ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆ ಬಿಡಲಿಲ್ಲಾ ಎನ್ನಂತ ತಿಳಿಯಲಿಲ್ಲಾ ಪಾದ ಕಾಣದೇ ವ್ಯರ್ಥ ಸತ್ತೆನಲ್ಲಾ ಪ ನೀರಮೇಲಣಗುಳ್ಳೆ ಸಂಸಾರವೆಂಬುವ ಬಳ್ಳಿ ತೋರಿ ಯಡಗೋದಿಲ್ಲ ಆಧಾರ ಗತಿಗೆ ಅಲ್ಲಿ ನೀರಜದೆನೆ ನೀರಿನ ಸಂಗ ಪರಿ ಇರುತಿಹೆ 1 ಹೆಣ್ಣು ಹೊನ್ನು ಮಣ್ಣು ಜೀವ ಭವ ಪೆಣ್ಣು ಫಣಿಗಣ್ಣಗೆ ಬಿಡದಿನ್ನು ಬೆಣ್ಣೆ ಜಲವ ಉಣ್ಣದ ಪರಿ ಕುನ್ನಿ ವಿಷಯಗಣ್ಣಿಸದಿಹೇ 2 ಶುಭಗುಣಗಣ ಹೃದಯ ಎನಗಭಯವೀಯೋ ಸದಯಾ ಪ್ರಭು ನರಸಿಂಹ ವಿಠಲಯ್ಯಾ ನಿನ- ಗಭಿನಮಿಸುವೆನಯ್ಯಾ ಸುಭಗ ನಿನ್ನ ಪಿಡಿದೆನಯ್ಯಾ ಶುಭಕರ ಸಿರಿಮೊಗ ತೋರಯ್ಯಾ 3
--------------
ನರಸಿಂಹವಿಠಲರು