ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(Iೂ) ಕ್ಷೇತ್ರ ವರ್ಣನೆ (1) ಶ್ರೀರಂಗ, ತಿರುಪತಿ, ಕಂಚಿ,ಮೇಲುಕೋಟೆ, ಹೆಜ್ಜಾಜಿ ಮಂಗಳವು ಶ್ರೀರಂಗ ಅಂಗನೆ ಮಣಿದೇವಿಗೆ ಪ ಅಂಗಿಯಾದ ಆದಿಶೇಷ ಉ- ತ್ತುಂಗ ವರ ವಿಭೀಷಣನಿಗೆ ಅ.ಪ ಸಪ್ತಗಿರಿ ಶ್ರೀನಿವಾಸ ಅಪ್ಪೀರ ಅಲರ್‍ಮೇಲಮ್ಮಗೆ ಗುಪ್ತವಾಗಿ ಉಭಯ ರಕ್ಷ ಸುಪ್ತ ಗೋವಿಂದರಾಜಗೆ 1 ಕಂಚಿ ವರದರಾಜನಿಗೆ ಮಂಚದ ಪೆರುನ್ದೇವಿಗೇ ಹೊಂಚಿ ಬ್ರಹ್ಮಯಜ್ಞದಲ್ಲಿ ಮಿಂಚುವ ದೇವರಾಜಗೇ 2 ಯದುಶೈಲ ಚೆಲ್ವರಾಯ ಮುದದಿ ಯದುಗಿರಿಯಮ್ಮಗೆ ಪಾದ ಸಂಪತ್ತೆ ಅದುಭುತರು ಯತಿರಾಜಗೆ 3 ಹೆಜ್ಜಾಜಿ ಕೇಶವನ ಪೀಠ ಅಜ್ಜ ಶ್ಯಾಮನ ವಿರಜೆಯಲ್ಲಿ ಮಜ್ಜನಗೈಸಿ ಸೇವೆಗಾಗಿ ಸಜ್ಜುಗೈದ ವೈಕುಂಠಕೆ 4
--------------
ಶಾಮಶರ್ಮರು
ಬಾರೋ ಗುರು ರಾಘವೇಂದ್ರ ಸದ್ಗುಣಸಾಂದ್ರ ಪ ಬಾರೋ ಸದ್ಗುರುವರ ಸಾರಿದ ಸುಜನರ ಘೋರ ದುರಿತವ ತರಿದು ಕರುಣದಿ ಸಾರ ಸೌಖ್ಯವಗರಿದು ಪೊರಿಯಲು ಅ.ಪ ಸೂರಿಜನಾಲಂಕೃತ ಸುರಪುರದಿ ವಿಠ್ಠ ಲಾರ್ಯರಿಂದಲಿ ಪೂಜಿತ ಯದುಗಿರಿಯ ಕ್ಷೇತ್ರಾಗಾರನೆಂದೆನಿಸಿ ನಿರುತ ಭಜಕರನು ಪೊರೆಯುತ ಸೇವೆಯನುಕೊಳ್ಳುತ ತುರಗವನೇರಿ ಮೆರೆಯುತ1 ಭಕ್ತ್ಯಾದಿ ಫಲವೀವಂಥ ಗುರುವರನೆ ನಿಮ್ಮಯ ಸ್ತೋತ್ರ ಪಠಣವ ಮಾಡುತ್ತ ಅನವರತ ಭಜ- ನಾಸಕ್ತ ಜನರ ಕಾಮಿತ ನಾ ಕೊಡುವೆನೆನುತ ಮತ್ತೆ ಎಡಬಲದಲ್ಲಿ ದ್ವಿಜಕೃತ ಛತ್ರಚಾಮರ ವ್ಯಜನ ಸೇವಾ ನೃತ್ಯಗಾಯನ ವೈಭವದಿ ವರ ಹಸ್ತಿವಾಹನ ವೇರಿ ಮೆರೆಯುತ 2 ಇಳಿಸುರರೊಳು ಪ್ರಖ್ಯಾತ ಲಿಂಗೇರಿ ಭೀಮಾ ಹೊಳಿಯ ಸ್ಥಾನಕೆ ಬಂದಂಥ ಯದುಗಿರಿಯ ದ್ವಿಜವರ ಗೊಲಿದರ್ಚನಿಯ ಗೊಂಬಂಥ ಶರ್ವಾದಿವಿನುತ ಚಲುವ ಪ್ರಾಣನಾಥನ ಜಲಜಯುಗ ಸನ್ನಿಧಿ ಯೊಳನುದಿನ ಪೊಳೆವ ವೃಂದಾವನದಿ ಭಕುತರಿ ಗೊಲಿದು ಪೊರೆಯಲು ಕುಳಿತ ಯತಿವರ 3 ನಂದತೀರ್ಥರ ಸುಮತ ಸಿಂಧುವಿಗೆ ಪೂರ್ಣ ಚಂದ್ರರೆಂದೆನಿಸಿ ದಂಥಾ ಕರ್ಮಂದಿವರ್ಯನೆ ದುರಿತ ಘನಮಾರುತ ವಂದೆ ಮನದಲಿ ಬಂದು ನಿಮ್ಮಡಿ ದ್ವಂದ್ವವನು ಶೇವಿಸುವ ಶರಣರ ವೃಂದವನು ಪಾಲಿಸಲು ಸುಂದರಸ್ಯಂದನ- ವೇರುತಲಿ ವಿಭವದಿ 4 ನೀರಜಾಸನ ವರಬಲದಿ ಸಮರಾರೆನುತ ಬಂ- ಗಾರ ಕಶ್ಯಪ ಪೂರ್ವದಿ ಪ್ರಹ್ಲಾದ ರಾಜಕು ಮಾರ ನಿನ್ನೊಳು ವೈರದಿ ಹರಿಯನ್ನು ಜವದಿ ಚಾರು ಕೃಷ್ಣಾ ತೀರಕಾರ್ಪರ ನಾರಸಿಂಹನ ಸ್ತಂಭದಿಂದಲಿ ತೋರಿಸಿದ ಗುರು ಸಾರ್ವಭೌಮನೆ 5
--------------
ಕಾರ್ಪರ ನರಹರಿದಾಸರು
ಮೇಲುಕೋಟೆ ಯದುಗಿರಿವಾಸ ನಾರಾಯಣ ಯದುಗಿರಿವಾಸ ಪ ಯದುಗಿರಿವಾಸನೆ ಬುಧಜನಪೋಷನೆ ಮದಮುಖಶಿಕ್ಷನೆ ಪದುಮದಳಾಕ್ಷನೆ ಅ.ಪ ವೇದವ ತಂದು ಅಜನಿಗಿತ್ತು ಭಾರವ ಪೊತ್ತು ಕೃತಯುಗದೊಳಗೆ ವೇದಾದ್ರಿಯೆಂದೆನಿಸಿದೆ ಚತುರ್ಮುಖನಲಿ ಪೂಜೆ ಗ್ರಹಿಸಿದ ನಾರಾಯಣ 1 ನಿಗಮವ ತಂದು ಮನುವಿಗಿತ್ತು ಕಂಬದಿಂ ಬಂದು ತ್ರೇತಾಯುಗದಲ್ಲಿ ನಾರಾಯಣಗಿರಿಯೆನಿಸಿದೆ ಸನಕಾದಿಗಳ ಪೂಜೆ ಗ್ರಹಿಸಿದ ನಾರಾಯಣ 2 ದಾನವ ಬೇಡಿ ಕ್ಷತ್ರಿಯರ ಕುಲವನೀಡಾಡಿ ದ್ವಾಪರಯುಗದಲ್ಲಿ ಯದುಗಿರಿಯೆನಿಸಿದೆ ರಾಮ ಕೃಷ್ಣರ ಪೂಜೆ ಗ್ರಹಿಸಿದ ನಾರಾಯಣ 3 ಜಾನಕಿಯ ತಂದು ಅತಿದುರುಳ ಕಂಸನ ಕೊಂದು ಕಲಿಯುಗದೊಳಗೆ ಶ್ರೀ ಯತಿಶೈಲವೆನಿಸಿದೆ ಯತಿರಾಜರಿಗೆ ಒಲಿದ ಪತಿತಪಾವನ ಸ್ವಾಮಿ 4 ಹಯವನುಹತ್ತಿ ನಾರಯಣ ದುಷ್ಟಕಲಿಯ ನೀನೊತ್ತಿ ಸಪ್ತದ್ವೀಪವನೆಲ್ಲ ಸುತ್ತಿ ಬಂದೆಯೊ ಎನ್ನಪ್ಪ ನಿನ್ನೆಣೆಕಾಣೆ ಕಂದರ್ಪನಪಿತ ಚೆಲ್ವಯದುಗಿರಿವಾಸ 5
--------------
ಯದುಗಿರಿಯಮ್ಮ