ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತಿನಂತಲ್ಲನುಭವ ಜ್ಞಾನ ಮರುಳಜನ ಬಲ್ಲವೇನ ಯತಿಮುನಿಗಳು ಸಾಧಿಸುವ ಖೂನ ಮನೋನ್ಮನದ ಸಾಧನ ಧ್ರುವ ನುಡಿಜ್ಞಾನಾಡಿ ತೋರಬಹುದು ನಾಡ ಲೋಕದೊಳೆಲ್ಲ ನಡಿಜ್ಞಾನದೆ ದುರ್ಲಭವದು ಆಡಿ ದೋರಲಿಕ್ಕಿಲ್ಲ ಗುಹ್ಯ ನಿಜಬೋಧಿದು ಒಡೆದ್ಹೇಳುವದಲ್ಲ ಒಡನೆ ಸದ್ಗುರು ಘನ ದಯದಲಿದು ಪಡೆದವನೆ ತಾಂ ಬಲ್ಲ 1 ಕಲಿತಾಡುವ ಮಾತಿಗೆ ಸಿಲುಕದ ಮೂಲವಸ್ತುದ ಖೂನ ನೆಲೆನಿಭವೆ ತಾ ಅಗಮ್ಯಿದು ಬಲು ಸೂಕ್ಷ್ಮಸ್ಥಾನ ಬಲಿಯದೆ ರೇಚಕ ಪೂರ್ವಿದು ನೆಲೆಗೊಳ್ಳುದು ಸಾಧನ ನಿಲಕಡ್ಯಾಗದೆ ಕುಂಭಕಲಿದು ಬಲಿಯದು ಗುರುಙÁ್ಞನ 2 ಸ್ವಾನುಭವ ಸುಖ ಸಾಧಿಸಿ ಅನುದಿನದಿ ನೋಡಿ ಮನಗೆದ್ದು ಜನಕೆ ಮೋಹಿಸುವ ಅನುಭವ ಹೇಳಬ್ಯಾಡಿ ಭಾನುಕೋಟಿತೇಜನೊಲಿದು ತಾ ಖೂನಾಗುವ್ಹಾಂಗ ಮಾಡಿ ದೀನ ಮಹಿಪತಿ ಸ್ವಾಮಿ ಮನಗಂಡು ಮನೋಹರ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು