ಶ್ರೀಮತೇ ಶ್ರೀ ಭಾಷ್ಯಕರಾಯನೇ
[ಮಾಮವ] ದೇವಾ ಕರುಣಿಸು ಮಹರಾಯನೇ ಪ
ಮಂತ್ರ ರಹಸ್ಯದಿ ಜ್ಞಾನ ತ್ರಯಂಗಳ
ನಿಂತು ನೀ ಕೃಪೆ ಮಾಡಿದೇ ಅ.ಪ
[ವರ]ತತ್ವದುಯ್ಯಾಲನಾಡಿದೆ
ಭರಗೈದು ಬಂದಿಲ್ಲಿ
ಪರತತ್ವವನು ಗೂಡಿದೇ 1
ಸಿರಿಮಾತೇ [ಮೂಲಕ]
ಹರಿಯಾಜ್ಞೆಯನುಗೊಂಡು
ಪರಮಭಕ್ತರಿಗೆಲ್ಲಾ ಪ್ರತ್ಯಕ್ಷವಾದಂಥಾ
ಪರಮಪದವಿ ಮಾಡಿದೇ 2
ಯದುಶೈಲವಾಸದೊಳಧಮರಾದವರಿಗೆ
ಸುಧೆಯ ಸುರಿದು ತೋರಿದೆ
ಸದುಪಾಯದಿಂ ಬಂದು ಸರ್ವಸ್ವತಂತ್ರದೊ
ಳಿದು ನೋಡೆನುತ ಸಾರಿದೆ 3
ಪರಕಾಲಗುರು ಸರ್ವತಿರುಮಳಿಶಯ್ಯಾಳ್ವಾರೆಂ
ಬೆರುಮಾನರಡಿಯಾದೆನೈ
ಗುರುಕುಲದೊಳಗೆನ್ನ ಕರೆದಿತ್ತ ಹರಿನಾಮ
ನುಡಿಯದೆ ನಾ ಹೋದೆನೈ 4
ಅದ್ವೈತ ಕುಲವನ್ನು ಪರಿಶೋಧಿಸಿ ಬಿಟ್ಟು ಶ್ರೀ
ಮದ್ರಾಮಾನುಜಾಚಾರ್ಯನೇ
ಮದ್ಗುರುವಾದ ಶ್ರೀತುಲಶೀರಾಮದಾಸ
[ರೈ ದಾಸಕುಲತೂರ್ಯರೈ] 4