ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಮಂಗಳಂ ಶುಭೋದಯ ಮಂಗಳಂ ಜಯ ಕಕುದ್ಗಿರಿ ಗಂಗಾಧರ ಲಿಂಗಗೆ ಪ ಜಡೆಯುಡುಪತಿಯು ಗಂಗೆಯೊಡಗೂಡ್ದ ಮಸ್ತಕಕೆ ಮಡುಹಿ ಮಾರನ ಭಸಿತದಾಳ್ದ ಪಣೆಗೆ ಪೆಡೆಯೆತ್ತಿ ಗಾನಗೈವಹಿ ಕುಂಡಲಂಗಳಿಗೆ ದೃಢಭಕತರಿಷ್ಟದಾಯಕ ಶಿವನಿಗೆ 1 ಸೋಮಸೂರ್ಯಾಗ್ನಿ ಲೋಚನೆಗೆ ವಿಷದಾಳಿ ಸುರ ಸ್ತೋಮವನು ಕಾಯ್ದ ಶೋಭನ ಕಂಠಕೆ ಭೀಮನಿಗೆ ಭಯಹರಗೆ ಪರಶುಮೃಗ ಹಸ್ತನಿಗೆ ಕಾಮಿತಾರ್ಥದ ವರಾಭಯ ಕರನಿಗೆ 2 ನಾಗಕಂಕಣಧರಗೆ ನಾಗೋತ್ತರೀಯನಿಗೆ ನಾಗಯಜ್ಞೋಪವೀತವ ತಾಳ್ದಗೆ ನಾಗಚರ್ಮಾಂಬರಗೆ ನಗರಾಜ ಚಾಪನಿಗೆ ಗಮನ ಬಾಣಗೆ ಶಿವನಿಗೆ 3 ಗಿರಿಜೆಗರ್ಧಾಂಗವನ್ನಿತ್ತ ಶುಭವಿಗ್ರಹಗೆ ವರ ವೃಷಭವನ್ನೇರಿ ಸಂಚರಿಪಗೆ ಬರೆದುಂಗುಟದಿ ಹೊಳೆದ ಚಕ್ರದಿಂ ದೈತ್ಯಕುಲ ಹರಣ ವರದಾಯಕಗೆ ಸರ್ವೆಶಗೆ 4 ತಿರುಪತಿಯ ವಾಸವನು ದೃಢಗೈದು ಕಕುದ್ಗಿರಿಯ ಪರಮ ಕ್ಷೇತ್ರದಿ ಮಹಿಮೆಗಳ ತೋರ್ಪಗೆ ವರದ ವೆಂಕಟಪತಿಗೆ ಗಂಗಾಧರೇಶ್ವರಗೆ ಶರಣಾಗತರ ಕಾಯ್ವ ಸಾಂಬಶಿವಗೆ 5
--------------
ತಿಮ್ಮಪ್ಪದಾಸರು
ಪೂಜೆಯ ಮಾಡಿದೆನೆ ದೇವರ ಪೂಜೆಯ ಮಾಡಿದೆನೆಈ ಜಗದರಸ ಚಿದಾನಂದ ತಾನೆಂದು ಪ ಶುದ್ಧ ಸ್ನಾನವನೆ ಮಾಡುತ ನಿರ್ಮಲ ವಸನವನುಬಂಧಿಸಿ ಬಿಗಿದು ಸ್ವಸ್ಥಾನಾಸ ಮಧ್ಯದಲ್ಲಿ ಕುಳಿತು 1 ನಿಸ್ಪøಹ ಭಸಿತವನೇ ಧರಿಸುತ ನಿಷ್ಕಲಂಕನಾಗಿವಿಶ್ವೇಶ್ವರ ವಿರೂಪಾಕ್ಷನೇ ತಾನೆಂದು 2 ಸರ್ವ ಪೂಜಿತನು ತಾನೀಗ ಸರ್ವನಿವಾರಿತನುಸರ್ವರೂಪಕ ತಾನೀಗೆಂದು ಧ್ಯಾನವರ್ಪಿಸಿದೆನೆ3 ಆನಂದ ವ್ಯಾಪಕನೆ ತಾನೀಗ ಆನಂದ ರೂಪಕನೇಆನಂದಾತ್ಮಕ ತಾ ನೀಗೆಂದಾಹ್ವಾನ ವರ್ಪಿಸಿದನೆ 4 ಇಂದ್ರಿಯ ರೂಪಕ ತಾನೀಗ ಇಂದ್ರಿಯ ವ್ಯಾಪಕನೇಇಂದ್ರಿಯ ಸಾಕ್ಷಿಕ ತಾನೀಗೆಂದು ಸಿಂಹಾಸನವರ್ಪಿಸಿದೆನೆ 5 ನಿಶ್ಚಲಾತ್ಮಕನವ ತಾನೀಗ ನಿಶ್ಚಲೈಕ್ಯನಾದನಿಶ್ಚಲವಸ್ತು ನಿಜತಾನೇ ಎಂದಘ್ರ್ಯವರ್ಪಿಸಿದೆನೆ 6 ವಿಶ್ವ ವಿಶ್ವಭೋಕ್ತøವಿಶ್ವಲೀಲಾತ್ಮಕ ತಾನೀಗೆಂದು ಪಾದ್ಯವರ್ಪಿಸಿದೆನೆ 7 ನಿಗಮ ಗೋಚರ ತಾನೆಂದು ಸ್ನಾನವರ್ಪಿಸಿದೆನೆ 8 ಅಂಬರ ವ್ಯಾಪಕನೇಅಂಬರದೊಳು ಚಿದಂಬರ ತಾನೆಂದು ವಸ್ತ್ರವರ್ಪಿಸಿದೆನೆ9 ಚೈತನ್ಯಾಧಾರ ತಾನೀಗ ಚೈತನ್ಯಾದೂರ ಚೈತನ್ಯಾಧಿಪತಾನೆಂದು ಯಜ್ಞೋಪವೀತ ವರ್ಪಿಸಿದನೆ10 ಕಲುಷ ನಿರ್ಜಿತನೇಕಲುಷ ಹರತಾ ನಿಜವೆಂದಾಭರಣವರ್ಪಿಸಿದೆನೆ11 ಲೇಪಕ್ಕಾಧಾರ ತಾನೀಗ ಲೇಪ ನಿರಾಧಾರಲೇಪಹರ ತಾ ನಿಜವೆಂದು ಅನುಲೇಪವರ್ಪಿಸಿದೆನೆ12 ಪುರತನು ವಿಸ್ತರಿಸಿ ತಾನೀಗ ಪುರಾಧಿಪತಾನೆನಿಸಿಪುರುಷೋತ್ತಮ ತಾನೆಂದು ಸುಪುಷ್ಪವರ್ಪಿಸಿದೆನೆ13 ಪರ ಇಹವು ತಾನೇ ತಾನೀಗ ಪರಾತ್ಪರನು ತಾನೆಪರವಸ್ತು ತಾ ನಿಜವೆಂದು ಧೂಪವರ್ಪಿಸಿದೆನೆ 14 ಜ್ಯೋತಿಯ ರೂಪ ತಾನೀಗ ಜ್ಯೋತಿ ನಿರ್ಮಯನುಜ್ಯೋತಿಯಹ ಚಿಜ್ಯೋತಿಯು ತಾನೆಂದು ಜ್ಯೋತಿಯರ್ಪಿಸಿದೆನೆ 15 ನಿತ್ಯ ತೃಪ್ತನುನಿತ್ಯತೃಪ್ತ ತಾನೆಂದು ನೈವೇದ್ಯವರ್ಪಿಸಿದೆನೆ 16 ಮಂಗಳವೆ ಆದ ತಾನೀಗ ಮಂಗಳಾಂಗನಾದಮಂಗಳ ಮೂರುತಿ ತಾನೆಂದು ತಾಂಬೂಲವರ್ಪಿಸಿದೆನೆ 17 ನಿರ್ವಿಕಾರ ನಿಜ ತಾನೀಗ ನಿರಾವಲಂಬ ನಿಜ ನಿ-ರಾವರಣ ತಾನೆಂದು ಪ್ರದಕ್ಷಿಣವರ್ಪಿಸಿದೆನೆ 18 ಜಯ ಜಯಾತ್ಮಕನೆ ತಾನೀಗ ಜಯ ಸದಾತ್ಮಕನೆಜಯನಿತ್ಯಾತ್ಮಕ ತಾನೆಂದು ನಮಸ್ಕಾರವರ್ಪಿಸಿದೆನೆ19 ಲೋಕೈಕನಾಥ ತಾನೀಗ ಏಕೈಕ ನಾಥನುಏಕ ನಾಥನು ತಾನೆಂದು ವಿಸರ್ಜನವರ್ಪಿಸಿದೆನೆ 20 ಪರಿ ಪರಿ ಮಾಡಿದೆನೆ 21
