ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ ಸುವಿನೋದವ ಪಡೆದರು ಸುರನರಜನರು ಪ ಪವನಸುತರ ಮತ ಭುವಿಯಲಿ ಸುಲಭದಿ ವಿವರಿಸಿ ಜನರಿಗೆ ಪ್ರವಚನವೆಸಗಲು ಅ.ಪ ಗುರು ಬ್ರಹ್ಮಣ್ಯರ ವರಪದ ಕಮಲಗಳ ಪರತÀರ ಭಕುತಿಯಲಿ ಪರಿಪರಿ ಸೇವಿಸಿ ಗುರುಕರುಣದಲಿ ಹರುಷವ ಪೊಂದುತಲಿ ವರವ ಪಡೆದ ಭೂಸುರ ರಾಮಾರ್ಯರ ವರಸತಿಯುದರದಿ ವಹ್ನಿಪುರದೊಳವ ತರಿಸುವ ಧರೆಯೊಳು ಸುಜನಗಣವನು ದ್ಧರಿಸಲು ಮುದದಲಿ ಸಿರಿಪತಿಭಕುತನು 1 ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ ಯತಿಯಾಶ್ರಮವಹಿಸಿ ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ ಯತಿಯಲಿ ಶಾಸ್ತ್ರಾಮೃತ ಪಾನ ಮಾಡುತ ಅತಿ ಸುಲಭದ ಶ್ರುತಿಗಳ ಸಾರವ ಕ್ಷಿತಿ ಸುರರೊಳಗತಿ ಹಿತದಲಿ ಅರುಹಲು 2 ಗಜಗಹ್ವರ ದೇಶದ ನರಪತಿಗಳಿಗೆ ನಿಜವರ ಕರುಣದಲಿ ವಿಜಯಾಭ್ಯುದಯಗಳನು ಸತತ ಪೊಂದಿಸುತ ರಜತಕನಕ ನವಮಣಿಗಣಯುತ ವಾ ರಿಜವನು ಪೋಲುವ ಸಿಂಹಾಸನದಲಿ ಸುಜನ ಸಮೂಹಕೆ ನಿಜಪದಯುಗಳಾಂಬುಜ ಸೇವೆ ನೀಡಲು 3 ನಂದತೀರ್ಥರ ವರಶಾಸ್ತ್ರಗಳನ್ನು ಚಂದದಿ ವಿವರಿಸಲು ಚಂದ್ರಿಕಾ ನ್ಯಾಯಾಮೃತ ಮೊದಲಾದ ಗ್ರಂಥಗಳನು ರಚಿಸಿ ಮಂದಜನಕೆ ಮುಚುಕುಂದನ ಶುಭಗುಣ ವೃಂದಗಳನು ಸುಖದಿಂದ ಬೋಧಿಸಲು ಅಂದಪದಗಳನು ರಚಿಸುತ ಶುಭಗುಣ ಸಾಂದ್ರನ ಭಜನಾನಂದ ಪೊಂದಿಸಲು 4 ವಿಜಯೀಂದ್ರ ವಾದಿರಾಜ ಮೊದಲಾದ ನಿಜವರ ಶಿಷ್ಯರುಗಳ ವ್ರಜಕೆ ಶಾಸ್ತ್ರಾರ್ಥಗಳನು ಬೋಧಿಸುತ ಪುರಂದರ ಸುಜನ ಶಿರೋಮಣಿ ಕನಕ ಪ್ರಮುಖ ಪೂಜಿತ ಪದಯುಗಳಾಂಬುಜ ಯತಿಶೇಖರ ವಿಜಯಸಾರಥಿಯು ಪ್ರಸನ್ನನಾಗಲೆಂದು 5
--------------
ವಿದ್ಯಾಪ್ರಸನ್ನತೀರ್ಥರು
