ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ ಸುವಿನೋದವ ಪಡೆದರು ಸುರನರಜನರು ಪ ಪವನಸುತರ ಮತ ಭುವಿಯಲಿ ಸುಲಭದಿ ವಿವರಿಸಿ ಜನರಿಗೆ ಪ್ರವಚನವೆಸಗಲು ಅ.ಪ ಗುರು ಬ್ರಹ್ಮಣ್ಯರ ವರಪದ ಕಮಲಗಳ ಪರತÀರ ಭಕುತಿಯಲಿ ಪರಿಪರಿ ಸೇವಿಸಿ ಗುರುಕರುಣದಲಿ ಹರುಷವ ಪೊಂದುತಲಿ ವರವ ಪಡೆದ ಭೂಸುರ ರಾಮಾರ್ಯರ ವರಸತಿಯುದರದಿ ವಹ್ನಿಪುರದೊಳವ ತರಿಸುವ ಧರೆಯೊಳು ಸುಜನಗಣವನು ದ್ಧರಿಸಲು ಮುದದಲಿ ಸಿರಿಪತಿಭಕುತನು 1 ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ ಯತಿಯಾಶ್ರಮವಹಿಸಿ ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ ಯತಿಯಲಿ ಶಾಸ್ತ್ರಾಮೃತ ಪಾನ ಮಾಡುತ ಅತಿ ಸುಲಭದ ಶ್ರುತಿಗಳ ಸಾರವ ಕ್ಷಿತಿ ಸುರರೊಳಗತಿ ಹಿತದಲಿ ಅರುಹಲು 2 ಗಜಗಹ್ವರ ದೇಶದ ನರಪತಿಗಳಿಗೆ ನಿಜವರ ಕರುಣದಲಿ ವಿಜಯಾಭ್ಯುದಯಗಳನು ಸತತ ಪೊಂದಿಸುತ ರಜತಕನಕ ನವಮಣಿಗಣಯುತ ವಾ ರಿಜವನು ಪೋಲುವ ಸಿಂಹಾಸನದಲಿ ಸುಜನ ಸಮೂಹಕೆ ನಿಜಪದಯುಗಳಾಂಬುಜ ಸೇವೆ ನೀಡಲು 3 ನಂದತೀರ್ಥರ ವರಶಾಸ್ತ್ರಗಳನ್ನು ಚಂದದಿ ವಿವರಿಸಲು ಚಂದ್ರಿಕಾ ನ್ಯಾಯಾಮೃತ ಮೊದಲಾದ ಗ್ರಂಥಗಳನು ರಚಿಸಿ ಮಂದಜನಕೆ ಮುಚುಕುಂದನ ಶುಭಗುಣ ವೃಂದಗಳನು ಸುಖದಿಂದ ಬೋಧಿಸಲು ಅಂದಪದಗಳನು ರಚಿಸುತ ಶುಭಗುಣ ಸಾಂದ್ರನ ಭಜನಾನಂದ ಪೊಂದಿಸಲು 4 ವಿಜಯೀಂದ್ರ ವಾದಿರಾಜ ಮೊದಲಾದ ನಿಜವರ ಶಿಷ್ಯರುಗಳ ವ್ರಜಕೆ ಶಾಸ್ತ್ರಾರ್ಥಗಳನು ಬೋಧಿಸುತ ಪುರಂದರ ಸುಜನ ಶಿರೋಮಣಿ ಕನಕ ಪ್ರಮುಖ ಪೂಜಿತ ಪದಯುಗಳಾಂಬುಜ ಯತಿಶೇಖರ ವಿಜಯಸಾರಥಿಯು ಪ್ರಸನ್ನನಾಗಲೆಂದು 5
--------------
ವಿದ್ಯಾಪ್ರಸನ್ನತೀರ್ಥರು
ಪಾದ | ಭೃಂಗನು ಎನಿಸುವಡಿಂಗರಿಗನೆ ಧನ್ಯನೊ ಪ ಧೃತ :ಅಂಗಜನಪಿತ ಕಾ | ಳಿಂಗ ಮರ್ದನತುಂಗ ಮಹಿಮನಪಾಂಗ ಕರುಣನಡಿಂಗರಿಗೆ ಅಭಯಾಂಕ ಹಸ್ತನರಂಗನಂಘ್ರಿ ಸರೋಜ ಭೃಂಗನ ಅ.