ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಚ ಕವಚದೊಳು ಬ್ರಹ್ಮಾಸ್ತ್ರ ವಜ್ರ ವಜ್ರ ವಜ್ರ ವಜ್ರ ಕವಚ 1 ಬಗಳಾದೇಹವ ತನ್ನದು ಮಾಡುವುದೇ ವಜ್ರ ಕವಚಬಗಳಳಾಗಿ ತಾನಿರುವುದೇ ವಜ್ರಕವಚಬಗಳಾ ಒಳಹೊರಗೆ ಒಂದಾಗಿಹುದೇ ವಜ್ರಕವಚಬಗಳೆ ನಿಜವಾಗಿ ಒಲಿದಿಹುದೇ ವಜ್ರಕವಚ 2 ನಾರಾಯಣ ಕವಚ ಶಿವಕವಚ ಶಕ್ತಿಕವಚಸೂರ್ಯ ಕವಚ ಎಲ್ಲ ದೇವ ಕವಚಕಾರಣಾತ್ಮಕ ಚಿದಾನಂದ ಬಗಳ ಕವಚಆರ ಯತ್ನವು ನಡೆಯದಿಹುದದು ವಜ್ರಕವಚ3
--------------
ಚಿದಾನಂದ ಅವಧೂತರು
ಇಂದು ನಿನ್ನಪಾದ ಸನ್ನಿಧಿಯ ಘನ್ನ ದರುಶನದಿಂದಲಿಪ ಮುನ್ನ ದುರಿತಗಳೆಲ್ಲವು ಛಿನ್ನಛಿನ್ನವುಮಾಡಿ ಬನ್ನಬಡಿಸದೆ ಎಮ್ಮ ಸಲಹುವಸ್ವಾಮಿ ಅ.ಪ ಸುಮನಸರೊಡೆಯ ಕಾಲನಾಮಕನಾಗಿಪ್ಪ ಮೋದ ನಾಮ ವತ್ಸರದಿ ವಿಮ¯ ಚೈತ್ರಕೃಷ್ಣಪಕ್ಷದಶಮಿ ಸೌಮ್ಯವಾಸರದಿ ದ್ಯುಮಣಿ ಉದಯಕಾಲದಲಿ ಮಮಕುಲಸ್ವಾಮಿಯೆ ಎನ್ನ ವಂಶಜಾಪ್ತರ ಅಮಿತಶ್ರಮ ಪರಿಹರಿಸಿ ಈಗ ಶ್ರೀಮನೋಹರ ನಿನ್ನ ವಿಶ್ವರೂಪವ ತೋರ್ದೆ ಪ್ರೇಮ ಇಂದಿಗೆ ಆಯಿತೆ ಅಮಿತಜನ ಬಂಧು 1 ನಿನ್ನ ದರುಶನವೆಂದಿಗಂದಿಗಾಗಲಿ ಎಂದು ನಿನ್ನ ಧ್ಯಾನವನೆ ಮಾಡಲು ಸನ್ನುತಾಂಗನೆ ನೀನೆ ಘನ್ನ ಕರುಣವು ಮಾಡಿ ಎನ್ನ ಯತ್ನವು ಇಲ್ಲದೆ ನಿನ್ನ ದರುಶನಕ್ಕಾಗಿ ಅನ್ಯರಿಂದ ಪ್ರೇರಿಸಿ ಎನ್ನಲ್ಲಿ ಮನವು ಪುಟ್ಟಿಸಿದೆ ಪನ್ನಗಾಚಲನಿಲಯ ನಿನ್ನ ಮಹಿಮೆ ಎಂತುಂಟೋ ಎನ್ನನಿಲ್ಲಿಗೆ ತಂದು ಘನ್ನ ದರುಶನವಿತ್ತೆ 2 ಪಂಕಜೋದ್ಭವನಯ್ಯ ಮಂಕುಕವಿಸಿದೆ ಪಯಣ ಶಂಕೆಯ ಪರಿಹರಿಸಿ ಸಂಕಟಹರಿಸಿ ನಿನ್ನ ಕಿಂಕರರೊಳು ಸೇರಿಸಿ ಬಿಂಕದಲಿ ಗಿರಿಯನೇರಿಸಿ ಪಂಕಜನಾಭ ಮುಕುಂದ ಗೋವಿಂದ ಶಂಕರನುತಪೂಜಿತ ಶಂಖತೂರ್ಯಾದಿ ವಾದ್ಯಗಳಿಂದಲಿ ಶ್ರೀ ವೇಂಕಟೇಶ ನಿನ್ನ ನೋಡಿದೆ ಬಿಡದೇ 3
--------------
