ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಯತಿವರ್ಯರು ಶ್ರೀ ವ್ಯಾಸರಾಯರ ಸ್ತುತಿ ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ ದುರುಳ ವಾದಿಗಳನ್ನು ಮರುಳು ಮಾಡೋರನ್ನ ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ ಧರಣಿ ಸುರರ ಪರಿವೃಢರ ಸುನಿಕರಕೆ ಪರಿಪರಿಯಲಿ ಉಪದೇಶಿಸುತಿಪ್ಪಗೆ 1 ಕನಕ ಕಶಿಪುತನಯನ ಘನ ಅಂಶದಿ ಫಣಿಗಣ ರಮಣನಾವೇಶದಿ ಪೊಳೆಯುತ ದಿನದಿನದಲಿ ಹರಿಮನ ತಣಿಸುತಲಿಹ ಘನ ಮಹಿಮನೆ ಶ್ರೀ ಯತಿಕುಲತಿಲಕಾ 2 ಉದ್ದಂಡ ವಿತಂಡಕೆ ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ ಷಂಡಗಳನೆ ಖಂಡಿಸುತಿಹ ಯತಿಯೆ 3 ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ ಬ್ರಹ್ಮಜನಕ ನರಸಿಂಹ ಮೂರುತಿಯ ಹೃ- ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ ಹೃದಯಾಂಬುಧಿಯೊಳು ಮೆರೆವಗೆ 4 ದಶದಿಶೆಯಲಿ ದಶರಥಸುತ ಮಹಿಮೆಯ ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ ವಸುಧಿಯೊಳಗೆ ಸುಕರ ಸುಚರಿತೆಗೆ 5 ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು ನಲಿಯುತ ಕುಣಿಕುಣಿದಾಡುತಲಿಪ್ಪನು ಥಳಥಳಿಸುವ ರಾಮ ವೇದವ್ಯಾಸರು ನಿಮ- ಗಿಳೆಯೊಳಮೂಲ್ಯ ಪ್ರಸಾದವನೀವರು 6 ಅಡಿಗಡಿಗತಿ ದೃಢತರ ಯುಕ್ತಿಗಳಿಂದ ಸಡಗರದಿಂದಲಿ ಬಿಡದೆ ನುಡಿಯುತ ನಡದದ್ವೈತದಡವಿಯೊಳಗೆ ಪೊಕ್ಕು ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7 ಶ್ರೀದವಿಠಲಗತಿ ಪ್ರೀಯರಾದ ಶ್ರೀ- ಪಾದರಾಯರಲಿ ಓದಿ ಗ್ರಂಥಗಳ ವಾದಿರಾಜ ವಿಜಯೀಂದ್ರ ಪ್ರಮುಖರಿಗೆ ಆದರದಲಿ ಪಾಠ ಹೇಳುತಲಿಪ್ಪಗೆ 8
--------------
ಶ್ರೀದವಿಠಲರು
ನಂಬಿದೇ ಗುರುವರಾ ನಂಬಿದೇಪ ನಂಬಿದೆ ಗುರುಸಾರ್ವಭೌಮಾ ತುಂಟುಮನದೊಳು ಹರಿಭಕ್ತಿ ನಿಸ್ಸೀಮಆಹಾ ಅಂಬುಜೋದ್ಭವಪಿತನ ಕಂಭದಿ ತೋರಿದ ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ. ದಾಸನೆಂದಡಿಗೆ ಬಿದ್ದೆನೋ ಈಗ ದೋಷ ನಾಶಮಾಡೋ ಎನಗೆ ಬೇಗ ಆಹಾ ವಾಸುಕಿಶಯನನ ಬ್ಯಾಸರದೆ ಸ್ತುತಿಸಿ ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ 1 ಪಾತಕರೊಳಗೆ ಅಗ್ರೇಸರನಾನು ಪೂತಮಾಡುವರೊಳಗೆ ನಿಸ್ಸೀಮ ನೀನು ಆಹಾ ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ 2 ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ ಭೂಪನ ಕುಹಯೋಗ ಕಳೆದ ಯತಿಕುಲತಿಲಕ 3 ಮಧ್ವಶಾಸ್ತ್ರಗಳ ಮಂದರರಿಯದಿರಲು ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ಆಹಾ ಆದರದಿಂದಲಿ ಪುರಂದರಕನಕರಿಗೆ ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ 4 ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ಆಹಾ ಕತ್ತಲೆ ಅದ್ವೈತವಾದಗಳಿಗೆಲ್ಲಾ ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ 5 ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ಆಹಾ ಅಪ್ಪ ಶ್ರೀರಾಮರ ಪೂಜಿಸಬೇಕೆಂದು ಒಪ್ಪಿಸನ್ಯಾಸವ ರಾಘವೇಂದ್ರನಾದ 6 ಮುದದಿ ದೇಶ ದೇಶವ ಚರಿಸಿದೇ ಸಮಯದಿ ಸುಜನರಕ್ಲೇಶಗಳಳಿದೇ ಆಹಾ ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ ಬುಧರಿಗೆ ತತ್ವ ಕನ್ನಡಿ ತೋರ್ದ ಗುಣಗಣನಿಧಿಯೇ7 ಪರಿಪರಿ ಮಹಿಮೆಯ ತೋರುವ ಗುರುವೇ ಸುರತರು ಅಂದದಿ ಹರಕೆ ಗಳೀವೆ ಪ್ರಭುವೇ ಆಹಾ ಮೂರೆರಡು ಒಂದುನೂರು ವರುಷ ಪರಿಯಂತ ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು8 ದಯದಿಂದ ನೋಡೆನ್ನ ದೀನೋದ್ಧಾರ ಭವ ಬಿಡಿಸು ಕರುಣಾಸಾರ ಆಹಾ ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣ ವಿಠಲನ ಹೃ- ದಯಮಂದಿರದಿ ತೋರೆನಗೆ ಗುರುಸಾರ್ವಭೌಮ 9
--------------
ಕೃಷ್ಣವಿಠಲದಾಸರು
