ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕ ಭರಿತನೊ ರಂಗಾನೇಕಚರಿತನೊ ಪ. ಕಾಕುಜನರ ಮುರಿದು ತನ್ನಏಕಾಂತಭಕ್ತರ ಪೊರೆವ ಕೃಷ್ಣ ಅ.ಪ. ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-ರಾಜಸುತನುಯೀತನೇ ಸಭಾಪೂಜ್ಯನೆಂದು ಮನ್ನಿಸಿದನಾಗ 1 ಮಿಕ್ಕನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ2 ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲುಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ 3 ಉತ್ತರೆಯ ಗರ್ಭದಲ್ಲಿ ಸುತ್ತಮುತ್ತಿದಸ್ತ್ರವನ್ನುಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ4 ತನ್ನ ಸೇವಕಜನರಿಗೊಲಿದು ಉನ್ನಂತ ಉಡುಪಿಯಲ್ಲಿ ನಿಂತುಘನ್ನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ 5
--------------
ವಾದಿರಾಜ