ಪಾಲಿಸು ಶ್ರೀಹರಿಯೆ ಯದುಭೂಮಿಪತಿಯೆ ಪ
ಬಾಲಾರ್ಕ ಸಮಮುಖ ಲೋಲ ಮುರಳೀಧರ ಅ.ಪ.
ನಂದ ನಂದನ ದಿವ್ಯ ಸುಂದರ ರೂಪನೆ
ಬಂಧುರಾಲಕ ವರ ಮಂದಹಾಸನೆ 1
ಗೋಪ ಸುಂದರೀಗಣ ದೀಪವಿರಾಜಿತ
ತಾಪಿಂಛ ಪಲ್ಲವ ನೂಪುರ ಶೋಭಿತ2
ಕಾಳೀಯ ಮರ್ದನ ನೀಲಾಂಬುದ ಪ್ರಭ
ನಾಳೀಕಾನನ ಚಿತ ಲೋಲಾಕ್ಷಿ ಚಿತ್ತನೆ3
ಭವ ಭಂಗ ಮಾನುಷ ವೇಷ
ಶೃಂಗಾರ ಶೋಭಿತ ಭೃಂಗಾಲಕಾರ್ಚಿತ 4
ಧೇನುನಗರ ದೊರೆ ಸಾನುರಾಗದಿ ಪೊರೆ
ಗಾನ ವಿನೋದ ಹರೆ ಭಾನುಸನ್ನಿಭ ಶೌರೆ 5