ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನ್ಯಧನ್ಯನೊ ಶ್ರೀ ಗುರುರಾಯಾಧನ್ಯ ಶ್ರೀ ರಾಘವೇಂದ್ರ ಯತಿವರ್ಯಾ ಪ ವೀಣಾಪಾಣಿಯ ಆಣತಿಯಂತೆಮಾಣದೆ ಸನ್ಯಾಸವ ಗ್ರಹಿಸಿದೆವೇಣುಗೋಪಾಲನು ತಪದ ಕಾಣಿಕೆಗೆಕಾಣಿಸಿಕೊಂಡನೆ ಓ ಮಾರಾಯಾ 1 ಕರ ಕಮಲಾಸಂಜಾತನೆಏಸು ಜನ್ಮದ ಸುಕೃತವೊ ಜೀಯಾ 2 ಉನ್ನತ ಗದುಗಿನ ವೀರನಾರಾಯಣಸನ್ನಿಧಿಯೊಳು ನರಸಿಂಹನೆದುರಿನಲಿಸನ್ನಿಹಿತನು ನೀನಾಗಿ ಕುಳಿತೆಯೋಆದರಿಸಿನ್ನು ಸಲಿಸಲು ನಿನ್ನ ಭಕ್ತಿಯಾ 3
--------------
ವೀರನಾರಾಯಣ
ನಾಲಗೆ ಬರದಯ್ಯಾ ಶ್ರೀ ಗುರುವರರಾಯಾಪಾಲಿಸೆನ್ನೊಳು ನಿನ್ನ ಪೂರ್ಣದಯ ಪ ನಾಲಿಗೆ ಮತಿಗಳು ತಡೆದು ನಿಂತಿಹವಯ್ಯಮೇಲು ನಿಮ್ಮಯ್ಯ ನಾಮಾ ನಾ ಪೇಳೆನೆಂದರೆ ಅ.ಪ. ಕಥೆಯ ಕಟ್ಟಿದೆ ನಾಟಕ ಪದ್ಯವ ರಚಿಸಿದೆನೆಂಬಿ ಹೆಮ್ಮೆಯೊಳಿದ್ದೆ ಯತಿರಾಯಾನಿನ್ನ ಸುಚರಿತೆಯ ಕಥಿಸಲುಗತಿಕಾಣದೆ ನಿಂತು ಬಾಯ್ಬಿಡುವೆ ಪೊರೆಯಯ್ಯಾ 1 ಪಾದ ತುತಿಸುವೆನೆಂದರೆ 2 ಸ್ಮರಿಸುವೆ ಮನದೊಳು ನಿರುತದಿ ಯತಿವರ್ಯಾಶ್ರೀ ರಾಘವೇಂದ್ರರಾಯಾಧರೆಯೊಳು ಪರಮ ದಾನಿಗಳ ಹಿರಿಯನೆಂದುಅರಿತು ನಾ ಬಂದೆನೊ ಮೂಕನಾಗಿರುವೆನೊ 3 ಮನದೊಳಗಿರುತಿರ್ದ ಭಕುತಿ ಭಾವಗಳುಏನಿತೆಂಬುದನು ನೀನೇ ನೋಡಿಮನಸಿನಭೀಷ್ಟವನಿತ್ತು ಕಾಯುವದಯ್ಯಾಮನದೊಳು ನೆನೆಯುವೆ ಹೊರಗಾಡಲಾರದೆ 4 ಕರುಣಾಳು ಗದುಗಿನ ವೀರನಾರಾಯಣಹರನೆ ಕಳುಹಿಸಿದನೆಂದು ನಾನಿಲ್ಲಿ ಬಂದೇವರ ನಿನ್ನ ಚರಣವೂ ದೊರೆಯೆ ನಾ ತುತಿಸಲುಸರಿಯಾದ ನುಡುಗಳ ಕರುಣಿಸು 5
--------------
ವೀರನಾರಾಯಣ
