ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸೈ ಸತತವು ಸಂಸ್ಮರಿಸೈ ಸತತವು ಪ ಯತಿಗುಣ ಭೂಷಣ ವ್ಯಾಸ ಯತೀಂದ್ರರ ಅ.ಪ ಗುರುಬ್ರಹ್ಮಣ್ಯರ ಕರಕಮಲದಿ ಪುಟ್ಟಿ ಪರಮ ಕೀರುತಿಯಿಂದ ಮೆರೆದ ಯತೀಂದ್ರರ 1 ಸುಖಬೋಧ ಸದಾಗಮಸಾರವ ನಿಜ ಮುಖದಿಂದ ಭೂಸುರರೊಳಗರುಹಿದವರ 2 ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವ ಚಂದದಿ ರಚಿಸಿ ಆನಂದಗೊಂಡವರ 3 ವರಕರ್ಣಾಟಕ ಸಿಂಹಾಸನದಲಿ ಮರಕತಮಣಿಯಭೀಷೇಕ ಪಡೆದವರ 4 ಉನ್ನತ ಗುಣ ಸುಖ ಚಿನ್ಮಯ ರೂಪ ಪ್ರ ಸನ್ನ ಶ್ರೀರಾಮನ ಭಕುತವರೇಣ್ಯರ 5
--------------
ವಿದ್ಯಾಪ್ರಸನ್ನತೀರ್ಥರು