ಯತಿರಾಜ ಯತಿರಾಜ ಮಾಧವೇಂದ್ರ
ಗುರು ಸಾರ್ವಭೌಮ ಪ್ರಭು ಪ
ಧಾರುಣಿಯೊಳಗಪಾರವಾದ ವಿದ್ಯಾ
ವಾರಿಧಿಚಂದ್ರಮ ವೈರಾಗ್ಯಮೂರುತಿ1
ಶಿಷ್ಟಶಿರೋಮಣಿ ಕಟ್ಟಳೆಯಿಂದ ಬಲು
ದಿಟ್ಟತನದಿ ಯತಿಪಟ್ಟವೇರಿದನೀತ 2
ಭೇದದಿಂದತಿಶಯ ವಾದಿಪ ಮಹದು
ರ್ವಾದಿಗಳನು ಗೆದ್ದು ನೀ ಸಾಧಿಸಿದಧಿಕಾರ 3
ಅಧಮರ ಉಪಟಳಕೆದೆಪೊಡೆಯದೆ ನಿಜ
ಸದಮಲ ವೈಕುಂಠಪದವಿಗೆ ನಡೆದನು 4
ಮಧ್ವಶಾಸ್ತ್ರ ಪ್ರಸಿದ್ಧ ಪದ್ದತಿಗಳ
ಸಿದ್ಧಿಪಡೆದು ಪರಿಶುದ್ಧನೆನಿಸಿಕೊಂಡ 5
ಗುರುವೆಂದೆನಿಸಿ ಭೂಸುರರನುದ್ಧರಿಸೀತ
ಸ್ಥಿರವಾಗಿ ನಿಂತನು ಮೆರೆವ ಬುದ್ಧಿನ್ನಿಯೊಳು 6
ಪರಮಭಕ್ತಿಯಿಂದ ನಿರುತ ಸೇವೆಗೈದು
ವರವ ಬೇಡಿರೆಲೋ ಭರದಿ ಕೊಡುವ ಮೆಚ್ಚಿ 7
ಆಸೆರಹಿತನನುಮೇಷ ಪೂಜಿಸಿರೊ
ದೋಷ ದಾರಿದ್ರ್ಯವ ನಾಶಮಾಡುವನು 8
ಸ್ವಾಮಿ ಕೃಷ್ಣ ಶ್ರೀರಾಮನಾಮಾಮೃತ
ಪ್ರೇಮದಿಗರೆಯುವ ಕಾಮಧೇನು ಸತ್ಯ 9