ಬೋಧ ಭಾನು ಬರುತೈದನೆ ನಾದ ವಿನೋದವೆಂಬ ಈಕೋಳಿಯು ಕೂಗುತೈತವರನೀಕ್ಷಿಸೆ ಸತ್ಕರುಣಾ ಕಟಾಕ್ಷದಿಂಏಳಯ್ಯ ಗುರುವರ್ಯ ಏಳಯ್ಯ ಗುರುವರ್ಯ ಯತಿಜನಾಲಂಕಾರಪಏಳು ಭಕ್ತಾಧಾರ ಯಮನಿಯಮ ಸಂಚಾರಏಳು ವಿದ್ವದ್ವರ್ಯ ಪರಮಹಂಸಾಚಾರ್ಯ ಏಳು ಗೋಪಾಲ ಯತಿವರ್ಯಾ ಸ್ವಾಮಿಅ.ಪಆಧಾರ ಮಣಿಪೂರ ಹೃದಯ ಕಮಲಗಳಲ್ಲಿನಾದ ಬಿಂದು ಕಲೆಗಳೆಂಬರುಣನುದುಸಿದಬೋಧೆಯೆಂಬರ್ಕನಾವಿರ್ಭವಿಸಿದನು ಸಹಸ್ರಾರ ಕಮಲದ ತುದಿಯಲಿವೇದವೇದ್ಯಾನಂತಮಹಿಮ ಚಿನ್ಮಯರೂಪನಾದಸೌಖ್ಯಾಕಾರ ಕಲಿ ಕಲ್ಮಷವಿದೂರಆದಿಮಧ್ಯಾಂತರಹಿತಾನಂದ ನಿತ್ಯನಿಜಬೋಧನೊಲಿದುಪ್ಪವಡಿಸಾ ಸ್ವಾಮೀ1ನಿತ್ಯವೆ ನಿಮ್ಮ ಪದವೆಂದಜಾಂಡವನಿದನನಿತ್ಯವೆಂದಖಿಳ ವಿಷಯಗಳಲಿ ವಿರತರಾಗಿಅತ್ಯಂತ ಶಮ ದಮಾದಿಗಳೆಂಬ ಸಾಧನದಿ ಮುಕ್ತಿ ಸುಖವನು ಬಯಸುತಾಪ್ರತ್ಯಕ್ಷರ ಬ್ರಹ್ಮರೈಕ್ಯವರಿಯದೆ ವಿದುಗಳತ್ಯಂತ ತ್ವರೆುಂದ ನಿಮ್ಮ ಮುಖಕಮಲದಿಂತತ್ವಮಸಿ ವಾಕ್ಯದರ್ಥವ ತಿಳಿಯಬೇಕೆಂದು ನೃತ್ಯವನು ಮಾಡುತಿಹರೂ ಸ್ವಾಮಿ 2ದೇಹೇಂದ್ರಿಯಾಂತರಂಗವನೇತಿಗಳಿದು ಸಂದೇಹದಲಿ ಕೂಟಸ್ಥ ನೀನೆಂಬುದರಿಯದೆಮಹಾ ವಿಚಾರಿಸಿ ಭಕ್ತ ಸುಲಭನೆ ದಾಟಿಸೈ ಮೋಹಸಾಗರವನೆನುತಾಪಾಹಿ ನೊಂದೆವು ಸಂಸ್ಕøತಿಯ ಬಂಧದಲಿ ನಮ್ಮಬೇಹುದೈಪಾಲಿಸಲು ಯೋಗನಿದ್ರೆಯ ಬಿಟ್ಟುದಾಹರಿಸು ವೇದಾಂತಗೋಪ್ಯವನೆನುತ ನತಸಮೂಹ ಕಾದಿದೆ ಕೃಪಾಳು ಸ್ವಾಮಿ 3ಕೇಳಿ ಭಕುತರ ದೈನ್ಯ ಸಲ್ಲಾಪಗಳನಿಂತುಲೀಲಾವತಾರ ಗುರುರಾಯನೊಲಿದೆದ್ದವರಲಾಲಿಸುತ ಧನ್ಯರಾದಿರಿ ಸನ್ಮತಿಯೊಳಿಂತು ಮೇಳಾಪವಾುತೆನುತಾಬಾಲರಿರ ನಿಮ್ಮನಂತಃಕರಣದ ಧ್ಯಾನಜಾಲಸುತ್ತಿರಲಾಗಿ ನಿಮ್ಮ ನಿಜವನು ಮರೆದುಕಾಲಕರ್ಮಾಧೀನವಾಗಿ ನೊಂದಿರಸತ್ಯವೀ ಲೋಕವೆಂದರಿಯದೆ ಎನಲು ಗುರುವೇ 4ಜೀವೇಶ್ವರರ ವಾಚ್ಯ ಲಕ್ಷ್ಯಾರ್ಥವನು ನಿಚ್ಚ ಭಾವಿಸುತ ಬ್ರಹ್ಮ ಕೂಟಸ್ಥರೆಂದವರಿಗೆ ಸ್ವಭಾವದಿಂ ಭೇದವಿಲ್ಲೌಪಾಧಿಕವಿದೆಂದು ಸಾವಧಾನದಲಿ ತಿಳಿದೂನಾವೆ ಪರಿಪೂರ್ಣಾತ್ಮರೆಂದು ಬೋಧಾಮೃತವಸೇವಿಸಿದಡನುದಿನಂ ಕೃತಕೃತ್ಯರಹಿರೆನಲ್‍ದೇವ ಕೃತಕೃತ್ಯರಾದೆವು ನಮೋ ಎನುತ ಸ್ವಭಾವ ಪದದಲಿನಿಂದರೂ ಸ್ವಾಮೀ 5
--------------
ಗೋಪಾಲಾರ್ಯರು
ಶ್ರೀವೇದವ್ಯಾಸತೀರ್ಥರು ನಮಿಸುವೆನು ನಮಿಸುವೆನು ಮುನಿವರ್ಯರೇ ಪ ಅಮಮ ನಿಮ್ಮಯ ಮಹಿಮೆಯ ಪೊಗಳಲೆನ್ನಳವೇ ಅ.ಪ. ಭಾವ ಬೋಧಾರ್ಯ ವಿಮಲ ಸತ್ಕರಜಾತಭಾವಿ ಬೊಮ್ಮನ ಮತದಿ ಪೂರ್ಣ ವಿಖ್ಯಾತಧಾವಿಸಿ ನಿಮ್ಮಡಿಗೆ ಓವಿ ನಮಿಪರ ತ್ರಾತಕಾವುದೆಮ್ಮನು ಬಿಡದೆ ಪಾವಮಾನಿಯ ಪ್ರೀತ 1 ಇಂದ್ರಗ ವರಜನಾಮ ಮಂದವಾಹಿನಿ ತಟದಿಚೆಂದುಳ್ಳ ಮಹತೆನಿಪ ವೃಂದಾವನದೊಳು |ಇಂದಿರೇ ರಮಣ ಶಿರಿ ರಾಮಚಂದ್ರನ ಮನದಿಛಂದಾಗಿ ಧ್ಯಾನಿಸುತ ನಿಂದ ಯತಿವರ್ಯಾ 2 ಮೋದ ಮುನಿ ಸದ್ಭಾವ ಬೋಧಿಸುತ ಶಿಷ್ಯರಿಗೆವೇದ ವ್ಯಾಸರ ಪ್ರೀತಿ ಆದರದಿ ಗಳಿಸೀ |ಮೋದ ದಾಯಕನೆನಿಸಿ ಸಾಧುಗಳ ಸಲಹುತ್ತಸಾಧಿಸಿದೆ ಸತ್ಕೀರ್ತಿ ರಾಜ ಸನ್ಮಾನ್ಯ 3 ತಿಮಿರ ಪಾದ ನೀ ತೋರೊ ಮುನಿಪ 4 ಬ್ರಹ್ಮಚರ್ಯಾಖ್ಯ ಮಹ ಮಹಿಮೆ ಪರಿಕಿಸಲು |ಸನ್ಮನದಿ ನೃಪನೆನ್ನ ನಿಮ್ಮ ಕೌಪೀನವಾ |ಒಮ್ಮನದಿ ಅಗ್ನಿಗಿಡೆ ದಹಿಸಲಾರದೆ ಪೋದಸನ್ಮಹಿಮ ವೇದೇಶ ಸನ್ನುತನೆ ಪೊರೆಯೋ 5 ಹರಿಭಕ್ತ ಸುರತರುವೆ ವರ ಸು ಚಿಂತಾಮಣಿಯೆಪರಮ ಸೇವಾಸಕ್ತ ಶರಣ ಸುರಧೇನು |ಹರಿಯ ಸರ್ವೋತ್ತಮತೆ ಸ್ಥಿರ ಪಡಿಸೆ ಸಂಚರಿಸಿಮೆರೆದ ವೇದವ್ಯಾಸ ತೀರ್ಥ ಸದ್ದಭಿಧಾ 6 ಘನಗಿರಿ ನರಹರಿಯ ಪದವನುಜ ಸಂಜಾತಮಿನುಗುತಿಹ ವಾಮನಾ ನದಿಯ ಸಂಗಮದಿಗುಣಪೂರ್ಣನಾದ ಗುರು ಗೋವಿಂದ ವಿಠ್ಠಲನ |ಮನದಿ ಧ್ಯಾನಾಸಕ್ತ ಪೊರೆಮಹ ವಿರಕ್ತ 7
--------------
ಗುರುಗೋವಿಂದವಿಠಲರು
ಸ್ಮರಿಸಿ ಬೇಡುವೆನು ನಾ ಹೇ ಗುರು ಸಾರ್ವಭೌಮಾ ಪ ನಿರುತ ನೀ ಪೊರೆ ಎನ್ನ ವಾದಿಗಜಸಿಂಹ ಅ.ಪ. ದಿತಿಸುತಗೆ ಸುತನೆನಿಸಿ | ಅತಿಮುದದಿ ಸುರಮುನಿಯ ಮತ ಹಿಡಿದು ಹರಿಯ ಮಹಿಮೆ ಪಿತಗೆ ಪೇಳಿ ಪತಿಯ ಸ್ತಂಭದಿ ಕರೆದ ಪ್ರಹ್ಲಾದ ರಾಜ 1 ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ | ಭೂಮಿ ಪಾಲಗೊದಗಿರ್ದ ಕುಹು ಯೋಗ ಬಿಡಿಸಿ ಖೂಳ ಮಾಯಳ ಜಯಿಸಿ ಚಂದ್ರಿಕಾ ಗ್ರಂಥವನು ಪೇಳಿ ಹರಿಪೀಠವೇರಿದ ವ್ಯಾಸರಾಜ 2 ಕಾಮರಿಪುನುತ ಮೂಲರಾಮ ಪದಯುಗ ಕುಮುದ ಸೋಮನೆನಿಸುವ ಭಕ್ತಸ್ತೊಮಕ್ಕೆಲ್ಲ ನೇಮದಿಂದಲಿ ವಿವಿಧ ಕಾಮಿತಾರ್ಥ ಸ್ಫುಟತ ಗಾತ್ರ ಪಾವನ ಚರಿತ್ರ 3 ಶಾಂತತೆಯ ಪೊಂದಿ ಮಂತ್ರಾಲಯದಿ ವೃಂದಾವ ನಾಂತರದೊಳಿರುತ ಸಿರಿಕಾಂತ ಹರಿಯಾ ಚಿಂತಿಸುತಲಿಹ ಸರ್ವತಂತ್ರ ಸ್ವತಂತ್ರ ಕರು ಣಾಂತರಂಗನೆ ರಾಘವೇಂದ್ರ ಯತಿವರ್ಯಾ 4 ಮೂಕ ಬಧಿರಾಂಧತ್ವಗಳ ಪೊಂದಿ ಧರಣಿಯೊಳು ವ್ಯಾಕುಲವ ಪಡುವವರನುದ್ಧರಿಸುತ ನಾಕಪತಿವಿನುತ ಜಗನ್ನಾಥವಿಠಲನ ಮಧುಪ ನೀ ಕೊಟ್ಟು ಸಲಹೆನ್ನಭೀಷ್ಟ ಸಮುದಾಯ 5 ಇತರ ಯತಿವರೇಣ್ಯರ ಸ್ತೋತ್ರ
--------------
ಜಗನ್ನಾಥದಾಸರು