ಉರಗಾದ್ರಿವಾಸವಿಠಲದಾಸರು
ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ ಪ. ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ. ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ ಮೊರೆಬೀಳಲಿನ್ನಾರಿಗೆ ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ ಸರಿಯೆ ನಿನಗಿದು ಕೊರಗಿಸುವುದು ಜರಿದು ಬಳಲುವೆ ಧರೆಯೊಳೀಗ ನಾ ಸುರರ ರಕ್ಷಕ ಪರಮಪಾವನ ಕರವ ಮುಗಿವೆ ದರುಶನವ ನೀಡೊ 1 ನೀನಲ್ಲದೆ ಇನ್ನು | ನಾನಾರ ಭಜಿಸಲೊ ಗಾನವಿಲೋಲ ಹರಿ ಕಾನನದೊಳು ಕಣ್ಣು ಕಾಣದಂತಾಗಿದೆ ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ ಮಾನ ಪ್ರಾಣ ಶರೀರ ನಿನ್ನದೊ ನಾನು ಅನ್ಯರ ಭಜಿಸಲಾರೆನೊ ಹೀನಬುದ್ಧಿಯ ಬಿಡಿಸಿ ಗುರುಗಳ ಧ್ಯಾನವೆನಗಿತ್ತು ನೀನು ಕಾಯೊ 2 ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು ಇನ್ನು ಕರುಣವಿಲ್ಲವೆ ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ ನಿನ್ನ ಮನಸು ಕರಗಲಿನ್ನೇನಗೈಯ್ಯಲೊ ಎನ್ನ ಯತ್ನವು ವ್ಯರ್ಥವಾಯಿತು ಇನ್ನು ನೀ ದಯೆಗೆಯ್ಯಬೇಕೊ ಮುನ್ನ ಮಾಡಿದ ತಪ್ಪನೆಣಿಸದೆ ಎನ್ನ ದೃಷ್ಟಿಗೆ ನಿನ್ನ ತೋರೊ 3 ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ ಶರಧಿ ಅಮೃತ ಸುರರಿಗಿತ್ತೆ ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ ಕ್ಷಿತಿಯನಾಳ್ವರ ಹತವಗೈಸಿದೆ ಕ್ಷಿತಿಸುತೆಯ ಪ್ರೇಮದಲಿ ತಂದೆ ಹಿತದಿ ಪಾಂಡವ ಸುತರ ಕಾಯ್ದೆ ವ್ರತವ ಕೆಡಿಸಿ ಕಲಿಹತವಗೈದೆ 4 ಕಂತು ಜನಕನೆ ನಿನಗೆ ನ್ನಂತರ ತಿಳಿಯದೇನೋ ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ ಶಾಂತರೂಪವ ಎನ್ನ ಅಂತರಂಗದಿ ತೋರೊ ಚಿಂತಿತಾರ್ಥ ಪಂಥಗಾರನೆ ಎಂತು ದಿನಗಳು ಸಂದು ಹೋದುವೊ ಸಂತತಾನಂದನಂತಶಯನ 5
