ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನೊ ನಿನ್ನ ಅಂಬುಜನಯನ ಕೃ ಪಾಂಬುಧೆ ದೃಢದಲಿ ಪ ಸಂಭ್ರಮದಲಿ ಕಿವಿ ತುಂಬುತಿರುವ ಆ ಡಂಬರ ವಚನಕೆ ಮುಂಬರಗೊಳ್ಳುತ ಅ.ಪ ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ ವಿಲ್ಲದೆ ಬಿಗಿಯುತಿರುವ ಮಾಯಾ ಪಾಶವ ತೊರೆಯಲಳವೆ ಜೀಯಾ ನಿನ್ನಯ ದಯವ ಪಡೆದ ಪರಿಯನರುಹುವ ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ ಸಾರಗಳನು ಸಂತತ ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು ಷ್ಟ ವಿಷಯಗಳಲಿ ಮತಿಯನು ಮುರಿಯುವಂತೆ ಕರುಣಿಸೋ ಸುಗುಣಾಲಯ 1 ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ ಸುಜನ ಮಿತ್ರ ಸುರವರ ಸರಸಿಜಭವ ಪುತ್ರ ರುಚಿರರ ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು ಅರಿತೆನೆಂದು ತಿಳಿದು ಮೆರೆಯುತಲಿರುವ ನರರ ಮದವ ಮುರಿದು ದೈನ್ಯದಿಂದಲಿ ಮರೆತೆನೆಂದು ದಿನದಿನದಲಿ ಭಜಿಪರ ಪೊರೆವ ಪರಮ ಕರುಣಾರಸಮಯನೆ 2 ದೀನಭಕುತರನ್ನು ಪೊರೆಯುವ ದಾಸಿಯೆಂದು ನಿನ್ನ ಪೊಗಳುವ ಮಾನತತಿಗಳನ್ನು ಸಂತತ ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ ಜಾನಕೀಶ ತವ ಪಾದಕಮಲದ ರೇಣುವನ್ನು ಶಿರದಿ ಧರಿಸುತಲಿ ಅನು ಮಾನವನ್ನು ತೊರೆದು ಮುದದಿ ಸುವಿಮಲ ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ ನೀನೆ ಎನ್ನ ರಕ್ಷಕನೆಂದರಿಯುತ 3
--------------
ವಿದ್ಯಾಪ್ರಸನ್ನತೀರ್ಥರು
ಯತಿವರೇಣ್ಯರ ಮನುಜ ಸತತ ಭಜಿಸೆಲೊ ಪ ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ ಅ.ಪ ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ 1 ವಾಸುದೇವ ನಾಮದಿಂದ ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ 2 ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ3 ನರಿಯುತಕುತಿಗಳಿಂದ ಬೋಧಿಪ ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ4 ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ 5 ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ 6 ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ ಸಾರ ಪೇಳಿದ 7 ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ ವರ ಕರುಣವ ಪಡೆಯುವುದೇ ನಿರತ ಸುಖಕೆ ಪಥವೆಂದರುಹಿದ 8 ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ ನಿರತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂದ ಪ್ರಸನ್ನರಾದ 9
--------------
ವಿದ್ಯಾಪ್ರಸನ್ನತೀರ್ಥರು
ವಾಯುದೇವರು - ಹನುಮಂತ ಎಂಥ ವೈರಾಗ್ಯ ಹನುಮಂತ ಎಂಥ ಸೌಭಾಗ್ಯ ಗುಣವಂತ ಪ ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ ಭಕುತಿಯ ಬೇಡಿದೆಯೊ ಅ.ಪ ಆವರಿಹರು ನಿನ್ಹೊರತು ರಾಘವರ ಭಾವವರಿತು ಪ್ರತಿ ಕ್ಷಣಗಳಲಿ ಸೇವೆ ಸಲಿಸಿ ದಯ ಪಡೆಯಲು ಭೋಗವ ದಾವದನುಭವಿಸೆ ದುರ್ಲಭವು ಜೀವೋತ್ತಮನದ ಬಯಸದೆ ಏಕೋ ಭಾವದಿ ಪದಸೇವೆಯ ಕೇಳಿದ ವೀರ 1 ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ ಷ್ಠಾನ ಪವನಸುತ ಜಗತ್ರಾಣ ನೀನಲ್ಲದೆ ಖಗಮೃಗ ಸುರನರರುಗ ಳೇನು ಚಲಿಸಬಲ್ಲರೊ ಹನುಮ ಪ್ರಾಣಭಾವಿ ಚತುರಾನನ ಭುವಿಯೊಳ ಗೇನು ರುಚಿಯೊ ಕಲ್ಯಾಣಚರಿತ ನಿನಗೆ 2 ಕಪಿ ರೂಪದಿ ದಶಕಂಧರನ ಮಹಾ ಅಪರಾಧಕ್ಕೆ ಶಿಕ್ಷೆಯನಿತ್ತೆ ನೃಪರೂಪದಿ ದುರ್ಯೋಧನನಸುವನು ಅಪಹರಿಸಿದೆಯೋ ಬಲ ಭೀಮ ವಿಪುಲ ಪ್ರಮತಿ ವರವೈಷ್ಣವ ತತ್ವಗ ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ3
--------------
ವಿದ್ಯಾಪ್ರಸನ್ನತೀರ್ಥರು
ವೇದನಿಧಿ ಹರಿ ವಿಠಲ | ಕಾದುಕೋ ಇವಳಾ ಪ ಮೋದತೀರ್ಥರ ಮತದಿ | ರಾಜಿಸುತ್ತಿಹಳಾ ಅ.ಪ. ವಾದೀಭ ಕೇಸರಿಯು | ವಾದಿರಾಜರು ಮತ್ತೆವೇದವೇದ್ಯರ ಕಂಡು | ಶುಭಸ್ವಪ್ನದೊಳಗೇಭೋದವಗದೆ ಸಾಗಿ | ವೇದನಿಧಿಗಳ ಹಸ್ತಸಾದರದಿ ಅಕ್ಷತೆಯು | ಪುಷ್ವ ಸ್ವೀಕಾರವು 1 ಯತಿವರೇಣ್ಯರ ಕರುಣಾ | ಸತತವಿರಲೀಕೇಗೇಪತಿಸುತರು ಹಿರಿಯಾ | ಹಿತಸೇವೆಯಲ್ಲೀಮತಿಯ ಕರುಣಿಸಿ ನಿನ್ನ | ವ್ಯಾಪ್ತತ್ವ ತಿಳಿಸೀಅತಿಶಯದ ಸೇವೆಯಿಂ | ಉದ್ದಿರಿಸೊ ಇವಳಾ 2 ಸುರರು ನರರೊಳಗೆಲ್ಲ | ತರತಮಾತ್ಮಕರೆಂಬ ವರಸುಜ್ಞಾನವ ಕೊಟ್ಟುಕಾಪಾಡೊ ಹರಿಯೇಗುರು ಭಕ್ತಿ ಹರಿಭಕ್ತಿ | ಪರಮ ಸಾದನವೆಂಬಅರಿವನೇ ನೀಡುವುದು | ಗರುಡ ಧ್ವಜಾತ್ಮ 3 ಧರ್ಮಮಾರ್ಗದಲಿರಿಸಿ | ಪೇರ್ಮೆಯಲಿ ಪೊರೆ ಇವಳಾಭರ್ಮಗರ್ಭನ ಪಿತನೆ | ನಿರ್ಮಾತೃ ಜಗಕೇನಿರ್ಮಮದ ಸಾದನೆಯ | ಮರ್ಮವನೆ ಅರುಹುತ್ತಕರ್ಮನಾಮಕ ಹರಿಯೆ | ಕಾಪಾಡೊ ಇವಳಾ 4 ಭವ ಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀ ಗಣೇಶ ಪ್ರಾರ್ಥನೆ ಅಗ್ರಪೂಜಾ ವಿಘ್ನರಾಜ ಅಗ್ನಿಜಾಗ್ರಜ ಮಹೋಜ ಪ. ಲಗ್ನವಾಗಲಿ ಹರಿಪದಾಬ್ಜ ನಿಗ್ರಹೀತ ಕಾಮಬೀಜ ಅ.