ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೇಲುಕೋಟೆ ಯದುಗಿರಿವಾಸ ನಾರಾಯಣ ಯದುಗಿರಿವಾಸ ಪ ಯದುಗಿರಿವಾಸನೆ ಬುಧಜನಪೋಷನೆ ಮದಮುಖಶಿಕ್ಷನೆ ಪದುಮದಳಾಕ್ಷನೆ ಅ.ಪ ವೇದವ ತಂದು ಅಜನಿಗಿತ್ತು ಭಾರವ ಪೊತ್ತು ಕೃತಯುಗದೊಳಗೆ ವೇದಾದ್ರಿಯೆಂದೆನಿಸಿದೆ ಚತುರ್ಮುಖನಲಿ ಪೂಜೆ ಗ್ರಹಿಸಿದ ನಾರಾಯಣ 1 ನಿಗಮವ ತಂದು ಮನುವಿಗಿತ್ತು ಕಂಬದಿಂ ಬಂದು ತ್ರೇತಾಯುಗದಲ್ಲಿ ನಾರಾಯಣಗಿರಿಯೆನಿಸಿದೆ ಸನಕಾದಿಗಳ ಪೂಜೆ ಗ್ರಹಿಸಿದ ನಾರಾಯಣ 2 ದಾನವ ಬೇಡಿ ಕ್ಷತ್ರಿಯರ ಕುಲವನೀಡಾಡಿ ದ್ವಾಪರಯುಗದಲ್ಲಿ ಯದುಗಿರಿಯೆನಿಸಿದೆ ರಾಮ ಕೃಷ್ಣರ ಪೂಜೆ ಗ್ರಹಿಸಿದ ನಾರಾಯಣ 3 ಜಾನಕಿಯ ತಂದು ಅತಿದುರುಳ ಕಂಸನ ಕೊಂದು ಕಲಿಯುಗದೊಳಗೆ ಶ್ರೀ ಯತಿಶೈಲವೆನಿಸಿದೆ ಯತಿರಾಜರಿಗೆ ಒಲಿದ ಪತಿತಪಾವನ ಸ್ವಾಮಿ 4 ಹಯವನುಹತ್ತಿ ನಾರಯಣ ದುಷ್ಟಕಲಿಯ ನೀನೊತ್ತಿ ಸಪ್ತದ್ವೀಪವನೆಲ್ಲ ಸುತ್ತಿ ಬಂದೆಯೊ ಎನ್ನಪ್ಪ ನಿನ್ನೆಣೆಕಾಣೆ ಕಂದರ್ಪನಪಿತ ಚೆಲ್ವಯದುಗಿರಿವಾಸ 5
--------------
ಯದುಗಿರಿಯಮ್ಮ