ಆದಿಯುಗದಿ ಮಹ ಆದಿದೈತೇಯನೊಬ್ಬ ಮೇದಿನಿಯೊಳ್ ಸ್ವರ್ಣಕಶ್ಯಪು ನಾಮದಿ ಸಾಧಿಸಿ ಬಂದವಗೊಬ್ಬ ಸೋದರ ಸ್ವರ್ಣಾಂಬಕನೆನಿಸಿ ಮೇದಿನಿ ಚೋರನಾಗಿ ಹತನಾದನು ಆದಿಶೇಷನೆ ವಿಷ್ಟಕ್ಸೇನ ತಾ- ನಾದ ಪ್ರಹ್ಲಾದ ಪ್ರಾಣಾವೇಶದಿಂದ ಸೋದರ ಜೀವಾಂಶಾಪಾನಾವಿಷ್ಟ ಸ- ಲ್ಹಾದನಾಮಕ ಮಿತ್ರನಾದ ಕ ಹ್ಲಾದ ವ್ಯಾನಾವೇಶದಿಂದ ಮೋದದಿ ಸೋಮಾಂಶೋದಾನಾಯುತ ನು- ಹ್ಲಾದ ನಾಮಕ ಸಂಭೂತನಾದ ಆದರೈವರಾದೈತ್ಯಗೆ ಪುತ್ರರು ಮೇದಿನಿ ಸುರರುದ್ಧಾರಗೋಸುಗ ಆದಿದೈವ ನಾರೇಯಣ ತಾ ನಾದಿಕಾರಣ ವಿಶ್ವಕರ್ತಾ ಮೋದಾನಂದ ಮೂರುತಿ ಸುಗುಣ ಭೋಧಪೊರ್ಣ ಸರ್ವಜ್ಞ ಸ್ವಾತಂತ್ರ ವೇದಪುರುಷಾದಿ ಜಡಾದಿ ಜಗಕೆ ಆಧಾರ ಹರಿ ಎಂಬ ಜ್ಞಾನವ ಭೋದಿಸಿ ಬೊಮ್ಮಮುಖರು ಹರಿ ಪಾದಸೇವಕರೆನುತ ನಿತ್ಯ ವಾದದಿ ವಾದಿಗಳ ಜಯಸಿದರವರ ಪಾದಸೇವಿಸಿ ಕರುಣಾಪಡೆದು ಆದಿ ಗುರು ಜಗನ್ನಾಥವಿಠಲನ್ನ ಆದರದಲಿ ಭಜಿಪೆ ಪರಮ ಸುಖ ರಾಗ :ಕಲ್ಯಾಣಿ ಅಸುರರ ಜನ್ಮದಿ ಪುಟ್ಟಿದ ಇವರಿಗೆ ಶ್ವಸನನ ಆವೇಶ ಸುರರಾವೇಶ ಬಲದಿ ಅಸಮಙÁ್ಞನ ಭಕುತಿ ವಿರಾಗವು ವಸುಧಿಯ ತಳದಿ ದಿನದಿನದಲ್ಲಿ ಪಸರಿಪ ಸೂರ್ಯನ ಪ್ರಭೆಯಂದದಲಿ ಮಿಸುಪದಕಿದೇ ಕಾರಣ ಉಂಟು ಬಿಸಜಾಂಬಕ ಹರಿಪೇಳಿದ ಇವರಿಗೆ ಅಸುರೇಶ ಹಿರಣ್ಯಕಶಿಪುವಿನಲ್ಲಿ ಶಿಶುಭಾವದಿಂದ ಜನಿಸಲು ಪೋಗಿರಿ ಪುಸಿಯಲ್ಲ ಮಚ್ಛಾಪÀ ಅಸುರಭಾವ ಪ್ರಲ್ಹಾದಾದ್ಯ ರಸಮಮಹಿಮರಾಗೀ ಜನಿಸಿರೆಂದು ಉಸುರಿದ ವಾಕ್ಯವು ಪ್ರಮಾಣ ಸಿದ್ಧವೆನ್ನಿ ವ್ಯಸನzಲೈವರು ಹರಿಯನೆ ಮತ್ತೆ ಬೆಸಗೊಂಡರೀಪರಿ ಪರಿಯಾ ಅಸುರನ ಪತ್ನಿಯ ಬಸಿರೊಳು ಪುಟ್ಟುವುದು ವಶವಲ್ಲವೋ ಸ್ವಾಮಿ ಕುಸುಮನಾಭನೆ ನಿನ್ನ ಅಸಮಲೋಕದ ಸುಖ ವಸುಧಿತಳಾದಲ್ಲಿ ಎಸಗದು ಎಸಗದು ಎಂದಿನಕಾಲಕ್ಕೂ ಮುಸುಕುವದಙÁ್ಞನ ದುಃಖದ ಭವದಲ್ಲಿ ಕಸವಿಸಿಗೊಳುತಾ ಙÁ್ಞನವನೀಗಿ ಬಿಸನಿಲಯನೆ ನಿನ್ನ ದರುಶನವಿಲ್ಲದೆ ಅಸುನಿಲ್ಲುವ ಬಗೆ ಯಾವುದು ಪೇಳೋ ಶಶಿಧರವಂದ್ಯ ಗುರುಜಗನ್ನಾಥ ವಿಠಲ ನಮ್ಮ ವ್ಯಸನವನು ಕಳೆದು ಸುಖವನು ಸಲಿಸೋ ರಾಗ - ಕಾಂಭೋದಿ ತಾಳ - ತ್ರಿವಿಡಿ ಭಕುತವಾಕ್ಯವ ಲಾಲಿಸಿ ತಾನಾಗ ಪರಿ ನುಡಿದನು ವಿಕಳ ಪೊಂದದೆ ನೀವು ತ್ವರಿತಾದಿ ಧರೆಯೊಳು ಸಕಲರು ಜನಿಸಲು ಮುಸಕದಙÁ್ಞನ ಲಕುಮಿ ಭೂಮಿಯ ಸಹಿತ ಇರುವೆನು ನಿಮ್ಮೊಳು ನಿತ್ಯ ಪರಿಪರಿ ಮಹಿಮವ ಪ್ರಕಟಮಾಡುವೆ ಮುಖ್ಯಪ್ರಾಣನಿಪ್ಪನು ಸತತ ಕಕುಲಾತಿ ಯಾಕಿನ್ನು ನಡಿರೆಂದು ಹರಿಯೆಂದ ಉಕುತ ವಾಕ್ಯದಲಿಂದ ದಿತಿಜನಲ್ಲಿ ಸುಕೃತಿಗಳೈವರು ಉದಯವೈದಿದರಾಗ ಮುಕುತಿದಾಯಕ ಗುರುಜಗನ್ನಾಥ ವಿಠಲನೆಂಬ ಭಕುತಿ ಪೂರ್ವಕ ಙÁ್ಞನವೃದ್ಧಿಯೈದಿದರು ರಾಗ - ಆರಭಿ ತಾಳ - ಅಟ್ಟ ಪಿರಿಯ ಪ್ರಲ್ಹಾದನ್ನ - ಕರದು ತೊಡೆಯ ಮೇಲೆ ಇರಿಸಿ ಪ್ರೇಮದಿ ನಿಮ್ಮ - ಗುರುವೇನು ಪೇಳ್ಯಾನೆ ಮರಿಯಾದೆ ಎನಮುಂದೆ - ಅರಹು ಎನಲು ಬಾಲ ಕಿರಿನಗೆ ಮುಖದಿಂದ - ಹರಿಯೆ ಸರ್ವೋತ್ತಮ ಹರಬೊಮ್ಮ ಮುಖರೆಲ್ಲ - ಪರಿವಾರಭೂತರು ಅರಿದಿಪ್ಪೆ ಎನ್ನಯ್ಯ ಸರಸಿಜಜಾಂಡಕ್ಕೆ ಅರಸು ತಾನಾಗಿದ್ದು ಇರುವಾದಿ ಚೇತನ ತರುವಾದಿ ಜಡಮಯ ಸರ್ವಸ್ಥಳದಲ್ಲಿ ನಿರುತದಿ ವ್ಯಾಪಿಸಿ ಇರುತಿಹ ಹರಿ ಎಂದು ಅರಿತ ಮಾನವÀÀನಿಗೆ ದೊರೆವೋನು ನಿಶ್ಚಯ ಅರಿತು ಪೇಳಿದ ತನ್ನ ತರಳಾನ ನುಡಿಕೇಳಿ ಭರದಿಂದ ಕಂಬವ ಕರದಿಂದ ಬಡಿಯಾಲು ನರಮೃಗಾಕಾರದಿ ಹೊರಗೆ ಬಂದಾದೈತ್ಯನು ದರವ ಬಗೆದು ಕರುಳಮಾಲೆಯತಾ ಕೊರಳೊಳು ಧರಿಸಿದ ಚರಜನ ಪರಿಪಾಲ ಬಿರುದು ಬೀರಿದ ನಮ್ಮ ಗುರುಜಗನ್ನಾಥವಿಠಲ ಶರಣರ ಮರೆಯನೋ ಧರಿತಳದೊಳಗೆ ರಾಗ :ಇಚ್ಛಾ :ತಾಳ - ಆದಿ ಈ ತೆರ ಪ್ರಹ್ಹಾದ ಹರಿಪಾದವ ಭಜಿಸಿ ಪ್ರೀತಿಯ ಪಡೆದು ಭೂಸುರಗಣಕೆ ಭೂತಳದೊಳಗೆ ಯತಿಗಳ ಕುಲಕೆ ನಾಥನು ವ್ಯಾಸಮುನಿ ಎನಿಸಿ ಮರಳಿ ಖ್ಯಾತ ಶ್ರೀ ರಾಘವೇಂದ್ರನೆಂದೆನಿಸಿ ಪ್ರೀತಿಯಿಂದಲಿ ಭಕ್ತರ ಪೊರೆಯಲು ನೀತಿ ಭಾವದಲಿ ಯತಿಯಾಶ್ರಮ ಪೊಂದಿ ಸೀತಾಪತಿರಾಮ ಯದುನಾಯಕ ಕೃಷ್ಣ ಭೀತಿಹರ ನರಸಿಂಹ ವ್ಯಾಸರ ಭಜಿಸಿ ದೂತರ ಮನೋರಥ ಪೂರ್ತಿಸಿ ಪೊರೆವನು ದಾತಗುರುಜಗನ್ನಾಥ ವಿಠಲನ್ನ ನೀತ ವಿಭೂತಿಯ ಪಡೆದು ನಿರ್ಭೀತನಾಗಿಹನು ಜತೆ ದೂತಜನರ ಮಹಾಪಾತಕ ಹರನೆನ್ನಿ ಪ್ರೀತಗುರುಜಗನ್ನಾಥವಿಠಲನೊಲಿವ ರಾಗ :ಶಂಕರಾಭರಣ :ತಾಳ :ಏಕ
--------------
ಗುರುಜಗನ್ನಾಥದಾಸರು