ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೈಕುಂಠ ವಿಠ್ಠಲನೆ ನೀನಿವನ ಸಾಕಬೇಕಯ್ಯ ಶ್ರೀ ಹರಿಯೆ ಪ ನಾಕಪತಿಯೆ ನಿನ್ನ ತೋಕನೆಂದೆನಿಸಿ ಕೃಪಾಕರುಣೆ ಕಾಪಾಡ ಬೇಕೊ ಹರಿಯೆ ಅ.ಪ. ಪುಂಡಲೀಕ ವರದ ಪಾಂಡುರಂಗನೆ ನಿನ್ನತೊಂಡನಾಗಿಹನ ಕೈಗೊಂಡು ಕಾಪಾಡೊ ಹರಿಯೆ |ಅಂಡಜಸುವಾಹನನೆ ಮಾರ್ತಾಂಡ ಶತತೇಜಭಾಂಡ ಕಾರಕ ಭೀಮ ಗೊಲಿದಂತೆ ಒಲಿಯಬೇಕು 1 ಇಹಪರಗಳೆರಡಕ್ಕೂ ಅಹಿಶಯ್ಯ ನಿನ ಪಾದವಹಿಸೆ ಸೇವಿಪನಯ್ಯ ಸಹಜ ಭಕ್ತಿಯಲಿವಿಹಗೇಂದ್ರ ವಾಹನನೆ ಐಹಿಕದ ಭಯಹರಿಸಿವಿಹಿತ (ಕರುಣ)ದಿಂದಿವನ ಕಾಪಾಡು ಬೇಕು ಹರಿಯೇ 2 ವಿಘ್ನಹರ ನಿನ್ನಲ್ಲಿ | ಲಗ್ನ ಗೈಸಿಹಮನವ ನಿ-ರ್ವಿಘ್ನತೆಯ ನೀಡಯ್ಯ ಸರ್ವಕಾಲದಲಿಯಜ್ಞೇಶ ಯಜ್ಞ ಭುಗ್ ಯಜ್ಞಸಾಧನ ಯಜ್ಞಯಜ್ಞಾನು ಸಂಧಾನ ಸರ್ವಕಾರ್ಯದಲೀಯೊ 3 ವೃಂದಾರ ಕೇಂದ್ರ ರಿಂ | ವಂದ್ಯ ಹಯಮುಖ ಪಾದಭೃಂಗರೆಂದೆನಿಸುವ ಭಾವಿ ಮರುತರ ಚರಣದೀಸಂಧಿಸುತ ಧೃಡಭಕ್ತಿ ವೃಂದಾವನಾಖ್ಯಾನಸಂದೋಹ ಸುಜ್ಞಾನ ನೀನಿತ್ತು ಸಲಹೊ ಹರಿಯೇ 4 ಪತಿ ನಿನ್ನ ಹಂಬಲಿಸಿ ಬೇಡುವೆನುಇಂಬಿಟ್ಟು ತವ ಪಾದದ್ಹಂಬಲವ ನೀಯೋಉಂಬುಡುವ ಕ್ರಿಯೆಗಳಲಿ ಬಿಂಬ ಕ್ರಿಯೆಗಳ ತಿಳಿಸಿಬಿಂಬ ತವರೂಪ ಹೃದಯಾಂಬರದಿ ತೋರಿ ಸಲಹೋ 5 ಪಂಚಪಂಚಸುತತ್ವ | ಪಂಚ ಭೇದದಜ್ಞಾನಸಂಚಿಂತೆಯ ನೀಯೋ ವಾಂಛಿತಾರ್ಥದನೇಪಂಚ ಅವಿದ್ಯೆಯ ಕಳೆದು ಪಂಚಸು ಪರ್ವದಲಿಪಂಚಾಸ್ಯನಲಿ ನಿನ್ನ ಪಂಚರೂಪವ ತೋರಿಸೋ 6 ದಿವಿಜ ವಂದ್ಯಮಧ್ವಾಂತರಾತ್ಮ ಗುರು ಗೋವಿಂದ ವಿಠಲ ತವದಿವ್ಯ ರೂಪವ ತೋರಿ ಕಾಪಾಡೊ ಹರಿಯೆ 7
--------------
ಗುರುಗೋವಿಂದವಿಠಲರು