ಪ. ಮೇದಿನಿ | ಮೌನಿವರ ವರದೇಂದ್ರ ಯತಿಯಲಿ |ಸಾನು ರಾಗದಿ ಜ್ಞಾನವಾರ್ಜಸಿ | ಜ್ಞಾನ ನಿಧಿ ಎಂದೆನಿಸಿ ಮೆರೆದ 1 ವಿಜಯರ ನಿಂದೆಯಿಂದ | ಸಂದಿತು ರೋಗವುನಿಜತನು ತ್ಯಜಿಸುವಂತೇ ||ಅಜನ ನಿಜಪದ ಯೋಗ್ಯ ಪ್ರಾಣನು | ಬಿಜಯಗೆಯ್ಯುತನಿಜ ಸುಸ್ವಪ್ನದಿ |ವಿಜಯದಾಸರ ಪೂಜಿಸೆನ್ನಲು | ಭಜಿಸುತಲಿ ವರವನ್ನೆ ಪಡೆದ 2 ತ್ಯಾಗೀ ಭೋಗೀ ಶೀಲ | ವಿಜಯರ ಸೇವಕಭಾಗಣ್ಣಾರ್ಯರ ಸೇವಿಸೀ ||ಆಗಮಜ್ಞನ ನಾಲ್ದಶಾಯು | ಭಾಗ್ಯವನೆ ತಾಪಡೆದು ಚಂದ್ರಭಾಗದಲಿ ಮೀಯುತಿರೆ ಶಿರಿ | ಜಗದೀಶ ವಿಠಲಾಂಕ ಪಡೆದ 3 ಸ್ವಾದಿ ಸ್ಥಳಕೆ ಪೋಗಿ | ರಾಜರ ಆಜ್ಞೆಯ ಆದರದಲಿ ಕೊಳ್ಳುತಾ ||ಮೋದ ತೀರ್ಥರ ಮತವ ಸಾರುತ | ವೇದ ಶಾಸ್ತ್ರ ಸುಧಾದಿ ಗ್ರಂಥದಸ್ವಾದುರಸ ಪ್ರಾಕೃತದಿ ಬೋಧಿಸಿ | ಶ್ರೀ ಹರಿಕಥೆ ಸುಧೆಯ ಗರೆದ 4 ಲಕ್ಷ್ಯವಿಡುತ ಶುಕ್ಲ | ವರ್ಷವು ಸಿತವೆನ್ನಪಕ್ಷ ಭಾದ್ರ ಪದದೀ ||ದಕ್ಷಿಣಾಯನ ಶುದ್ಧನವಮಿಲಿ | ದೀಕ್ಷೆ ಪಿಡಿಯುತ ಆದಿವಾರದಿಪಕ್ಷಿವಹ ಗುರು ಗೋವಿಂದ ವಿಠಲನ | ಈಕ್ಷಿಸುತ ಭುವಿಯನ್ನೆ ತೊರೆದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾನವಿ ದಾಸರ | ನಿ ಸೇರೋಹೀನ ಮನುಜ ನಿನ್ನಘವನೆ ನೀಗುವ ಪ ಕೃತ ಯುಗದಲಿ ಹಿರಣ್ಯಜನೆನಿಸೀವಿತತ ಮಹಿಮ ಹರಿಯನೆ ಭಜಿಸೀ ||ಸತತದಿ ಸುಜನರ ಸಂತವಿಸಿ ಸಿರಿಪತಿಯ ಸೇವಿಸೆ ಸಹ್ಲಾದ ನೆನಿಸಿದಾ 1 ಎರಡೊಂದ್ಯು ಯುಗದಲಿ ಶಲ್ಯನಾಗಿ ಜನಿಸೀಕುರುಪಗೆ ಋಣರೂಪ ಸೇವೆ ಸಲಿಸಿ ||ಉರುತರ ಭಕುತಿಲಿ ಶೌರಿಯ ನೆನೆಯುತಹರಿಪದ ಸೇರಿದ ನೃಪಕುಲ ಮೌಳೀ 2 ವರಕಲಿಯಲಿ ದ್ವಿಜನಾಗವತರಿಸೀನರಮೃಗಾಖ್ಯಸುತ ಶ್ರೀನಿವಾಸನೆನಿಸೀ ||ವರದೇಂದ್ರ ಯತಿಯಲಿ ತರ್ಕವ ಕಲಿತುದುರುಳರ ಮುರಿದತಿ ಗರ್ವದಿ ಮೆರೆದಾ 3 ಭೃಗ್ವಂಶಜ ವಿಜಯಾಖ್ಯ ದಾಸ ಬಂಧೂಋಗ್ವಿನುತನ ಪ್ರಾಕೃತದೊಳು ಪಾಡೆ ||ದಿಗ್ಗಜ ಗರ್ವದಿ ಗೆಜ್ಜೆಯ ಕಟ್ಟಿದಅಗ್ಗದ ನಟನಿವನೆನುತಲಿ ಜರೆದಾ 4 ದಾಸರ ನಿಂದ್ಯದಿ ಬಂದುದು ಅಪಮೃತ್ಯುದೋಷನೀಗೆ ಗೋಪಾಲರ ಭಜಿಸೆನ್ನ ||ಔಷಧ ಪೇಳಲು ದಾಸರ ನಾಲ್ದಶವರ್ಷಾಯುಷ್ಯವ ಪೊಂದಿದವರನಾ5 ಇಂದು ಭಾಗದಲಾನಂದದಿ ಮೀಯೇಬಂದೊದಗಿತು ಜಗನ್ನಾಥ ನಾಮಾ ||ಪೊಂದುತ ಅಂಕಿತ ಕುಣಿಯುತ ಪಾಡುತಇಂದಿರೆಯರಸನ ಛಂದದಿ ತುತಿಸಿದ 6 ಪಾವನತರ ಹರಿಕಥೆ ಸುಧೆ ರಚಿಸೀಪವನ ಮತದವರನ್ನುತ್ತರಿಸೀ ||ಪವನನ ಹೃತ್ಕಂಜದಿ ನೆಲೆಸಿಹ ಗುರುಗೋವಿಂದ ವಿಠಲ ಪದಾಬ್ಜವ ಸೇರಿದ 7
--------------
ಗುರುಗೋವಿಂದವಿಠಲರು