ಪ. ಭಾನುತೇಜ ಭಕ್ತಿಭಾಜ ಧ್ಯಾನಗಮ್ಯ ಮುನಿಸಮಾಜ ದೀನಕಾಮದ ಕಲ್ಪಭೂಜ ಗಾನಲೋಲ ಭಾವ ನಿಯಾತ್ಮಜ 1 ಚತುರಭುಜ ಸಚ್ಚರಿತ ವಿರಜ ಯತಿವರೇಣ್ಯಗಣ ವಿರಾಜ ಮತಿಮತಾಂವರ ನತಬಿಡೌಜ ಪಂಕಜ 2 ರುಕುಮಿಣೀಜ ರುದ್ರಗಣವ್ರಜ ಭಕುತ ವತ್ಸಲ ಮನೋಜ ಮುಖಮತಂಗಜ ಮೂಷಿಕಧ್ವಜ ಲಕುಮಿನಾರಾಯಣ ಗುಣಜ್ಞ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ಗಣೇಶ ಪ್ರಾರ್ಥನೆ ಅಗ್ರಪೂಜಾ ವಿಘ್ನರಾಜ ಅಗ್ನಿಜಾಗ್ರಜ ಮಹೋಜ ಪ. ಲಗ್ನವಾಗಲಿ ಹರಿಪದಾಬ್ಜ ನಿಗ್ರಹೀತ ಕಾಮಬೀಜಅ.ಪ. ಭಾನುತೇಜ ಭಕ್ತಿಭಾಜ ಧ್ಯಾನಗಮ್ಯ ಮುನಿಸಮಾಜ ದೀನಕಾಮದ ಕಲ್ಪಭೂಜ ಗಾನಲೋಲ ಭಾವ ನಿಯಾತ್ಮಜ 1 ಚತುರಭುಜ ಸಚ್ಚರಿತ ವಿರಜ ಯತಿವರೇಣ್ಯಗಣ ವಿರಾಜ ಮತಿಮತಾಂವರ ನತಬಿಡೌಜ ಪಂಕಜ 2 ರುಕುಮಿಣೀಜ ರುದ್ರಗಣವ್ರಜ ಭಕುತ ವತ್ಸಲ ಮನೋಜ ಮುಖಮತಂಗಜ ಮೂಷಿಕಧ್ವಜ ಲಕುಮಿನಾರಾಯಣ ಗುಣಜ್ಞ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ಮರಿಸಿ ಬೇಡುವೆನು ನಾ ಹೇ ಗುರು ಸಾರ್ವಭೌಮಾ ಪ ನಿರುತ ನೀ ಪೊರೆ ಎನ್ನ ವಾದಿಗಜಸಿಂಹ ಅ.ಪ. ದಿತಿಸುತಗೆ ಸುತನೆನಿಸಿ | ಅತಿಮುದದಿ ಸುರಮುನಿಯ ಮತ ಹಿಡಿದು ಹರಿಯ ಮಹಿಮೆ ಪಿತಗೆ ಪೇಳಿ ಪತಿಯ ಸ್ತಂಭದಿ ಕರೆದ ಪ್ರಹ್ಲಾದ ರಾಜ 1 ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ | ಭೂಮಿ ಪಾಲಗೊದಗಿರ್ದ ಕುಹು ಯೋಗ ಬಿಡಿಸಿ ಖೂಳ ಮಾಯಳ ಜಯಿಸಿ ಚಂದ್ರಿಕಾ ಗ್ರಂಥವನು ಪೇಳಿ ಹರಿಪೀಠವೇರಿದ ವ್ಯಾಸರಾಜ 2 ಕಾಮರಿಪುನುತ ಮೂಲರಾಮ ಪದಯುಗ ಕುಮುದ ಸೋಮನೆನಿಸುವ ಭಕ್ತಸ್ತೊಮಕ್ಕೆಲ್ಲ ನೇಮದಿಂದಲಿ ವಿವಿಧ ಕಾಮಿತಾರ್ಥ ಸ್ಫುಟತ ಗಾತ್ರ ಪಾವನ ಚರಿತ್ರ 3 ಶಾಂತತೆಯ ಪೊಂದಿ ಮಂತ್ರಾಲಯದಿ ವೃಂದಾವ ನಾಂತರದೊಳಿರುತ ಸಿರಿಕಾಂತ ಹರಿಯಾ ಚಿಂತಿಸುತಲಿಹ ಸರ್ವತಂತ್ರ ಸ್ವತಂತ್ರ ಕರು ಣಾಂತರಂಗನೆ ರಾಘವೇಂದ್ರ ಯತಿವರ್ಯಾ 4 ಮೂಕ ಬಧಿರಾಂಧತ್ವಗಳ ಪೊಂದಿ ಧರಣಿಯೊಳು ವ್ಯಾಕುಲವ ಪಡುವವರನುದ್ಧರಿಸುತ ನಾಕಪತಿವಿನುತ ಜಗನ್ನಾಥವಿಠಲನ ಮಧುಪ ನೀ ಕೊಟ್ಟು ಸಲಹೆನ್ನಭೀಷ್ಟ ಸಮುದಾಯ 5 ಇತರ ಯತಿವರೇಣ್ಯರ ಸ್ತೋತ್ರ
--------------
ಜಗನ್ನಾಥದಾಸರು