ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಂಗನಾಥ ಕಾಯೋ ಕಾವೇರಿರಂಗ | ಕಾರುಣ್ಯಪಾಂಗಾ ಪ ಕಾಯೊ ಕಾಯೊ ಕಾವೇರಿ ನಿಲಯನೆ ಕಾಯೊ ವಾಙ್ಮನ ಪೂರ್ವಕದಿ ತವ ತೋಯಜಾಂಘ್ರಿಯ ನಂಬಿದೆನುಭವ ಮಾಯಗೆಲುವ ಉಪಾಯ ತೋರಿ ಅ.ಪ ದೇವಾಧಿದೇವ ನೀನು | ಪ್ರಣತ ಜನರಿಗೆ ದೇವತರು ಮಣಿಧೇನು | ಎಂದರಿತು ನಿಷ್ಟಿಲಿ ಧಾವಿಸಿ ಬಂದೆ ನಾನು | ರಘುವಂಶ ಭಾನು ಕಾವನಯ್ಯ ನೀನೊಲಿದು ಕರುಣದಿ ಪಾವಮಾನಿಯ ಶಾಸ್ತ್ರವರಿತು ಭಾವ ಭಕ್ತಿಲಿ ನಿನ್ನ ಪಾಡುವ ಕೋವಿದರ ಸೇವಕನ ಮಾಡಿ 1 ಪನ್ನಂಗಪತಿಶಯನ | ಶಿರಬಾಗಿ ಪ್ರಾರ್ಥಿಪೆ ಪನ್ನಂಗರಿಪುವಾಹನ | ಎನ್ನಪರಾಧವ ಮನ್ನಿಸೊ ಹಯವದನ | ವೈಕುಂಠ ಸದನ ನಿನ್ನನುಗ್ರಹ ಪೂರ್ಣಪಡೆದು ಜಗನ್ನಾಥದಾಸರ ಸನ್ನಿಧಾನದಿಂ ಬಂದೆ ತಂದೆ 2 ನೇಸರ ಕುಲಜಾತ | ವೇದೋಕ್ತಕ್ರಮದಿಂ ಭೂಸುರ ಕರಪೂಜಿತ | ಕೌಶಿಕನ ಯಜ್ಷವ ಪೋಷಕ ಪವನಪಿತ | ಪಾವನ್ನ ಚರಿತ ವಾಸುದೇವಾನಂತ ಮಹಿಮೆ | ವಿಭೀಷಣಪ್ರಿಯ ದೋಷಕಳೆಯುವ | ಭೇಷಪುಷ್ಕರಣೀಶ ಕೇಶವ ದಾಶರಧಿ ಶ್ರೀ ಶಾಮಸುಂದರ 3
--------------
ಶಾಮಸುಂದರ ವಿಠಲ