ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕಂಡೆನು ಕೃಷ್ಣ ನಿನ್ನಯ | ಭವ್ಯ ಭಾವದ ಮೂರ್ತಿಯ ಪ ಹಿಂಡು ದೈವರ ಗಂಡನ ಅ.ಪ. ಪಾದ ಶೋಭಿಸೆ | ಘುಲು ಘುಲೆನ್ನುವ ಪೈಜಣ |ಉಲಿವ ಗೆಜ್ಜೆಯಲಿಂದ ಮೆರೆಯುವ | ಚಲುವ ಕೃಷ್ಣನ ಸೊಂಟವ 1 ಲಕ್ಷ್ಮೀ ವಕ್ಷಸ್ಥಿತನು ಎನಿಪನ | ಅಕ್ಷಯಾಂಬರವಿತ್ತನ |ಕುಕ್ಷಿಯೊಳು ಜಗ ಧರಿಸಿ ಮೆರೆವನ | ಪಕ್ಷಿವಾಹನ ದೇವನ 2 ವೃಷ್ಣಿಕುಲ ಸಂಭೂತನೆನಿಪನ | ಜಿಷ್ಣುವಿಗೆ ಸಖನೆನಿಪನ |ವಿಷ್ಣು ಮೂರುತಿ ವಿಷ್ಠರ ಶ್ರವ | ಕೃಷ್ಣನ ಮಹಮಹಿಮನ 3 ಕೌಸ್ತುಭ ಹಾರ ಶೋಭಿತ | ಸರಸಿ ಜಾಸನಧಿಷ್ಟಿತ ||ಮೆರೆವ ತ್ರಿವಳಿಯ ಕಂಠ ಶೋಭಿತ | ಸರ್ವ ವೇದಗಳುಧೃತ 4 ತೋಳ ಬಾಪುಕಿ ಬಾಹು ಕೀರ್ತಿಯ | ಕೈಲಿ ಕಡಗೋಲ್ಬಲದಲಿ |ಮೇಲೆ ರಜ್ಜುವ ತಾನೆ ಪಿಡಿದಿಹ | ಕೈಲಿ ವಾಮದ ಪಾಶ್ರ್ವದಿ 5 ಸುರರು ಪರಿ ತುತಿಪುದ 6 ಕುಂಡಲ ಫಣಿ ವಿಭೂಷಣ ಸೇವಿತ 7 ಭುವನ ಮೋಹನ ದೇವ ದೇವನ | ಪವನನಯ್ಯನು ಎನಿಪನ |ಮಧ್ವ ಸರಸಿಯ ತಟದಿ ಮೆರೆವನ | ಮಧ್ವಮುನಿ ಸ್ತುತಿಗೊಲಿದನ 8 ಅಷ್ಟ ಮಠಗಳ ಯತಿಗಳಿಂದಲಿ | ಸುಷ್ಠು ಪೂಜಿತ ಚರಣನದಿಟ್ಟ ಗುರು ಗೋವಿಂದ ವಿಠಲನ |ಸೃಷ್ಟಿ ಸ್ಥಿತಿ ಲಯ ಕರ್ತನ 9
--------------
ಗುರುಗೋವಿಂದವಿಠಲರು
ಕಾಮನ ಪಿತ ಕೃಷ್ಣ ಕಾಮಿನಿಯಾದನು ಕಾಮನ ಪಿತ ಕೃಷ್ಣ ಕಾಮಿನಿ ಆಗುವೊ ಕಾರಣ ಕೇಳಿರಿ ಕಾಮಿಸಿ ಶ್ರೀಹರಿ ಆ ಮಹಾಸುರರಿಗೆ ಸುಧೆಯನ್ಹಂಚುಣಿಸಲು ಶ್ರೀ ಮಾಯಾಪತಿಯು ತಾ ಸ್ತ್ರೀಯಾದ ಚೆಲುವಿಕೆ ಪ ರುಳಿ ಲುಲ್ಲು ಗೆಜ್ಜೆ ಪೈಜಣ ಪಾಗಡವನಿಟ್ಟು ಚರಣದಿ ಕಾಲುಂಗರ ಪಿಲ್ಯ ಮೆಂಟಿಕೆ ಝಣ ಝಣ ನಾದ ಕಾಳಿಯ ಫಣ ತುಳಿದಂಥ ಖಳರ ಮರ್ದನ ದಿವ್ಯ ತರುಣಿ ತಾನಾದನು 1 ಸೆರಗು ನಿರಿಯು ಜರತಾರಿ ಪೀತಾಂಬರ ಬಿಡಿ ಮುತ್ತಿನುಡಿಗಂಟೆ ನಡುವಿನ್ವೊಡ್ಯಾಣ ಸಡಗರದಿಂದ್ವೊಪ್ಪೊ ತಾಳಿ ಪದಕವಿಟ್ಟು ಮೃಡನ ಪ್ರಿಯನು ಮುದ್ದು ಮಡದಿ ತಾನಾದನು 2 ಕಂಚುಕ ತೋಳಿನಲ್ವಂಕಿ ಬÁಜುಬಂದು ಮಿಂಚಿನಂದದಿ ನಲಿದಾಡುತ ಗೊಂಡ್ಯವು ಕಂಕಣ ತೋಡ್ಯ ವಜ್ರದ್ವಾರ್ಯ ಹರಡಿಯು ಪಂಚ ಬೆರಳಿನಲ್ಲುಂಗುರವನಿಟ್ಟು ಸೊಬಗಲಿ 3 ಚಿಂತಾಕು ಸರಿಗೆ ಚಿನ್ನದ ಗುಂಡು ಹವಳವು ಕೆಂಪು ಏಕಾವಳಿ ಮಲಕು ತಾಯಿತ ಮುತ್ತು ಮಿಂಚುವೋ ಪದಕ ಮುತ್ತಿನ ಕಟ್ಟಾಣಿಯು ಪಂಚರತ್ನದ ಹಾರ ಪರಮಾತ್ಮಗಲೆಯುತ4 ಉಂಗುರ ಕೂದಲು ಶೃಂಗಾರ ಕ್ಯಾದಿಗೆ ಚಂದ್ರ ಚೌರಿ ಜಡೆಬಂಗಾರ ರಾಗಟೆ ಮುಂದೆ ಮುತ್ತಿನದಂಡೆ ಮುಡಿಯಲ್ಲೆ ಒಪ್ಪಿದ ದುಂಡು ಮಲ್ಲಿಗೆ ದÉೂೀಷದೂರನಿಗಲೆವುತ 5 ವಾಲೆ ಬುಗುಡಿ ಬಾಳ್ಯ ಚಳತುಂಬು ಚಂದ್ರ ಮುರುವು ಚಿನ್ನದ ಕಡ್ಡಿ ಕಿವಿಯಲ್ಲಿ ಕುಂದಣ ಕುಸುರು ವಜ್ರಗಳು ಕೆಂಪ್ಹೊಳೆವಂಥ ದುಂಡು ಮುತ್ತಿನ ಮುಕುರ್ಯವ ಮೂಗಿನಲ್ಲಿಟ್ಟು 6 ಅಚ್ಚ ಮುತ್ತಿನ ದಂಡೆ ಕುಚ್ಚು ತೊಂಡಿಲುಗಳು ಹಚ್ಚೆಯ ಬೊಟ್ಟು ಕಸ್ತೂರಿ ಕುಂಕುಮನಿಟ್ಟು ಪಚ್ಚೆ ಮಾಣಿಕ್ಯದರಳೆಲೆ ಚಂದ್ರ ಸೂರ್ಯರು ನಿತ್ಯ ತೃಪ್ತನು ನೀಲವರ್ಣದಂತ್ಹೊಳೆಯುತ 7 ಆ ಮಹಾವೈಕುಂಠಪುರದರಸಾದ ಈ ಮಹಾ ರಜತ- ಪೀಠ ಪುರದಲಿ ಬಂದು ಪ್ರೇಮದಿ ನಿಂತು ನೋಡುತ ಬಂದ ಜನರಿಗೆ ಕಾಮಿತ ಫÀಲ ಮುಕ್ತಿ ಕೊಡುವ ಕಮಲಾಪತಿ 8 ಅಷ್ಟಯತಿಗಳಿಂದಲಿ ಪೂಜೆಯಗೊಂಬೊ ಲಕ್ಷ್ಮಿಯ ಪತಿಯು ಸ್ತ್ರೀರೂಪವ ಧರಿಸಿರೆ ದೃಷ್ಟಿಂದೆ ನೋಡದಿನ್ನಿರುವೋರೆ ಭೀಮೇಶ- ಕೃಷ್ಣ ನಿನ್ನ ಮನದಲ್ಲಿಟ್ಟು ಸ್ತುತಿಸುವೆನು 9
--------------
ಹರಪನಹಳ್ಳಿಭೀಮವ್ವ
ಸಂಪತ್ತು ನಿನಗಿಂದು ಪೊಸದಾಯಿತೆ | ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ ಪ ಪಾಲು ಮೊಸರು ಕದ್ದು ಗೋವಳರೆಂಜಲನುಂಡು | ತಾಳ ಫಲಗಳ ಮೆದ್ದದು ಮರದಿಯಾ || ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು | ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು 1 ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ | ಕೊಂಡು ಭಂಡಾಗಿ ಇದ್ದದು ಮರದಿಯಾ || ವಾಹನ | ಕರ ಮುಗಿದು ಕೊಂಡಾಡುವ ಭರವೊ 2 ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ | ವತಿಯಲ್ಲಿ ವಾಸವಾದದು ಮರದಿಯಾ || ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ | ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ 3 ಈ ವೈವಸ್ವತ ಮನ್ವಂತರ ಉಳ್ಳತನಾಕಾ | ಕರ್ಮ ತಪ್ಪಲರಿಯದು || ಕೋವಿದರು ಪೇಳುವದು ಪುಸಿ ಎನ್ನದಿರು ದೇವ | ಈ ಉಡಪಿನ ಸ್ಥಾನ ನೆಚ್ಚಕೇನೊ ನಿನಗೆ 4 ಕ್ಲೇಶ ಕಳಿಯದಿರಲು | ಭಕುತವತ್ಸಲನೆಂಬ ಬಿರಿದು ಬರಿದೇ || ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ | ವಿ |ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ 5
--------------
ವಿಜಯದಾಸ