ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯಭೋಧ ಯತಿಕುಲವರನೆ ನಿತ್ಯ ತುತಿಸಿ ವಂದಿಸುವ ತಾವಕರೊಳು ಎಣಿಸೋ ಪ ಅರ್ಥಿಜನ ಚಿಂತಾಮಣಿ ಸತ್ಕರುಣಿ ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ ಖ್ಯಾನ ಪೇಳುವ ಕಾಲದಿ ಶ್ವಾನರೂಪದಿ ಪವಮಾನ ಜನರು ನೋಡೆ ಕಾಣಿಸಿಕೊಂಡನಂದೊ ತಾ ಬಂದು 1 ಬವರಗೋಸುಗ ಬಂದ ಯವನಾಧಿಪತಿ ನಿಮ್ಮ ಸುವಿಚಿತ್ರ ಮಹಿಮೆ ಕಂಡು ಪ್ರವಿನೀತನಾಗಿ ಕಪ್ಪವೆ ಕೊಟ್ಟು ನಮಿಸಿದ ಕವಿ ಆವಾ ವಿಭವಾ ವರ್ಣಿಸುವಾ 2 ಇವರು ದೇವಾಂಶರೆಂದರುಪುವಗೋಸುಗ ಬಂದು ದಿವಿಜತರಂಗಿಣಿಯು ಶಿವನಂಗಭೂರುಹ ಮೂಲ ಭಾಗದಲಿ ಉ ದ್ಭವಿಸಿ ಕಂಗೊಳಿಸಿದಳು ಕೃಪಾಳು 3 ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ ವಂತನಂಘ್ರಿ ಕಮಲ ಸಂತತ ಸರ್ವತ್ರ ಚಿಂತಿಸುತಿಪ್ಪ ಮ ಹಾಂತರಿಗೇನಚ್ಚರೀ ವಿಚಾರ 4 ಚಾರು ಚರಿತ ಭೂ ಸುರವರ ಸನ್ನುತನೇ ಪರಮ ಪುರುಷ ಜಗನ್ನಾಥ ವಿಠ್ಠಲ ನಿಮ್ಮ ಪರಿಪರಿ ಮಹಿಮೆ ಎಲ್ಲಾ ತಾ ಬಲ್ಲಾ 5
--------------
ಜಗನ್ನಾಥದಾಸರು