ನೀರಜ ಯುಗ ಮನೋ - ವಾರಿಜದಲಿ ನಾ ಭಜಿಸುವೆನು ಪ ಸಾರಿದ ಜನರ‌ಘದೂರದಿ ಓಡಿಸಿ ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ ಅವರ ಪದಜಲ ಈ ಭುವನತ್ರಯ ಪಾವನ ತರವೆಂದೆನಿಸುವದೋ ಅವರ ಪದಯುಗ ಕೋವಿದಜನರು ಭಾವದಿ ದಿನದಿನ ಸೇವಿಪರೋ ಅವರ ಹೃದಯದಿ ನಾರಾಯಣ ಚ - ಕ್ರಾವತಾರವ ಧರಿಸಿಹನೊ ಶ್ರೀವರ ಹರಿ ಕರುಣಾವಲೋಕನದಿ ದೇವಸ್ವಭಾವವ ನೈದಿಹರೋ 1 ಆವ ಮಾನವನಿವರಚರಣ ಸೇವಕತೆರನೆಂದೆನಿಸುವನ್ನೋ ಕೋವಿದ ಜನರೆಲ್ಲರು ಆವನ ದೇವೋತ್ತುಮನೆಂದೆನಿಸುವನು ಪಾವನಿ ಮುಖ ದೇವೋತ್ತುಮರೆಲ್ಲರು ಈ ವಿಧ ಮಹಿಮೆಯ ತೀವ್ರದಿ ತೋರುವ 2 ಅವರು ಅವನೀ ದೇವತೆಗಳಿಗೆ ಜೀವನವಿತ್ತು ಪೊರೆದಿಹರೋ ಪಾವಕಘಾಕಿದ ಹಾರವ ಮತ್ತೆ ಭೂವರನಿಗೆ ತಂದಿತ್ತಿಹರೋ ಮಾವಿನ ರಸದಲಿ ಬಿದ್ದಿಹ ಶಿಶುವಿಗೆ ಜೀವನವಿತ್ತು ಕಾಯ್ದಿಹರೋ ಶೈವನ ನಿಜಶೈವವ ಬಿಡಿಸೀ ತಮ್ಮ ಸೇವೆಯನಿತ್ತು ಕಾಯ್ದಿಹರೋ 3 ಸಲಿಲವ ತಂದಿರುತಿಹ ನರನಿಗೆ ಸುಲಲಿತ ಮುಕ್ತಿಯನಿತ್ತಿಹರೋ ಚಲುವ ತನಯನಾ ಪುಲಿನದಿ ಪಡೆದಿಹ ಲಲನೆಯ ಚೈಲದಿ ಕಾದಿಹರೋ ಸಲಿಲವು ಇಲ್ಲದೆ ಬಳಲಿದ ಜನಕೆ ಸಲಿಲವನಿತ್ತು ಸಲಹಿದರೋ ಇಳೆಯೊಳು ಯತಿಕುಲತಿಲಕರೆಂದೆನಿಸಿ ಸಲಿದಂಥದು ತಾವು ಸಲಿಸಿಹರೋ 4 ಅನುದಿನದಲಿ ತಮ್ಮ ಪದಕಮಲವನು ಮನದಲಿ ಬಿಡದೆ ಭಜಿಸುವರಾ ಜನರಿಗೆ ನಿಜಘನಸುಖವನು ಕೊಟ್ಟವ - ರನುಸರಿಸೀ ಇರುತಿಹರಾ ಮನೋ ವಾಕ್ಕಾಯದಿ ನಂಬಿದ ಜನಕೆ ಜನುಮವನ್ನುನೀಡರು ಇವರ ಘನಗುಣ ನಿಧಿ ಗುರುಜಗನ್ನಾಥ ವಿಠಲ - ನಣುಗಾಗ್ರೇಸರೆರೆನಿಸಿಹರಾ 5
--------------
ಗುರುಜಗನ್ನಾಥದಾಸರು
ವಾದಿರಾಜ ಗುರು ನೀ ದಯಮಾಡದೆ ಈ ದುರಿತಗಳ ಕಳೆದಾದರಿಪರಾರೊ ಪ ದೈಶಿಕಾರ್ಯ ವಾಗೀಶಕುವರ ತವ ದಾಸಸಮೂಹವ ನೀ ಸಲಹೋ ಸದಾ 1 ನೀ ಗತಿಯೆಂದನುರಾಗದಿ ನಂಬಿದೆ ಭೋಗಪತೀಶನ ರೋಗವ ಕಳೆದೆ 2 ಜನ್ಮಾಧಿವಾಧ್ಯುನ್ಮಾದ ಭ್ರಮ ನಿಮ್ಮ ಮೊರೆ ಹೊಕ್ಕ ಮೇಲಿನ್ನರಲುಂಟೆ 3 ಭೂಮಿಪರುಪಟಳಕಾ ಮಹಿನಾಥನು ತಾ ಮೈಮರೆದಿರೆ ನೀ ಮುದವಿತ್ತೆ 4 ಮೋದಮುನಿಮತ ಪಯೋದಧಿ ಪೂರ್ಣ ವಿಧೋದಯ ಶರಣರ ಕಾದುಕೊ ಧೊರಿಯೆ 5 ಕಲಿಬಾಧೆಯು ವೆಗ್ಗಳವಾಗಿದೆ ಕಾಯೊ ಇಳೆಯೊಳು ಯತಿಕುಲತಿಲಕ ಕೃಪಾಳೊ 6 ನಿನ್ನೊಶನಾದ ಜಗನ್ನಾಥ ವಿಠಲನ ಉನ್ನಾಹದಲಿ ತೋರೆನ್ನ ಮನದಲಿ 7
--------------
ಜಗನ್ನಾಥದಾಸರು