ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಣಕಮಲಯುಗಕೆ ನಮಿಪೆ ನಿರುತವನುದಿನ | ಶ್ರೀ ರಾಘವೇಂದ್ರ ಪ ಕರುಣಾಸಾಂದ್ರ ಯತಿಕುಲೇಂದ್ರ ಅ.ಪ ವೇನಮತವಿದಾರ ಸುಂದರ ಜ್ಞಾನದಾತ ಗುರುವರ | ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ 1 ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ | ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ 2 ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು | ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ3 ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ | ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4 ಶ್ರೀಶಕೇಶವಾಂಘ್ರಿದೂತ ದಾಸಜನನುತ | ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
--------------
ಶ್ರೀಶ ಕೇಶವದಾಸರು