ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಿಯೋ ಬೆಳಿ ಮನವೇ ಬೆಳಿಕಂಡ್ಯಾ ಬೆಳಿ ಮನವೇ ಬೆಳಿ ನಿನ್ನ ಹೊಲವನು | ಇಳೆಯೊಳು ಯಣಿಗಾಣದ್ಹಾಂಗೆ 1 ಗುರುವಿನಭಯ ಕೊಂಡು ಸತ್ವದಾ ಹೊಲ ಹಿಡಿದು | ಜರಿದು ಸಂಗಿಗಳನ್ನೆಲ್ಲಾ 2 ವಿವೇಕವೇಯಂಬಾ ನೇಗಿಲ ಎಂಟು | ಭಾವವೆಂಬೆತ್ತುಗಳಿಂದ 3 ದೃಢಪಾಶದಿಂದಲಿ ಕಟ್ಟಿ ಯಚ್ಚರವೆಂಬಾ | ಒಡನೆ ಶಿಕ್ಷದಿ ನಡೆಸುತಾ 4 e್ಞÁನ ಭಕ್ತಿ ವೈರಾಗ್ಯ ತಾಳದ ಬಲದಿ | ಅನನ್ಯ ಭಾವ ಕೂರಿಗೆಯಿಂದಾ 5 ಗುರು ಕರುಣ ಮಳೆ ಗರೆಯೆ ವೇದಾಂತ ಬೀಜ | ಭರದಿ ಬಿತ್ತಿ ನಾದುವಂತೆ 6 ಅನುಮಾನ ಕಸ ತೆಗೆದು ಬೋಧವ ಯಡಿಹಾಯ್ದು| ಧನಗಾಳ ತುಂಬಿಡುವಂತೆ 7 ವರಕ್ಷೋಭ ಯಂಬಾ ನುಡಿ ಹಕ್ಕಿ ಬರಗುಡದೆ | ಪರಮ ಜಾಗೃತಿಯ ಕವಣಿಯಿಂದಾ 8 ಬೇರೆ ಬೇರೆ ದೋರ್ವುದೆಲ್ಲಾ ವಬ್ಬುಳಿ ಮಾಡಿ | ಸಾರಿಹ ಶೃತಿ ವಾಕ್ಯದಿಂದ 9 ದೋರುವಾ ದೃಶ್ಯ ಹೆಕ್ಕಲ ಬಿಟ್ಟು ವಳಗಿರುವ | ತೂರಿ ಅಹಂಭಾವ ಹೊಟ್ಟವನು 10 ದೈನ್ಯವನು ಹಿಂಗಿ ಬಳಕೊಂಡು ಅನ್ಯರಾ ಮರೆ ಹೋಗದಂತೆ 11 ಪರಿಪೂರ್ಣಾದ ಬಳಿಕ ಒಕ್ಕಲು ತನಕ | ಮರುಳೆ ನೀ ಸಿಕ್ಕದಿರು ಕಂಡ್ಯಾ 12 ಸಂಚಿತ ಸರ್ವ ಬಿಡಿಸಿಕೊ ಸುತ ಪ್ರಭು ಗುರು ಮಹಿಪತಿ ವಲುಮೆಯಿಂದಾ 13
--------------
ಕಾಖಂಡಕಿ ಶ್ರೀ ಕೃಷ್ಣದಾಸರು