--------------
ಅಂಬಾಬಾಯಿ
ನೀ ಬುದ್ಧಿ ಕೊಡದಿರಲು ಮನುಜ ಪಶುವೊ ಜೀವ ಪಶುವೊ ಪ ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ಅ.ಪ ಜಡಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು ಒಡೆಯಾ ನಮ್ಮೆತ್ನವೇ ಸತ್ಯ ಪೇಳೊ ಕಡುನಿದ್ರೆಯಲಿ ಜೀವ ನಿಶ್ಚೇತನಾಗಿರಲು ಬಿಡದೆ ದಿನದಿನದಲ್ಲಿ ಎಚ್ಚರಿಕೆ ಯಾರಿಂದ 1 ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆ ಸೃಷ್ಟಿ ಸ್ಥಿತಿ ಲಯ ಕರ್ತ ನೀನೆ ತಿಳಿಯೊ ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾನಿರಲು ಸೃಷ್ಟಿಯಲಿ ನಮ್ಮೆತ್ನ ಕಲ್ಪಿಸುವುದುಂಟೆ 2 ಇಂತಿರಲು ನಿಜತತ್ವ ಎಂಥ ಶಕ್ತಿಯು ನಮಗೆ ಸ್ವಾಂತ ಮಂಗಳ ಸುಗುಣ ನಿಧಿಯೆ ಪೇಳೊ ಭ್ರಾಂತಿ ಜೀವನ ಬಿಡಿಸಿ ಜಯೇಶವಿಠಲ ಶಾಂತಿ ಪಾಲಿಸು ನಮಗೆ ಅಂತರಾತ್ಮಕ ದೇವ3
--------------
ಜಯೇಶವಿಠಲ
ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ಪ. ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ಅ.ಪ. ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿವತನ ಕೆಡುವ ಪ್ರಯತ್ನವು ಬರಲಿ 1 ಸತಿ ಭಾರ ಸಮರ್ಪಿಸಲಿವಿರಸಮಾಡಿ ಮನೆ ಮುರಿಸುತ ಬರಲಿ 2 ಮಾನಮಾಡದಿರಲಿ ಜನರಪಮಾನ ಮಾಡಿ ನಗಲಿಜ್ಞಾನಹೀನನೆಂದೆನುತ ನಿಂದಿಸಲಿಶ್ರೀನಿಧಿ ಗೋಪಾಲವಿಠಲ ಬೆರಿಲಿ 3
--------------
ಗೋಪಾಲದಾಸರು
