ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯತಿವರೇಣ್ಯರ ಮನುಜ ಸತತ ಭಜಿಸೆಲೊ ಪ ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ ಅ.ಪ ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ 1 ವಾಸುದೇವ ನಾಮದಿಂದ ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ 2 ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ3 ನರಿಯುತಕುತಿಗಳಿಂದ ಬೋಧಿಪ ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ4 ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ 5 ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ 6 ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ ಸಾರ ಪೇಳಿದ 7 ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ ವರ ಕರುಣವ ಪಡೆಯುವುದೇ ನಿರತ ಸುಖಕೆ ಪಥವೆಂದರುಹಿದ 8 ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ ನಿರತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂದ ಪ್ರಸನ್ನರಾದ 9
--------------
ವಿದ್ಯಾಪ್ರಸನ್ನತೀರ್ಥರು
ವೇದನಿಧಿ ಹರಿ ವಿಠಲ | ಕಾದುಕೋ ಇವಳಾ ಪ ಮೋದತೀರ್ಥರ ಮತದಿ | ರಾಜಿಸುತ್ತಿಹಳಾ ಅ.ಪ. ವಾದೀಭ ಕೇಸರಿಯು | ವಾದಿರಾಜರು ಮತ್ತೆವೇದವೇದ್ಯರ ಕಂಡು | ಶುಭಸ್ವಪ್ನದೊಳಗೇಭೋದವಗದೆ ಸಾಗಿ | ವೇದನಿಧಿಗಳ ಹಸ್ತಸಾದರದಿ ಅಕ್ಷತೆಯು | ಪುಷ್ವ ಸ್ವೀಕಾರವು 1 ಯತಿವರೇಣ್ಯರ ಕರುಣಾ | ಸತತವಿರಲೀಕೇಗೇಪತಿಸುತರು ಹಿರಿಯಾ | ಹಿತಸೇವೆಯಲ್ಲೀಮತಿಯ ಕರುಣಿಸಿ ನಿನ್ನ | ವ್ಯಾಪ್ತತ್ವ ತಿಳಿಸೀಅತಿಶಯದ ಸೇವೆಯಿಂ | ಉದ್ದಿರಿಸೊ ಇವಳಾ 2 ಸುರರು ನರರೊಳಗೆಲ್ಲ | ತರತಮಾತ್ಮಕರೆಂಬ ವರಸುಜ್ಞಾನವ ಕೊಟ್ಟುಕಾಪಾಡೊ ಹರಿಯೇಗುರು ಭಕ್ತಿ ಹರಿಭಕ್ತಿ | ಪರಮ ಸಾದನವೆಂಬಅರಿವನೇ ನೀಡುವುದು | ಗರುಡ ಧ್ವಜಾತ್ಮ 3 ಧರ್ಮಮಾರ್ಗದಲಿರಿಸಿ | ಪೇರ್ಮೆಯಲಿ ಪೊರೆ ಇವಳಾಭರ್ಮಗರ್ಭನ ಪಿತನೆ | ನಿರ್ಮಾತೃ ಜಗಕೇನಿರ್ಮಮದ ಸಾದನೆಯ | ಮರ್ಮವನೆ ಅರುಹುತ್ತಕರ್ಮನಾಮಕ ಹರಿಯೆ | ಕಾಪಾಡೊ ಇವಳಾ 4 ಭವ ಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸ್ಮರಿಸಿ ಬೇಡುವೆನು ನಾ ಹೇ ಗುರು ಸಾರ್ವಭೌಮಾ ಪ ನಿರುತ ನೀ ಪೊರೆ ಎನ್ನ ವಾದಿಗಜಸಿಂಹ ಅ.ಪ. ದಿತಿಸುತಗೆ ಸುತನೆನಿಸಿ | ಅತಿಮುದದಿ ಸುರಮುನಿಯ ಮತ ಹಿಡಿದು ಹರಿಯ ಮಹಿಮೆ ಪಿತಗೆ ಪೇಳಿ ಪತಿಯ ಸ್ತಂಭದಿ ಕರೆದ ಪ್ರಹ್ಲಾದ ರಾಜ 1 ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ | ಭೂಮಿ ಪಾಲಗೊದಗಿರ್ದ ಕುಹು ಯೋಗ ಬಿಡಿಸಿ ಖೂಳ ಮಾಯಳ ಜಯಿಸಿ ಚಂದ್ರಿಕಾ ಗ್ರಂಥವನು ಪೇಳಿ ಹರಿಪೀಠವೇರಿದ ವ್ಯಾಸರಾಜ 2 ಕಾಮರಿಪುನುತ ಮೂಲರಾಮ ಪದಯುಗ ಕುಮುದ ಸೋಮನೆನಿಸುವ ಭಕ್ತಸ್ತೊಮಕ್ಕೆಲ್ಲ ನೇಮದಿಂದಲಿ ವಿವಿಧ ಕಾಮಿತಾರ್ಥ ಸ್ಫುಟತ ಗಾತ್ರ ಪಾವನ ಚರಿತ್ರ 3 ಶಾಂತತೆಯ ಪೊಂದಿ ಮಂತ್ರಾಲಯದಿ ವೃಂದಾವ ನಾಂತರದೊಳಿರುತ ಸಿರಿಕಾಂತ ಹರಿಯಾ ಚಿಂತಿಸುತಲಿಹ ಸರ್ವತಂತ್ರ ಸ್ವತಂತ್ರ ಕರು ಣಾಂತರಂಗನೆ ರಾಘವೇಂದ್ರ ಯತಿವರ್ಯಾ 4 ಮೂಕ ಬಧಿರಾಂಧತ್ವಗಳ ಪೊಂದಿ ಧರಣಿಯೊಳು ವ್ಯಾಕುಲವ ಪಡುವವರನುದ್ಧರಿಸುತ ನಾಕಪತಿವಿನುತ ಜಗನ್ನಾಥವಿಠಲನ ಮಧುಪ ನೀ ಕೊಟ್ಟು ಸಲಹೆನ್ನಭೀಷ್ಟ ಸಮುದಾಯ 5 ಇತರ ಯತಿವರೇಣ್ಯರ ಸ್ತೋತ್ರ
--------------
ಜಗನ್ನಾಥದಾಸರು