ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಘೂತ್ತಮತೀರ್ಥರು ನೋಡಿದೆ ಗುರುಗಳ ನೋಡಿದೆ ಪ ನೋಡಿದೆನು ಗುರುಗಳ ಪಾದಾಬ್ಜವ ಪಾಡಿದೆನು ಸನ್ಮಹಿಮೆಗಳ ನಾ ಬೇಡಿದೆನು ಮನದಣಿಯೆ ವರಗಳ ಈಡು ಇಲ್ಲದೆ ಕೊಡುವ ಪ್ರಭುಗಳ ಅ.ಪ. ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿಯ ತೀರದಲ್ಲಿ ನಿಂತು ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ 1 ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಳಿ ರತುನರ 2 ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮರೆವರ ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ 3
--------------
ಶ್ರೀದವಿಠಲರು