ಲಾವಣಿ ಖೋಡಿಮನಸು ಇದು ಓಡಿ ಹೋಗುತದಬೇಡೆಂದರು ಕೇಳದು ಹರಿಯೆಜೋಡಿಸಿ ಕೈಗಳ ಬೇಡಿಕೊಂಬೆ ದಯಮಾಡಿಹಿಡಿದು ಕೊಡು ನರಹರಿಯೆ ಪ ಗಾಡಿಕಾರ ನಿನ್ನ ಮೋಡಿಯ ಮೂರ್ತಿಯಕೂಡಿಸಿ ಪೂಜಿಸಲಘ ಹರಿಯೆದೂಡುತ ಹೃದಯದ ಗೂಡಿನೊಳಗೆ ಸ್ಥಿರ ಮಾಡಲು ಹದವನು ನಾನರಿಯೆನೋಡಿಂದ್ರಿಯಗಳ ತೀಡಬಲ್ಲೆ ಮನತೀಡುವ ಯತ್ನವು ಬರೆಬರೆಯೆಬೇಡಬೇಡವೆಂದಾಡುವೆನೆ ನಿನ್ನನೋಡುವುದೆಂತೈ ಜಗದೊರೆಯೆಕೋಡಗನಂತಿದು ಕಿಡಿಗೇಡಿ ಜಿಗಿದಾಡಿ ಪೋಗುವುದು ತ್ವರೆಮಾಡಿಕೂಡಿಸದದು ಬಹುಕಾಡಿ ದಿಟಿಸ್ಯಾಡಿ ನೋಡಲದು ಅಡನಾಡಿಕಾಡಿಕಾಡಿ ಬಲು ಪೀಡಿಸುತಿರುವದುಕಾಡುವುದೇನಿದು ಈ ಪರಿಯಾಜೋಡಿಸಿ ಕೈಗಳ 1 ತುಣುಕು ತುಣುಕು ಮನಸು ಇದು ಕ್ಷಣದೊಳು ಹಿಡಿವುದುತಿಣಿಕಿ ತಿಣಿಕಿ ಗಡ ಇದನ್ಹಿಡಿಯೆ ಹೆಣಗಲ್ಯಾತಕೆಂದು ಗೊಣಗುತಿಹರುಜನ ಗುಣ ಗೊತ್ತಿತ್ತಿಲ್ಲಿದೆ ಗುಣ ಖಣಿಯೆಗುಣರಹಿತನೆ ನಿನ್ನ ಗುಣ ನಾಮಂಗಳನೆಣಿಸುತೆ ನಾಲಗೆ ತಾದಣಿಯೆ ಟೊಣೆದು ನಿಮ್ಮನು ಕ್ಷಣಕ್ಷಣಕೊಂದುಕಣಕೆ ಹಾರುವುದು ಸುರಧರಣಿಯೆಇಣಚಿಹಾಂಗೆ ಚಪಲವೋಧಣಿಯೆಅಣಕಿಸಿದ್ಹಾಂಗ ಕುಣಿಕುಣಿಯೆಬಣಗು ಜನರು ನಮಗದು ಹೊಣಿಯೆಒಣ ಮಾತಿದು ಕೇಳ್ ನಿರ್ಗುಣಿಯೆಮಣಿಯದು ದಣಿಯದು ಹಣಿಯದು ತಣಿಯದುಟೊಣಿಯಲು ನಿನ್ನದು ಅದರಣಿಯೆ 2 ಸ್ಪಷ್ಟ ಹೇಳುವೆನು ಚೇಷ್ಟೆಗಳದರದುಯ ಥೇಷ್ಟವಾಗಿ ಕಣಾ ಕಣಾಶಿಷ್ಯರನೆಲ್ಲಾ ಭ್ರಷ್ಟ ಮಾಡುವುದು ದೃಷ್ಟಿ ಇಂದೊಂದೇ ಕಾರಣಎಷ್ಟು ಮಾತ್ರಕಿವರಿಷ್ಟ ನಡೆಸದಿಂದಿಷ್ಟೇ ಇದರದು ಧೋರಣಾಕಷ್ಟದಿ ಹಿಡಿದಿಟ್ಟ ಅಷ್ಟು ಇಂದಿಯಕಿದೆದುಷ್ಟರುಪದೇಶದ ಪ್ರೇರಣಾನಷ್ಟಮಾಡೋ ಈ ಚೇಷ್ಟೆಗುಣ ಸುಪುಷ್ಟ ಮತಿಯ ಕೊಡೊ ಪೂರಣಮುಷ್ಠಿಯೊಳಗಿಸೊ ತನುಹರಣಸೃಷ್ಟಿಸ್ಥಿತಿಲಯ ಕಾರಣಸೃಷ್ಟಿಯೊಳಗೆ ಉತ್ಕøಷ್ಟ ಗದುಗಿನಶ್ರೇಷ್ಠ ವೀರನಾರಾಯಣ 3
--------------
ವೀರನಾರಾಯಣ
