ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ದೇವತೆಗಳ ಸ್ತುತಿ ಆವ ಕಾರ್ಯಕೂ ಮುಂಚಿನ ಪೂಜೆ ನಿಮ್ಮತಾಯಿ ತಂದೆಯು ಕಲಿಸಿದ ಪೂಜೆ ಪ ಜಾತಕರ್ಮಕೆ ನಾಮಕರಣಕೆ ಚೌಲಕೆಸಾತಿಶಯಾಕ್ಷರ ಪ್ರಾರಂಭಕೆನೂತನ ವಿದ್ಯಾರಂಭಕೆ ಮುಂಜಿಗೆಯಾತಕೂ ಶ್ರೀ ಗಣಪತಿ ಜಯ ಜಯವೆಂದೂ 1 ಮದುವೆಗೆ ಋತುಶಾಂತಿಗೆ ಸೀಮಂತಕೆಮುದದಿಂದ ಜನನವ ಬರೆವುದಕೆಸದಮಲ ಯಜ್ಞಾರಂಭಕೆ ಸಮರಕೆಮೊದಲೇ ಶ್ರೀ ವಿಘ್ನೇಶ್ವರ ಜಯ ಜಯವೆಂದೂ2 ಪರ ಉಪಕಾರಕೆಜ್ಞಾನಮಾರ್ಗಕೆ ಗಾನಕೆ ಗೀತೆಗೆನಾನಾವಿಧ ಸುವ್ರತ ತೀರ್ಥಯಾತ್ರೆಗೆನೀನೆ ಗತಿ ಗಣಪತಿ ಜಯ ಜಯವೆಂದೂ 3 ಕೆರೆ ಕಾಲುವೆ ಕೂಪಗಳ ವಿಸ್ತಾರಕೆಸುರಗೃಹ ರಥ ಉತ್ಸವ ಪೂಜೆಗೆಸರಸ ಸರೋವರಗಳ ನಿರ್ಮಾಣಕೆಸಿರಿ ಗಣಪತಿ ಪಾವನಮೂರ್ತಿ ಜಯವೆಂದೂ 4 ಹರ ನಿಮ್ಮ ಪೂಜಿಸಿ ಪುರಮೂರ ಜಯಿಸಿದಗರುಡಗೆ ಅಮೃತವು ಸಿದ್ಧಿಸಿತುವರರಾಮಚಂದ್ರ ನಿಮ್ಮಡಿಯ ಪೂಜಿಸಿ ದಶಶಿರನ ಗೆಲಿದನೆನೆ ಗಣಪತಿ ಜಯವೆಂದೂ 5 ದ್ವಾಪರಯುಗದಲಿ ಧರ್ಮರಾಯನು ನಿಮ್ಮನೇ ಪೂಜಿಸಿ ಕೌರವರ ಗೆಲಿದಾಭೂಪರ ಜೈಸಿ ತುರಗವ ತಂದ ಸಾಂಬನುಶ್ರೀಪತಿನುತ ಗಣಪತಿ ಜಯ ಜಯವೆಂದೂ6 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮಮೋಹದ ಪುತ್ರ ಪಾವನತರಗಾತ್ರವರದ ಶ್ರೀ ಗಣಪತಿ ಜಯ ಜಯ ಜಯವೆಂದೂ 7
--------------
ಕೆಳದಿ ವೆಂಕಣ್ಣ ಕವಿ