ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಹಿತವರು ಮನವೆ ಮೂರು ಮಂದಿಗಳೊಳಗೆನಾರಿಯೋ ಧಾರಿಣೀಯೊಧನದಬಲು ಸಿರಿಯೊ ?ಪ.ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದುತನ್ನ ಮನೆಯಲ್ಲಿ ಯಜಮಾನಿಯೆನಿಸಿಭಿನ್ನವಿಲ್ಲದೆ ಅರ್ಧ ದೇಹವೆನಿಸುವ ಸತಿಯುಕಣ್ಣಿನಲಿ ನೋಡಲಂಜುವಳು ಕಾಲನೊಯ್ವಾಗ 1ಮುನ್ನ ಶತಕೋಟಿ ರಾಯರುಗಳಾಳಿದ ನೆಲನತನ್ನದೆಂದು ಶಿಲೆಯ ಶಾಸನವ ಬರೆಸಿಬಿನ್ನಾಣದಿ ಮನೆಗಟ್ಟಿ ಕೋಟೆ - ಕೊತ್ತಳಿವಿಕ್ಕಿಚೆನ್ನಿಗನೆ ಅಸುವಳಿಯ ಊರ ಹೊರಗಿಕ್ಕುವರು 2ಉದ್ಯೋಗ - ವ್ಯವಹಾರ ನೃಪಸೇವೆ ಮೊದಲಾಗಿಕ್ಷುದ್ರತನ ಕಳವು ಪರದ್ರೋಹದಿಂದಬುದ್ಧಿಯಿಂದಲಿ ಧನವ ಗಳಿಸಿಕ್ಕಿ ಅಸುವಳಿಯಸದ್ಯದಲಿ ಆರುಂಬವರು ಹೇಳು ಮನುಜಾ 3ಶೋಕಗೈದಳುವವರುಸತಿ - ಸುತರು ಭಾಂದವರುಜೋಕೆ ತಪ್ಪಿದ ಬಳಿಕ ಅರ್ಥವ್ಯರ್ಥಲೋಕದಲಿ ಸ್ಥಿರವಾದ ಕೀರ್ತಿ ಅಪಕೀರ್ತಿಗಳುಸಾಕಾರವಾಗಿ ಸಂಗಡ ಬಾಹುವಲ್ಲದೇ ? 4ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡಸ್ವಸ್ಥದಲಿ ನೆನೆಕಾಣೊ ಪರಮಾತ್ಮನಚಿತ್ತಶುದ್ದಿಯಲಿ ಶ್ರೀ ಪುರಂದರವಿಠಲನಭಕ್ತಿಯಿಂದಲಿ ನೆನೆದು ಮುಕ್ತಿಪಡೆ ಮನವೆ 5
--------------
ಪುರಂದರದಾಸರು