ಶ್ರೀ ಗುರುಕರುಣವು ಸೋಜಿಗವು ಕೌತುಕವು ಧ್ರುವ ಗುರುಹಸ್ತ ಪರುಷಸದೃಶ ನಿದರುಶÀದೋರುತಿಹ್ಯ ಅಗಣಿತ ತೇಜೋಮಯ ಪ್ರಕಾಶ ಇದು ಅನಿಮಿಷ ನೇತ್ರಲಿ ನೋಡುವದು ನೋಡುವದು ಘನ ಮಹಿಮೆಯೊಳು ಬೆರದಾಡುವದು ಬೆರದಾಡುವದು ತನ್ನೊಳು ತಾ ನಲಿದಾಡುವದು ನಲಿದಾಡುವದು ಅನುಭವ ಸುಖ ಸೂರ್ಯಾಡಿ ಸದ್ಗತಿ ಮುಕ್ತಿಯನೆ ಪಡೆವದು ಶ್ರೀಗುರುದಾಸರು 1 ಗುರುವುಪದೇಶ ಜ್ಞಾನಪ್ರಕಾಶ ಅತಿಸಂತೋಷ ಛೇದಿಸುವುದು ಭವಪಾಶ ಇದು ನಿದ್ರಸ್ಯ ಕರ್ನಲಿ ಕೇಳ್ವದು ನಿದ್ರಸ್ಯ ಕರ್ನಲಿ ಕೇಳ್ವದು ಲಯ ಲೀಲೆಯೊಳು ಆಲಿಸುವದು ಆಲಿಸುವದು ಪರಿಪರಿ ಶ್ರುತಿಗ್ಹೇಳೆನಿಸುವದು ಹೇಳೆನಿಸುವದು ಪತಿತಜೀವನ ಪಾವನಗೈಸುವದು ಸದ್ಗುರು ಮಹಿಮೆಯ ತಿಳಿಯದು ತಿಳಿಯದೀ ಶ್ರೀಗುರು ದಾಸರು 2 ಗುರು ನಿಜಬೋಧ ಬಲು ಅಗಾಧ ಪರಮ ಆಹ್ಲಾದ ತಿಳಿದವ ಜನ್ಮಕ ವಿರಹಿತವಾದ ಇದು ಅತಿಸೂಕ್ಷ್ಮಗತಿ ಭೇದಿಸುವದು ಭೇದಿಸುವದು ಗುರುಪಾದವೆಗತಿ ನಿಶ್ಚೈಸುವದು ನಿಶ್ಚೈಸುವದು ಸಮ್ಯಕಙÁ್ಞನವು ಸಾಧಿಸಿ ಆತ್ಮದಿ ಜೀವನ್ಮುಕ್ತನಾಗುವದು ಸದ್ಗುರು ಪಾದವು ಸಾಧಿಸಿ ಸಾಧಿಸಿ ಶ್ರೀಗುರುದಾಸರು 3 ಗುರುಕೃಪೆಜ್ಞಾನನ ಅಳಿವುದಙÁ್ಞನ ತಿಳಿವದು ಯಾತನ ಕಳೆವದು ಜನ್ಮ ಜರಾಮರಣ ಇದು ಪೂರ್ವ ಕಲ್ಪನೆಯು ಕಲ್ಪನೆಯು ಆತ್ಮಙÁ್ಞನದ ವರ್ತನೆಯು ವರ್ತನೆಯು ಸಾಯಸವಳಿದು ಯತ್ನವು ಪ್ರಯತ್ನವು ಶ್ರೀಗುರು ಭಕ್ತಿಯು ಮಾಡಿರಯ್ಯ ಮಾಡಿರಯ್ಯ ಸದ್ಗುರುದಾಸರು4 ಗುರುಙÁ್ಞನ ದೀಕ್ಷಾ ಕರುಣಾ ಕಟಾಕ್ಷ ಸದ್ಗತಿಮೋಕ್ಷ ತೋರುತಿಹ್ಯ ಗುರುತಾನೆ ಪ್ರತ್ಯಕ್ಷ ಇದು ಭಾಸ್ಕರ ಗುರು ಕೃಪಾದೃಷ್ಟಿಯು ಅಮೃತದ ದೃಷ್ಟಿಯು ಜೀವನ ಸಂತುಷ್ಟಿಯು ಮುರಿಯಿತು ಮಹಿಪತಿ ಹುಟ್ಟುವ ಹೊಂದುವ ಬಟ್ಟೆಯು ತ್ರಾಹಿ ತ್ರಾಹಿ ಗುರುನಾಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು