ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಆತ್ಮನಿವೇದನಾ ಕೃತಿಗಳು ಅಕಟಕಟ ಬಹಳ ಬಡತನವಡಸಿದುದೆ ನಿನಗೆ ಅಕಳಂಕ ಚರಿತ ಹರಿಯೆ ಪ ಪ್ರಕಟತನದಿಂ ಗೋದಾನಕ್ಕೆ ಕೈನೀಡುವರೇ ಸುಖಮಯ ಶರೀರ ಚನ್ನರಾಯಾ ಅ.ಪ ಹಿಂದೆ ಯಜ್ಞದಲಿ ಬಲಿಯಿತ್ತ ಭೂದಾನಕ್ಕೆ ದಂದಿಗೆ ಸಾಲದಾಯಿತೆ ಅಂದು ಕರ್ಣನು ಕೊಟ್ಟ ದಾನವನು ನೀ ಪಿಡಿದು ದಂದಿಗೆ ಸಾಲದಾಯಿತೆ ಇಂದು ನಿನ್ನಯ ದಾಸಾನುದಾಸನು ಕೊಟ್ಟ ಗೋದಾನ ದೊಂದೊಂದು ಗೋಗಳಿಗೆಛಂದದಲಿ ನಿಂದು ದಾನವ ಕೊಂಡೆಯಾ ಸ್ವಾಮಿ 1 ಉರದೊಳಗೆ ಅನವರತ ವಾಸವಾಗಿರುತಿಪ್ಪ ಶರಧಿಸುತೆ ಕೈಬಿಟ್ಟಳೇ ಬೆರೆತು ಪೋದುದೇ ಪಾಲ್ಗಡಲು ಮುನಿಸಿಕೊಂಡು ಬರಡಾಯಿತೇ ಕಾಮಧೇನೂ ತಿರುಕ ಹಾರುವನಂತೆ ಪರಿಪರಿಯ ದಾನಕ್ಕೆ ಭರದಿ ಕೈ ಒಡ್ಡುತಿಹರೆ ಪುರುಷೋತ್ತಮನೆಂಬ ಅಭಿಮಾನವಿನಿತಿಲ್ಲದೇ ದೂರಿಗೊಳಗಾಗಬಹುದೆ ಸ್ವಾಮಿ 2 ಇತ್ತ ದಾನದ ಗೋವುಗಳನೆಲ್ಲ ಗುಡಿಯೊಳಗೆ ಮೊತ್ತದಿಂ ಕೂಡಿಕೊಂಡೂ ಒತ್ತಿ ಮುದ್ರೆಯನು ನಾಮವನಿಟ್ಟು ಬಾಲಗಳಿ ಗೆತ್ತಿ ಘಂಟೆಗಳ ಕಟ್ಟೀ ಅರ್ಥಿಯಿಂ ತೋರಿಸಿ ಯೆನ್ನ ಕುಲಕೋಟಿಗಳಿ ಗಿತ್ತೆ ಸುರಪದವನು ಕರ್ತುೃ ವೈಕುಂಠ ವೇಲಾಪುರಾಧೀಶ್ವರನೇ ಭೃತ್ಯನ್ನ ಕಾಯೊ ಸತತ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಇತರೆಯಳ ಸುತನೆನಿಪ ಐತರೇಯ |ಗತಿಪ್ರದ ಶ್ರೀ ವಿಷ್ಣು ಸರ್ವಾಂತರಾತ್ಮಾ ಪ ವಿಭೂತಿ ಪಾದ್ಯ ಹರಿಯೇ 1 ಕರ್ಮ ಕರ್ಮಾಂಗದಲಿಪ್ರಕಟವಾಗಲು ಅಲ್ಲಿ ಸನ್ನಿಹಿತನಿರುವೇ 2 ಭೂತ ಪಂಚಕದಲ್ಲಿ ಪಂಚಾತ್ಮ ನೀನಿದ್ದುಭೂತ ವಾಯುವಿನಲ್ಲಿ ಮತ್ತೆ ಪಂಚಾತ್ಮಾ |ಈ ತೆರದಿ ನೀನಿದ್ದು ಭೂತೇಂದ್ರಿ ಮಾನಿಸಹವಾತನಡೆಸುವುದೆಲ್ಲ ಯಜ್ಞವೆನಿಸುವುದು 3 