ಪ್ರಾಣ ಗುರು ಜಯ ವಿಠಲ ಕಾಪಾಡು ಇವಳ ಪ
ಪ್ರಣತಾರ್ತಿ ಹರನೆಂದು ಭಿನ್ನವಿಪೆ ಸತತಾ ಅ.ಪ.
ಪತಿವ್ರತಾಮಣಿ ಎನಿಸಿ ಪತಿಸೇವೆಯೊಳುನಿರತೆಸತತ ಸದ್ಭಕ್ತಿ ಶ್ರೀ ಹರಿಗುರುಗಳಲ್ಲೀ |ಅತಿಶಯದಿ ಮಾಡುತಲಿ ವಿಹಿತವನು ತೊರೆಯದಲೆಕೃತಕಾರ್ಯಳಾಗಿಹಳ ಸತಿಯ ಸಲಹುವುದೂ 1
ತೈಜಸ ದಯಾಪಯೋನಿಧಿ ಹರಿಯೆಆ ಪರಿಮಳಾರ್ಯ ಯತಿರೂಪವನೆ ಕೊಂಡುಕೈ ಪಿಡಿದು ಕಾಯ್ವೆನೆಂಬಭಯ ಹಸ್ತವ ತೋರಿರೂಪವನು ಮರೆಮಾಡ್ಡೆ ಬೃಂದಾವನಾಂತ 2
ಮೋಚಕೇಚ್ಛೆಯೊಳ್ಸವ್ಯ ಸಾಚಿಗೇ ಅತಿಪ್ರೀಯಖೇಚರೋತ್ತಮ ಪ್ರಾಣಗೊಪ್ಪಿಸುತ ಇವಳಾನೀಚೋಚ್ಚತರತಮ ಜ್ಞಾನ ಸ್ಥಿರಪಡಿಸುತ್ತಪ್ರಾಚೀನ ದುಷ್ಕರ್ಮ ಪರಿಹರಿಸೊ ಹರಿಯೇ 3
ಪ್ರಣತಜನ ಪರಿಪಾಲಎನುತ ಭಿನ್ನೈಸುವೆನೊ ವೇಣುಗೋಪಾಲ 4
ಬದಿಗ ನೀನಾಗಿರಲು ಭಯವೇನೊ ಬುಧವಂದ್ಯವದಗಿ ಹೃದ್ಗುಹದೊಳಗೆ ತೋರಿತವ ರೂಪಮುದದಿಂದ ಕಳೆ ಇವಳನಾದಿ ರೋಗವನೆಂಬೆಇದನೇವೆ ಸಲಿಸೊ ಗುರು ಗೋವಿಂದ ವಿಠಲ 5