--------------
ಚಿದಾನಂದ ಅವಧೂತರು
ಯಜ್ಞೋಪವೀತವೀವೆನೊ ನಿನಗೆ ಸ್ವಾಮಿ ಪ ಯಜ್ಞಪುರಷ ಮುನಿ ಯಜ್ಞಪಾಲಕನಿಗೆ ಅ.ಪ ಅಜ್ಞ್ಯಮನೋರಥನು ನಾನು | ಕಿಂ ಚಿಜ್ಞನೆಂದಿಗು ನಿನ್ನ ಪೊಂದಿದೆನು ಸುಜ್ಞಾನವೆಂಬುದು ಸ್ವಪ್ನದೊಳರಿಯೆ | ಸ ರ್ವಜ್ಞ ನಿನ್ನವನೆಂದು ವಿಜ್ಞಾನ ಪಾಲಿಸು 1 ಸಾಧು ಜನಪ್ರಿಯ ಸರೋಜಾಕ್ಷ ಪೂರ್ಣ ಬೊಧಾಮೃತ ಮಯದಿವಿಜ ಪಕ್ಷಾ ಕಾದುಕೊಂಡಿರುವೆ ಅನಾದಿಯಿಂದಲಿ ನಮ್ಮ ನಿ- ರಾದರಣೆ ಮಾಡದೆ ನೀ ದಯದಿಂದ ಸಲಹೊ 2 ಮುಕುತಿದಾಯಕ ದೇವಾಧಿದೇವಾ ನಿಜ ಭಕುತ ಜನರಿಗೆ ನೀನೇ ಸಂಜೀವಾ | ಆ ಯುಕುತ ಮಾತುಗಳಿದಲ್ಲ ವೇದಾಂತ ರಹಸ್ಯ ಸಕಲಾಧಾರನೆ ಶ್ರೀ ಗುರುರಾಮವಿಠಲ 3
--------------
ಗುರುರಾಮವಿಠಲ
ರಾಮಾನುಜರೇ ನಮೋ ನಮೋಸ್ವಾಮಿ ಲಕ್ಷ್ಮಣ ರೂಪ ನಮೋ ನಮೋ ಪ ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾನಿಡುಶಿಖಿ ಯಜ್ಞೋಪವೀತದಿಂದತೊಡೆದ ದ್ವಾದಶನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ 1 ಪಂಕಜನಾಭನ ಪಾವನ ಮೂರುತಿಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರ ಗೆದ್ದಓಂಕಾರ ಮೂರುತಿ ನಮೋ ನಮೋ 2 ಕೇಶವ ಪಾದಾಂಬುಜ ಮಧುಕರಾಪಾಷಂಡ ಗರ್ವಹರ ಗುರುತಿಲಕಶೇಷಾವತಾರಿ ಮುನೀಶವಂದಿತ ಆದಿಕೇಶವ ಮೂರುತಿ ನಮೋ ನಮೋ 3
--------------
ಕನಕದಾಸ