ಇಂತಿಪ್ಪ ಯಜ್ಞದಲಿ ಸಂತ ಶ್ರೀಪಾದಾರ್ಯಅಂತೆ ತಮ ಶಿಷ್ಯ ಸಹಕೃತ ಸುಮಂಗಳದಲಿ |ಧ್ವಾಂತ ಹರ ಶ್ರುತಿಯನ್ನೆ ಐತರೇಯದಿ ವಾಚ್ಯಪಂಥಬಿಧ ಸರ್ವರಿಗೆ ಒಲಿಯೆ ಪ್ರಾರ್ಥಿಸುವೇ 4 ಪರಮ ಹಂಸರು ಎನಿಪ ವಿಶ್ವೇಶ ತೀರಥರವರ ಸುನೇತೃತ್ವದಲಿ ಮಂಗಳದ ಕಾರ್ಯ |ಪರಕಿಸುವ ಸೌಭಾಗ್ಯ ದೊರಕಿದವನಿಗೆ ಭಾಗ್ಯಹರಿ ಗುರು ಗೋವಿಂದ ವಿಠಲ ಕರುಣಿಸುವ 5
--------------
ಗುರುಗೋವಿಂದವಿಠಲರು
ಕಂಡೆ ಕಂಡೆ ಸ್ವಾಮಿಯ ಕಂಡೆ ಕಂಡೆ ನಾ ಬ್ರಹ್ಮಾಂಡದೊಡೆಯನ ಪಾಂಡವರ ಪರಿಪಾಲಿಸುವನ ಪ್ರ- ಚಂಡ ಅಸುರರ ಶಿರವ ಚಕ್ರದಿ ಚೆಂಡನಾಡಿದ್ದ ಚೆಲುವ ಕೃಷ್ಣನ ಪ ಪಾದನಖದಿ ಭಾಗೀರಥ್ಯುದಿಸಿದಳು ಈರೇಳು ಲೋಕವನಿಟ್ಟ ಉದರದೊ- ಳಾದಿ ಮೂರುತಿ ಸಾರ್ವಭೌಮ 1 ಎಳೆದುಳಸಿ ಶ್ರೀವತ್ಸ ಕೌಂಸ್ತುಭ ಅ- ರಳು ಮಲ್ಲಿಗೆ ಹಾರ ಪದಕವು ಕೊ- ವೈಜಯಂತಿ ಮಾಲೆಯಂ- ತ್ಹೊಳೆವೊ ಮಾಣಿಕಾಭರಣ ಭೂಷಿತ 2 ಶೀಘ್ರದಲಿ ಜರೆಸುತನ ವಧÉ ಮಾ ಡ್ಯಜ್ಞದಲಿ ಶಿಶುಪಾಲರಂತಕ ರುಕ್ಮಿಣೀಪತಿ ಧರ್ಮಭೀಮರಿಂ- ದಗ್ರಪೂಜೆ ತಕ್ಕೊಂಡ ಕೃಷ್ಣನ 3 ಕಂಕಣ ಕರದಲಿ ಶಂಖ ಚಕ್ರವು ಅರ- ವಿಂದ ರೇಖವು ಚರಣದಲಿ ಪಂಕಜಾಕ್ಷನ ಮುಖದ ಕಾಂತಿಯು ಶಂಕೆಯಿಲ್ಲದೆ ಸೂರ್ಯರಂದದಿ 4 ಎಂಟು ಮಂದ್ಯೆರಡೆಂಟು ಸಾವಿರ ಸತಿಯ- ರಿಂದ ದ್ವಾರಾವತಿಯನಾಳಿದ ಪತಿತಪಾವನ ಪಾರಿಜಾತವ ಸತಿಗೆ ತಂದ ಶ್ರೀಪತಿಯ ಪಾದವ 5 ನಳಿನಮುಖಿ ದ್ರೌಪದಿಯು ಕರೆಯಲು ಸೆಳೆಯೆ ವಸ್ತ್ರ ಅಕ್ಷಯವ ಮಾಡಿಸಿ ಖಳರ ಮರ್ದನ ಕರುಣ ಸಾಗರೆಂ ದಿಳೆಯೊಳಗೆ ಹೆಸÀರಾದ ಕೃಷ್ಣನ 6 ನಂಬಿದವರನು ಬಿಡದೆ ತಾನಿ- ದ್ದಿಂಬಿನಲಿ ಸ್ಥಳಕೊಟ್ಟು ಕರೆವನು ಸುಂದರಾಂಗ ತಾ ಸೋಮಕುಲದಲಿ ಬಂದುದಿಸಿದ ಭೀಮೇಶ ಕೃಷ್ಣನ 7
--------------
ಹರಪನಹಳ್ಳಿಭೀಮವ್ವ