ಬಾರೋ ಬಾರೋ ಬಾರೋ ರಂಗಾ | ಬಾರೋ ಶುಭಾಂಗಾ|
ವರಶೌರಿ ಪರೋಪರಿದೋರ್ವಲೀಲೆ |
ವೀರ ದೀರ ಶೂರುದಾರಿ ವಾರಿಜಾರಿ ವಂಶಜಾ ಪ
ಉತ್ಸಹದಗೆ ತ್ಯಾವಿನಾ | ವತ್ಸವ ಗಾಯಿದೇ ಪ್ರಾಣಾ |
ಪರ ಸಂಹಾರಾ | ಮತ್ಸ್ಯಾವ ತಾರಾ |
ಸಿರಿ ವತ್ಸ ಚಿತ್ಸ್ವರೂಪನೇ 1
ಕಾಯಜಕೋಟಿ ಲಾವಣ್ಯಾ | ಕಯಾದು ಸುತಪಾಲನಾ |
ತ್ರಯಭುವನ ವ್ಯಾಪಕಾ | ತೃಯಾಕ್ಷ ಸಖಾ |
ದಯ ತೋಯಧಿ ಶ್ರೀ ಯದುನಾಯಕನೇ |
ತೋಯಜಾಯತಾಕ್ಷಾಕ್ಷಯ ಪಯಧೀಯ ವಾಸನೇ 2
ಮಂದಮತಿಯೆಂದು ನೋಡೋ | ಕುಂದನನಾರಿಸಬ್ಯಾಡೋ |
ಬಂದು ಕೊಡೋ ಮಹಿಪತಿಯಾ | ನಂದನ ಪ್ರಿಯಾ |
ಎಂದೆಂದಿಗೆ ಸದ್ವಂದ ರಕ್ಷಕ ಶ್ರೀ -
ನಂದ ಕಂದ ಇಂದಿರೇಶಾನಂದನೀವಾ ನಂದನೆ 3