್ಯ 2 ಶ್ರೀ ಕಾರ್ಪರಾಗಾರ ಬಹುಶರಣು ಜನರಿಗೆ ಮಂದಾರ ನರಹರಿಯನೊಲಿಸಿದಂಥ ಧೀರಾ ಆಹಾ ಕರುಣ ಶರಧೆಯನ್ನ ದುರಿತಗಳೋಡಿಸಿ ಹರಿಗುರು ಚರಣದಿ ಪರಮಭಕ್ತಿಯ ಕೊಡೊ 3
--------------
ಕಾರ್ಪರ ನರಹರಿದಾಸರು