ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನವು ಇದ್ದರೆ ಸಾಕು ಜನರಿಗೆ ಧನವು ಇದ್ದರೆ ಸಾಕು ಪ ಧನದೋರದಾತಗೆ ಗುಣವಿಲ್ಲವನುದಿನ ಧನವಿಲ್ಲದಾತನು ವನದ ಪಾಮರನು ಅ.ಪ ತಂದೆ ತಾಯಿಗಳಿಲ್ಲ ಬಂಧುಬಾಂಧವರಿಲ್ಲ ಹಿಂದುಮುಂದುದಿಸಿದ ತಮ್ಮಂದಿರನೊಲ್ಲ 1 ಒಡವೆಯುಳ್ಳಾತಗೆ ನಡೆಯಬಾರದು ಕಾಲು ನಡೆವಾಗ ಬಡವರ ಎಡವುತ್ತ ಕಾಣನು 2 ಅರ್ಥವ ಪುಂಜಕನರ್ಥ ಯಥಾರ್ಥವು ಧೂರ್ತನಾದರು ತಾನು ಕೀರ್ತಿಸಿಕೊಂಬನು 3 ಸೆಡವೆಂಬ ಪುತ್ರನು ಒಡಲೊಳು ಜನಿಸುವ ಮಡದಿ ಗರ್ವಿತೆಯಾಗಿ ಪಿಡಿದಳು ಕರವನು 4 ಉತ್ತಮೋತ್ತಮನಾಗಿ ಅಧಮನುತ್ತಮನಪ್ಪ ಮೃತ್ಯುಮಾನಿನಿ ವ್ಯರ್ಥ ಮಗನ ಪಡೆಯುವಳು 5 ಉಡಿಗೆ ಆಭರಣಕ್ಕೆ ನುಡಿಯಬಾರದು ಬಾಯಿ ಕಿಡಿಯಿಡೆ ಕಂಗಳು ಜಡದ ಕರ್ಣಗಳು 6 ಕಟ್ಟಲು ಅರ್ಥವ ಹೊಟ್ಟೆಯೊಳು ಹಸುವಿಲ್ಲ ಭ್ರಷ್ಟ ಅನಾಥರ ಶ್ರೇಷ್ಠ ಸೃಷ್ಟಿಯೊಳಾತ 7 ಬಡಮನಸಾಗಿಯೆ ನುಡಿಯ ಬಂದವನೊಳು ಸಡಗರದಿಂದಲೆ ಸೆಡಕ ತೋರುವನು 8 ಅರಸು ಆತನ ಕಂಡು ಕರೆಸಿ ಉಚಿತವಿತ್ತು ಸರಸವನಾಡಿ ವಿಹರಿಸುತ್ತಲಿಹನು 9 ಫಣಿಗಿರಿಯೊಳು ನಿಂತ ವರಾಹತಿಮ್ಮಪ್ಪನು ಹಣವನಿತ್ತವರಿಗೆ ಉಣಿಸುವಭೀಷ್ಟವ 10
--------------
ವರಹತಿಮ್ಮಪ್ಪ
ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ಹರಿನಾಮವ ಬಹಳ ವಿಸ್ತರಿಸಿ ಪ ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ ಚನ್ನಕೇಶವ ರಾಯನೆಂದೆಂಬ ನಾಮ ಉನ್ನತವಾಗಿಹ ನಾರಾಯಣ ನಾಮ ಮಾಧವ ನಾಮವ 1 ಅಂತರಂಗದಿ ಗೋವಿಂದನ ನಾಮವ ಸಿರಿ ನಾಮವ ಸಂತತ ಮಧುಸೂದನನೆಂಬ ನಾಮವ ಪಂಥವಿಡಿದು ತ್ರಿವಿಕ್ರಮ ನಾಮವ 2 ಅನುದಿನ ವಾಮನ ನಾಮವ ವನಜಾಕ್ಷ ಶ್ರೀಧರ ಗುಣ ನಾಮವ ವಿನಯದಿ ಹೃಷಿಕೇಶನೆನುತಿಹ ನಾಮವ ತನುವಾದ ಪದುಮನಾಭನ ನಾಮವ 3 ಅಂದದೊಳು ಧರಿಸಿರುವ ದಾಮೋದರ ನಾಮ ಚಂದದಿ ವಾಸುದೇವನ ನಾಮವ ಕುಂದದೆ ಸಂಕರ್ಷಣನೆಂಬ ನಾಮವ ಬಂಧನ ಪರಿಹಾರ ಪ್ರದ್ಯುಮ್ನ ನಾಮವ 4 ಅರ್ಥಿಯಿಂದಲೆ ಅನಿರುದ್ಧನ ನಾಮವ ಉತ್ತಮ ಪುರುಷೋತ್ತಮ ನಾಮವ ಭಕ್ತಿಯಿಂದಲೆ ಅಧೋಕ್ಷಜನೆಂಬ ನಾಮವ ಮೃತ್ಯುವು ಕಾಣದ ನರಹರಿ ನಾಮವ 5 ಅಚ್ಯುತ ನಾಮವ ನಿಶ್ಚಯಿಸಿ ಜನಾರ್ದನ ನಾಮವ ಬಚ್ಚಿಡಬೇಡ ಉಪೇಂದ್ರನ ನಾಮವ ಸಿರಿ ನಾಮವ 6 ದುಷ್ಟನಿಗ್ರಹವಾದ ಕೃಷ್ಣನ ನಾಮವ ಬೆಟ್ಟದ ವರಾಹತಿಮ್ಮಪ್ಪನ ನಾಮವ ಅನುದಿನ ಘನ ನಾಮವ ಸೃಷ್ಟಿಯೊಳು ಉತ್ತಮ ಸ್ಮಾರ್ತನೆ ವೈಷ್ಣವ 7
--------------
ವರಹತಿಮ್ಮಪ್ಪ