ಸರ್ವ ವಿದ್ಯದಾಗರಾ | ಪಾರ್ವತಿ ಕುಮಾರಾ |
ದೋರ್ವ ವಿಘ್ನ ಸಂಹಾರಾ | ಶ್ರೀಗಣ ನಾಯಕನೇ |
ಊರ್ವಿಲಿ ನಿನ್ನ ಬಲಗೊಂಬೆ 1
ತರುವಾಣಿ ಕರುಣಾ ಸಾಗರೆ |
ಶರಣು ಶರಣು ಕಲ್ಯಾಣಿ 2
ಸಾರಸ ಲೋಚನ |
ಕಾರುಣ್ಯ ನಿಧಿಯೇ ಸಲಹಯ್ಯಾ 3
ಮೂರಾವ ತಾರಿ
ಸಹಕಾರೋ | ಶ್ರೀ ಹನುಮಂತಾ | ತಾರಿಸೋ ಭವದಿಂದಾ 4
ರಜನೀಶ ಮೌಳಿ |
ನಿಜ ದೋರಿ ಎನ್ನ ಸಲಹಯ್ಯಾ 5
ಛಂದಾಗಿ ಸಲಹು
ತಂದೆ ಗುರು ಮಹಿಪತಿ ರಾಯಾ 6
ಇಂದು ನಮ್ಮನಿಯಲಿ
ಮುಂದಾಗಿ ನೀವು ವದಗೀರೇ 7
ಬನ್ನಿ ಭಾವಕಿಯರು ಮುನ್ನಿನಾಗುಣಬಿಟ್ಟು | ಅನ್ಯ ಕೆಲಸಕೆ
ತೊಡಗದೇ | ನೈವೇದ್ಯಕೀಗ | ಸನ್ನೆಲ್ಲಕ್ಕಿ ಮಾಡೀರೇ 8
ಸೇರಲಿ ಅನುಮಾನಾ
ತವಕದಿ ನೀವು ಕುಳ್ಳಿರೆ 9
ಉರ್ವಿಲಿ ನೀವು |
ಕುಟ್ಟರೆ | ಜ್ಞಾನ ವಿಜ್ಞಾನದಿ | ಮೆರ್ವ ವನರೆಯಾ ಧರಿಸೀಗಾ 10
ಅಮೃತ ನಾಮವಾ
ನೀವು ಬೆರೆಯಿರೇ 11
ಸಮಭಾವ ಯಾರಿಯಾ ಕ್ರಮಗೊಂಡು ಹಾಕುತಾ | ದಮಿಸಿ
ಕ್ರಮ ಈಡ್ಯಾಡಿ ಕುಟ್ಟಿರೆ 12
ಕೆಟ್ಟ ಹೊಟ್ಟವ ಹಾರಿಸಿ |
ಶುದ್ಧ ಅಕ್ಕಿಯ ನೆಟ್ಟನೆ ನೀವು ವಡಗೂಡೀ 13
ಏಕೋ ದೇವಗೆ ಅರ್ಪಿಸ |
ದಯದಿಂದ ದೇವ | ಬೇಕಾದ ಸುಖ ಕೊಡುವನು 14
ಸಾರಥಿ ಬಂಧು ಬಳಗವು ಯನಗಾಗಿ |
ಸಲಹುವಾ ನಮ್ಮ ಎಂದೆಂದು ಸಿಂಹಾದ್ರೀಶನು 15