ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಠ್ಠಲನ ಮಂತ್ರ ಜಪಿಸೋ ಎಲೆ ಮನವೆ ಕುಟಿಲವನು ಕಳೆದು ಬಲು ಕುಶಲತನವೀವದು ಪ ಆಗಮ ಸಿದ್ಧಾಂತದಲ್ಲಿ ಪೊಳೆವ ಮಂತ್ರ ಯೋಗಿಗಳ ಮನಕೆ ಬಲು ಸೌಮ್ಯ ಮಂತ್ರ ಸಾಗರವು ಮಥಿಸಲು ಉದಿಸಿ ಪೊರೆದ ಮಂತ್ರ ಯೋಗಿಗಳು ನೆನೆದರೆ ಸವಿಯಾದ ಮಂತ್ರ 1 ಸುಧಾಮಗೆ ವೊಲಿದು ಸೌಭಾಗ್ಯವಿತ್ತ ಮಂತ್ರ ಕದನದೊಳು ಫಲ್ಗುಣನ ಕಾಯಿದ ಮಂತ್ರ ಮಧುರಾಮೃತವಾಗಿ ಜಿಹ್ವೆಗೆ ಒಪ್ಪುವ ಮಂತ್ರ ಯದುಕುಲಾಗ್ರಣಿಯಾದ ವಿಶ್ವಮಂತ್ರ 2 ಹಾರೈಸಿದವರಿಗೆ ವರವನೀವ ಮಂತ್ರ ಕಾರುಣ್ಯನಿಧಿ ವಿಜಯವಿಠ್ಠಲರೇಯನ್ನ ಮಂತ್ರ ಸೇರಿದವರನ್ನ ಬಿಡದೆ ಪೊರೆವ ಮಂತ್ರ 3
--------------
ವಿಜಯದಾಸ