ಯಜ್ಞೋಪವೀತವೀವೆನೊ ನಿನಗೆ ಸ್ವಾಮಿ ಪ
ಯಜ್ಞಪುರಷ ಮುನಿ ಯಜ್ಞಪಾಲಕನಿಗೆ ಅ.ಪ
ಅಜ್ಞ್ಯಮನೋರಥನು ನಾನು | ಕಿಂ
ಚಿಜ್ಞನೆಂದಿಗು ನಿನ್ನ ಪೊಂದಿದೆನು
ಸುಜ್ಞಾನವೆಂಬುದು ಸ್ವಪ್ನದೊಳರಿಯೆ | ಸ
ರ್ವಜ್ಞ ನಿನ್ನವನೆಂದು ವಿಜ್ಞಾನ ಪಾಲಿಸು 1
ಸಾಧು ಜನಪ್ರಿಯ ಸರೋಜಾಕ್ಷ ಪೂರ್ಣ
ಬೊಧಾಮೃತ ಮಯದಿವಿಜ ಪಕ್ಷಾ
ಕಾದುಕೊಂಡಿರುವೆ ಅನಾದಿಯಿಂದಲಿ ನಮ್ಮ ನಿ-
ರಾದರಣೆ ಮಾಡದೆ ನೀ ದಯದಿಂದ ಸಲಹೊ 2
ಮುಕುತಿದಾಯಕ ದೇವಾಧಿದೇವಾ ನಿಜ
ಭಕುತ ಜನರಿಗೆ ನೀನೇ ಸಂಜೀವಾ | ಆ
ಯುಕುತ ಮಾತುಗಳಿದಲ್ಲ ವೇದಾಂತ ರಹಸ್ಯ
ಸಕಲಾಧಾರನೆ ಶ್ರೀ ಗುರುರಾಮವಿಠಲ 3