ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(Iೂ) ಕ್ಷೇತ್ರ ವರ್ಣನೆ (1) ಶ್ರೀರಂಗ, ತಿರುಪತಿ, ಕಂಚಿ,ಮೇಲುಕೋಟೆ, ಹೆಜ್ಜಾಜಿ ಮಂಗಳವು ಶ್ರೀರಂಗ ಅಂಗನೆ ಮಣಿದೇವಿಗೆ ಪ ಅಂಗಿಯಾದ ಆದಿಶೇಷ ಉ- ತ್ತುಂಗ ವರ ವಿಭೀಷಣನಿಗೆ ಅ.ಪ ಸಪ್ತಗಿರಿ ಶ್ರೀನಿವಾಸ ಅಪ್ಪೀರ ಅಲರ್‍ಮೇಲಮ್ಮಗೆ ಗುಪ್ತವಾಗಿ ಉಭಯ ರಕ್ಷ ಸುಪ್ತ ಗೋವಿಂದರಾಜಗೆ 1 ಕಂಚಿ ವರದರಾಜನಿಗೆ ಮಂಚದ ಪೆರುನ್ದೇವಿಗೇ ಹೊಂಚಿ ಬ್ರಹ್ಮಯಜ್ಞದಲ್ಲಿ ಮಿಂಚುವ ದೇವರಾಜಗೇ 2 ಯದುಶೈಲ ಚೆಲ್ವರಾಯ ಮುದದಿ ಯದುಗಿರಿಯಮ್ಮಗೆ ಪಾದ ಸಂಪತ್ತೆ ಅದುಭುತರು ಯತಿರಾಜಗೆ 3 ಹೆಜ್ಜಾಜಿ ಕೇಶವನ ಪೀಠ ಅಜ್ಜ ಶ್ಯಾಮನ ವಿರಜೆಯಲ್ಲಿ ಮಜ್ಜನಗೈಸಿ ಸೇವೆಗಾಗಿ ಸಜ್ಜುಗೈದ ವೈಕುಂಠಕೆ 4
--------------
ಶಾಮಶರ್ಮರು
ಕೈಯ ತೋರಿದ ಬಗೆಯ, ಅಮ್ಮಮ್ಮ ಯಾದವಗಿರಿ ಕಲ್ಯಾಣಿ ನೀನು ಪ ವತ್ಸರ ಚೈತ್ರ ದ್ವಿತೀಯೇಕಾದಶಿಯೊಳುಪ್ರಕಟಿತಾ ಶುಕ್ರವಾರದೊಳು ತನ್ನಭಕುತರಿಗುತ್ಸಾಹ ಸಂಧ್ಯಕಾಲದೊಳು 1 ಕಡಗ ಕಂಕಣ ಗೀರುಗಂಧ ಮಿಗೆಕಡು ಚೆಲುವಿನ ಬಣ್ಣ ಕುಪ್ಪುಸದಿಂದನಡು ಬೆರಳುಂಗುರದಿಂದ ಕೈಯಬೆಡಗ ನೋಡಿದ ಜನರಿಗೆ ಪುಟ್ಟಿತಾನಂದ 2 ಜನರೆಲ್ಲ ಯದುಶೈಲೋತ್ಸವವ ಕೇಳಿಘನ ಕಾಲದೇಶದಜಿತ ಭಯವನಿಮಗೆ ಬಿನ್ನೈಪೆನು ನಯವ ಕೊಟ್ಟಮನೋಹರುಷದಿ ನಮಗಿತ್ತ ವೈಭವವ 3 ಚೆಲುವರಾಯನ ರಥೋತ್ಸವದೀ ತೀರ್ಥಕೊಲಿದು ಗಂಗಾದೇವಿ ಬರುವ ಸಂಭ್ರಮವನೆಲೆಯ ಸರ್ವರಿಗನುಭವವ ಕೋಟಿಮನೋಹರುಷವನ್ನು ನಮಗಿತ್ತ ವೈಭವವ 4 ನಿನ್ನ ಮೋಹದ ಕಂದ ನಾನೊ ಕೇಳೆನಿನ್ನೊಮ್ಮೆ ದಿವ್ಯ ಹಸ್ತಂಜವನೀವಚೆನ್ನಿಗ ವರದ ವೆಂಕಟಾದಿಕೇಶವನುತನ್ನ ನಂಬಿದ ಭಕ್ತರಾಶ್ರಿತ ಕಾಮಧೇನು 5
--------------
ಕನಕದಾಸ
ಮಾಧವ ನಮ್ಮ ಹೆ ಜ್ಜಾಜಿಯ ಚೆನ್ನಕೇಶವಾ ಪ ಸಾಜದಿ ಶರಣರಿಗೊಲಿವಾ ಸುರ ಭೂಜನು ಪರವಾಸುದೇವಾ ಅ.ಪ ಮರೆತವರಿಗೆ ಮತ್ತೂ ದೂರನು ಇವ ಮರೆಹೊಕ್ಕವರ ಮುಂದಿರುವನು ದುರಿತಗಳಡಗಿಸಿ ದಾಸರ ಪೊರೆವಾ ಪರಮದಯಾಳುವು ಪ್ರಭು ಶ್ರೀನಿಭವ 1 ನಿರ್ಜರ ಮುನಿಗಣ ಲೋಲಾ ಶೀಲಾ ಸಾರಥಿ ಲೀಲಾ ಪರ್ಜನ್ಯ ಪ್ರಭುಪರಿಪಾಲ ನೀಲಾ ದುರ್ಜನ ವಂಶಕ್ಕೆ ಕಾಲಾ 2 ನಿತ್ಯತಂದೆಯು ತಾಯಿಯು ಶ್ರೀರಂಗಾ ಸತ್ಯಸಹೋದರನು ವೆಂಕಟರಂಗಾ ಸ್ತುತ್ಯ ಬಂಧುವು ತಾನೆ ನರಸಿಂಗಾ ಇವ ಪ್ರತ್ಯಕ್ಷನೊ ಅಂತರಂಗ 3 ವೆಂಕಟವರದನೆ ಸದಯಾ ಗುರು ಸಂಕಟಹರ ಬಹುವಿನಯಾ ರಂಗ ಪಂಕಜಸಂಭವ ತನಯಾ 4 ಯಾದವ ಯದುಶೈಲಶೃಂಗಾ ಸಾಂಗ ಮಣಿ ಉತ್ತಮಾಂಗ [ವೇದ] ವೇದ್ಯನೆ ಗರುಡತುರಂಗಾ ಗಂಗಾ ಬಾದರಾಯಣ ಗೀತೋತ್ತುಂಗ 5 ಸಂಪಿಗೆ ಕಂಪಿನ ಸುಂದರ ಸಂಪೂರ್ಣ ಸಂಪತ್ಕುಮಾರ ಶ್ರೀ ಭೂನೀಳ ರಮಣ ತಂಪಿನ ಹೃದಯದ ಪ್ರಾಣಸೂತ್ರಾದಿ ಪೆಂಪಿನಗುರು ಶ್ರೀನಿವಾಸ ಕಲ್ಯಾಣ6 ರಾಘವಜಯ ಸೀತಾರಾಮಾ ಸ್ವಾಮಿ ರವಿಕುಲ ಸುಂದರಸೋಮ ಯೋಗಿ ಜನಾನಂದ ಧಾಮಾ ಪ್ರೇಮಪ್ರಿಯ ಶ್ರೀಶ್ಯಾಮ ಭಾಗವತಾನಂದಪ್ರಿಯ ಪುಣ್ಯನಾಮಾ ಚತು ಸಾಗರಾಂತ ಸಾರ್ವಭೌಮ 7 ಭಕ್ತಮಂಡಲಿ ಕಾಮಧೇನು ಜೇನು ವಿ ರಕ್ತ ಜನರ ಹೃದಯಭಾನು ಮುಕ್ತಿ ಬಯಸಿ ಬಂದೆ ನಾನು ಪ್ರೇಮಾ ಸಕ್ತಿ ಸಿದ್ದಿಯ ನೀಡು ನೀನು 8 ಸಕಲದೇವರೊಳೆಲ್ಲ ನೀನೇ ಹೆಚ್ಚು ಅಕಳಂಕ ಸಾಧುಗಳ ಸವಿಬೆಲ್ಲದಚ್ಚು ನಿಖಿಳಜೀವರೊಳೆಲ್ಲ ಪರಮಾತ್ಮನಚ್ಚು ಸುಕರದಿ ನೆನೆಯುವ ನನಗೆ ನಿನ್ನಯ ಹುಚ್ಚು 9 ಪರಿಪರಿ ಭವಸಂಸಾರಾ ಸಾರಾ ಹೊರಲಾಲೆ ದೂಡುವೆ ದೂರಾ ಪರಮಾತ್ಮಾ ಪದಗಳ ಸೇರಾ ಸಾರಿ ಕರೆಯಲು ಕರಗಳ ತೋರಾ 10 ರಾಜ ಜನಾರ್ಧನ ದಿವ್ಯಂ ದಿವ್ಯಂ ಜಾಜಿ ತುಲಸೀ ಮಾಲ ಭವ್ಯಂ ಯಾಜಿ ಕಮಂಡಲ ದ್ರವ್ಯಂ ಸ್ತವ್ಯಂ ಜನಗಾನ ಶ್ರೋತವ್ಯಂ 11 ಸರ್ವಲೋಕ ಶರಣ್ಯ ಗಣ್ಯ ಉರ್ವಿ ದೇವ ವರೇಣ್ಯ ಹಿರಣ್ಯ ಸ್ವರ್ಣ ವಿರ್ವತ ದರಶ್ಯಾಮ ಪುಣ್ಯ 12
--------------
ಶಾಮಶರ್ಮರು
ರಾಮಾನುಜಾಚಾರ್ಯ ಮೌನಿವರ್ಯ ನೇಮದಿಂದಲಿ ಗೈದೆ ನೀಂ ಸ್ವಾಮಿ ಕಾರ್ಯ ಪ ಆದಿಯೊಳು ನೀನಾದಿಶೇಷನು ಹರಿಶಯ್ಯೆ ಮೋದಕರ ಪ್ರಹ್ಲಾದ ಎಂದೆನಿಸಿದೆ ಸೋದರದಿ ಸೌಮಿತ್ರಿ ಸಂಕರ್ಷಣನು ಆದೆ ನಾಥ ಯಾಮಾನ ಪಥದಿ ಅರಿಗಳನು ಗೆಲ್ದೆ 1 ಗೀತ ಸೂತ್ರಕೆ ಭಾಷ್ಯಕಾರ ನೀನಾಗಿರುವೆ ಖ್ಯಾತಿಸಿದೆ ವ್ಯಾಸ ಪರಾಶರರ ಹೆಸರ ಪೂತ ಆಳುವಾರುಗಳ ಶ್ರೀಸೂಕ್ತಿ ಪ್ರಕಟಿಸಿದೆ ಮಾತೆವೊಲು ಉಭಯವೇದಗಳ ಪೊರೆದೆ 2 ನೂರೆಂಟು ತಿರುಪತಿಯ ಯಾತ್ರೆಗಳ ಮಾಡುತ್ತ ದಾರಿತೋರಿದೆ ಹರಿಯ ಸೇವಿಸುವ ಪರಿಯ ಪರಮಾರ್ಥಿಕರಾಗಿ ಪರಮವೈಷ್ಣವರಿರಲು ಸಾರಸುಖ ಪದತೋರ್ದೆ ಯತಿಸಾರ್ವಭೌಮ 3 ಎಂದೆಂದು ಮರೆಯದ ಕೂರೇಶರಾ ಸಖ್ಯ ಅಂದು ಬೋಧೆಯ ಕೊಟ್ಟ ಪೂರ್ಣಾರ್ಯರ ನೊಂದಕಾಲವ ನೆನೆದು ಕಣ್ಣೀರ ಕರೆಯುವೆನು ತಂದೆ ಗುರುವಿನ ಗುರುವೆ ದೇವಮಾನ್ಯ 4 ಯಾದವನ ಚೋಳನ ಕೃತ್ರಿಮದ ಕೋಟೆಗಳು ಮಾಧವನ ಡೆಲ್ಲಿಯಿಂ ಕರೆತಂದುದು ಬಾಧಿಸದೆ ಬ್ರಹ್ಮಪೀಡೆಗಳು ಓಡಿದುದು ಈ ಧರೆಯ ಕೀರ್ತಿಗೆ ಮೊದಲಾದವು 5 ರಾಮಚಂದ್ರನ ಕಾಡವಾಸವಂ ನೆನಪೀವ ಸ್ವಾಮಿಯರು ಗಿರಿಸೇರ್ದ ಗುರಿ ಎಲ್ಲವೂ ತಾಮಸರು ಸಾವಿರರ ಒಂದೆ ವಾರದಿ ಗೆಲ್ದ ಮಾಮೈಮೆ ಯಾರಿಗಿದೆ ಭೋಗಿರಾಜಾ 6 ಸಿರಿರಂಗ ತಿರುಪತಿ ಕಂಚಿ ಯದುಶೈಲಗಳ ಪರಮಪದಕೂ ಮಿಗಿಲು ವೈಭವವ ಗೈದೆ ನಿರುತ ತಮ್ಮವರಿಂಗೆ ಸಕಲ ಪಾಪವ ಸುಟ್ಟು ಹರಿಯ ಭರವಸೆ ಪಡೆದೆ ಮೋಕ್ಷ ಕೊಡುವಂತೆ 7 ನಿನ್ನಂತೆ ನಡೆವ ಪ್ರಪನ್ನರೇ ಧನ್ಯರು ಮನ್ನಣೆಯ ಪಡೆದಿರವ ಶ್ರೀಮಂತರು ಎನ್ನ ಬಿನ್ನಪ ಕೇಳಿ ನಿನ್ನವನ ಮಾಡಿಕೋ ಮೂರ್ತಿ ಜಾಜೀಶ ಕೀರ್ತಿ 8
--------------
ಶಾಮಶರ್ಮರು
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು
ಶ್ರೀಮತೇ ಶ್ರೀ ಭಾಷ್ಯಕರಾಯನೇ [ಮಾಮವ] ದೇವಾ ಕರುಣಿಸು ಮಹರಾಯನೇ ಪ ಮಂತ್ರ ರಹಸ್ಯದಿ ಜ್ಞಾನ ತ್ರಯಂಗಳ ನಿಂತು ನೀ ಕೃಪೆ ಮಾಡಿದೇ ಅ.ಪ [ವರ]ತತ್ವದುಯ್ಯಾಲನಾಡಿದೆ ಭರಗೈದು ಬಂದಿಲ್ಲಿ ಪರತತ್ವವನು ಗೂಡಿದೇ 1 ಸಿರಿಮಾತೇ [ಮೂಲಕ] ಹರಿಯಾಜ್ಞೆಯನುಗೊಂಡು ಪರಮಭಕ್ತರಿಗೆಲ್ಲಾ ಪ್ರತ್ಯಕ್ಷವಾದಂಥಾ ಪರಮಪದವಿ ಮಾಡಿದೇ 2 ಯದುಶೈಲವಾಸದೊಳಧಮರಾದವರಿಗೆ ಸುಧೆಯ ಸುರಿದು ತೋರಿದೆ ಸದುಪಾಯದಿಂ ಬಂದು ಸರ್ವಸ್ವತಂತ್ರದೊ ಳಿದು ನೋಡೆನುತ ಸಾರಿದೆ 3 ಪರಕಾಲಗುರು ಸರ್ವತಿರುಮಳಿಶಯ್ಯಾಳ್ವಾರೆಂ ಬೆರುಮಾನರಡಿಯಾದೆನೈ ಗುರುಕುಲದೊಳಗೆನ್ನ ಕರೆದಿತ್ತ ಹರಿನಾಮ ನುಡಿಯದೆ ನಾ ಹೋದೆನೈ 4 ಅದ್ವೈತ ಕುಲವನ್ನು ಪರಿಶೋಧಿಸಿ ಬಿಟ್ಟು ಶ್ರೀ ಮದ್ರಾಮಾನುಜಾಚಾರ್ಯನೇ ಮದ್ಗುರುವಾದ ಶ್ರೀತುಲಶೀರಾಮದಾಸ [ರೈ ದಾಸಕುಲತೂರ್ಯರೈ] 4
--------------
ಚನ್ನಪಟ್ಟಣದ ಅಹೋಬಲದಾಸರು