ನಿಜ ಗುಹ್ಯದ ಮಾತು ಸುಜನರಿಗಲ್ಲದೆ ತಿಳಿಯದು ಧ್ರುವ
ಕಣ್ಣಿಗೆ ಕಣ್ಹೇಳುವ ಮಾತು
ಪುಣ್ಯವಂತರಿಗಿದೆ ಹೊಳೆದೀತು
ಇನ್ನೊಬ್ಬರಿಗೇನು ತಿಳಿದೀತು ಚಿನ್ಮಯದ ವಸ್ತು 1
ನೀತಿಗೆ ನಿಜವಾಗಿಹ್ಯ ಮುಗುಟ
ಮಾತಿಗೆ ಮುಟ್ಟದವನೆ ಬಲು ನಿಗಟ
ಮತಿಹೀನರಿಗಿದೇ ಒಗಟ ಯತಿಜನರಿಗೆ ಪ್ರಗಟ 2
ಸೋಹ್ಯ ಸೊನ್ನೆಯ ಮಾತನೆ ಕೇಳಿಕೊ
ಗುಹ್ಯ ಹೇಳುವ ಗುರು ಬಳಕೊ
ಮಹಿಪತಿ ನಿನ್ನೊಳು ನೀ ತಿಳಕೊ ಸಿದ್ಧದ ಬಲು ಬೆಳಕೊ 3