ಪರಮಹಂಸ ಪರಿವ್ರಾಜಕ ಗುರುವರ್ಯ | ಶಿರಬಾಗುವೆ ಆರ್ಯ ಪ
ಚರಣಕಮಲ ನೆರೆನಂಬಿಹೆ ನಾನಿನ್ನು | ಭಜಕರ ಸುರಧೇನು ಅ.ಪ
ಪುರುಷೋತ್ತಮ ಯತಿಕರ ಸರಸಿಜ ಜಾತ | ಜಗದೊಳಗೆ ಪುನೀತ
ಅರಿಷಡ್ವರ್ಗವ ದೂರಗೈದ ಧೀರ | ಶರಣರಿಗಾಧಾರ
ತರಣಿ ಸದೃಶ ಸುವಿರಾಜಿತ ಶುಭಗಾತ್ರ | ಪಾವನ ಚರಿತ್ರ
ನಿರುತ ನಿಮ್ಮ ಸಂಸ್ಮರಿಸುವ ನರಧನ್ಯ | ಭುವಿಯೊಳು ಸನ್ಮಾನ್ಯ 1
ವ್ಯಾಸರಾಯ ಕರಪೂಜಿತ ಶ್ರೀ ಚರಣ | ನಿಗಮಾಗಮ ನಿಪುಣ
ಶ್ರೀ ಸಮೀರಮತ ಸ್ಥಾಪಕ ಧುರೀಣ | ಸುಜ್ಞಾನಿವರೇಣ್ಯ
ಭೂಸಿತ ಸದ್ಗುಣ ಸುಮಲಾಭರಣ | ಶರಣ ಸಂಜೀವನ
ಭಾಸುರ ಸೂರ್ಯಾಂಶಜ ಯತಿಕುಲರತ್ನ | ಭೂಸುರ ಸನ್ಮಾನ್ಯ 2
ಯೋಗಿವರ್ಯ ಕರುಣಾಕರ ಗುಣನಿಲಯ | ಶುಭನಾಮಧೇಯ
ನಾಗಶಯನ ಶ್ರೀ ಕರಿಗಿರಿನಿಲಯನ್ನ | ಪೂಜಿಪ ಗುರುರನ್ನ
ಶುಭ ಚರಿತ | ದೂರೀಕೃತದುರಿತ
ಬಾಗಿ ದೈನ್ಯದಲಿ ಬೇಡುವೆ ತವಚರಣ | ಭಕ್ತಿಯನುದಿನ 3