ರಕ್ಷಿಸು ಎನ್ನನು ಪಕ್ಷಿವಾಹನ ಪಾಂಡು
ಪಕ್ಷನೆ ತವ ಭಕ್ತಿಯಗಲಿಸದೆ
ಲಕ್ಷಿಸಿ ಧ್ರುವನೊರೆದೆ ಲಕ್ಷ್ಮೀಶ ಮರೆಹೋದೆ ಪ
ಕ್ಷಿತಿಯೊಳು ನಾಂ ಬಲು ಚತುರನೆನಿಪದು
ರ್ಮತಿಯಿಂದ ಕಷ್ಟಕ್ಕೆ ಗುರಿಯಾದೆ
ರತಿಪತಿಪಿತ ಎನ್ನ ಅತಿತಪ್ಪು ಮನ್ನಿಸಿ
ಗತಿಗಾಣಿಸಿತ್ವಾಕ್ಯ ಅಖಿಲೇಶ
ಯತಿನುತ ಸುರಪೋಷ ಹತಭವ ಗುಣಕೋಶ 1
ಮಂದಮತಿಯತನದಿಂದ ನಾ ಮಾಡಿದ
ಹಿಂದಿನ ಅವಗುಣವೆಣಿಸದೆ
ಪಾದ ಎಂದೆಂದು ಮರೆಯದೆ
ಬಂಧುರಭಕ್ತಿಯ ವರ ನೀಡೊ
ಕಂದನೊಳ್ದಯಮಾಡೊ ತಂದೆ ನೀ ಕಾಪಾಡೊ 2
ದುರುಲನೆನಿಸಿ ಬಲು ಧರಣಿಯೊಳ್ತಿರುಗುವ
ಮರುಳುಗುಣವನೆನ್ನದೀಡ್ಯಾಡೊ
ಹರಿಯ ದಾಸರ ಸಂಗ ಕರುಣದಿ ದೊರಕಿಸಿ
ಪರಿಶುದ್ಧ ಮಾಡೆನ್ನ ಹೇಯ ಜನುಮ
ಶರಣಜನರ ಪ್ರೇಮ ಕರುಣಿಯೆ ಶ್ರೀರಾಮ 3