ಬಂದೆ ಭಗವತ್ಪಾದಯುಗಾರ
ವಿಂದಕೆ ಮಿಳಿಂದನಾಗಿ
ವಂದನೀಯರೆ ಯತಿಕುಲಾಬ್ಧಿ
ಚಂದ್ರರ ಭುವನೇಂದ್ರತೀರ್ಥರೆ1
ಪರಮ ಪಾವನ ಭುವನೇಂದ್ರರ
ಕರಸಂಜಾತ ವರದೇಂದ್ರರ
ಕರಸರೋರುಹಭವರೆ ಮಹಾ
ಕರುಣಾಂತಃಕರಣ ಧೀರರೆ2
ಸುಮತೀಂದ್ರಾದಿ ಯತೀಂದ್ರರ
ವಿಮಲ ಹೃದಯಕಮಲಭಾಸ್ಕರ
ಅಮಮ ನಿಮ್ಮ ಕಾಂಬ ಯೋಗ
ಸುಕೃತ ಭೋಗಪೂಗ3
ಪೂರ್ಣಪ್ರಜ್ಞಾಚಾರ್ಯವರ್ಯ
ಸನ್ನುತ ಮತಧೈರ್ಯ ಧುರ್ಯ
ಧನ್ಯನಾದೆನು ನಾನಿಂದು
ಸನ್ನಿಧಾನವನು ಕಂಡೆನು4
ಶ್ರೀಶ ಲಕ್ಷ್ಮೀನಾರಾಯಣ
ವ್ಯಾಸ ರಘುಪತಿಯ ಚರಣೋ-
ಪಾಸಕರೆ ಪಾವನರೆ
ಕಾಶೀವiಠಾಧೀಶ್ವರರೆ 5