ಶರಣಾಗತಿಯೊಂದೆ ಸಾಧನ
ಮಾಧವ ಪ
ಶರಣಾಗತಿಯಿಂದ ಹರಿಯ ಪ್ರಸಾದವು
ಹರಿಯ ಪ್ರಸಾದವು ಪುರುಷಾರ್ಥಕೆ ಸಾಧನ ಅ.ಪ
ಹರಿಯಲಿ ಚಿತ್ತವು ಹರಿಯಲಿ ಭಕುತಿಯು
ಹರಿಯುದ್ದೇಶದಿ ಯಜನಾದಿಗಳು
ಹರಿಯ ಚರಣದಲಿ ನಮ ನವು ಇದನೇ
ಶರಣಾಗಿಯೆಂದರುಹಿದ ನುಡಿ ಕೇಳಿÀದೆ 1
ಸರ್ವೋತ್ತಮ ನೀನೊಬ್ಬನೆ ಎನ್ನುವ
ದಿವ್ಯಜ್ಞಾನವ ಪೊಂದುತ ಮನದಲಿ
ಸರ್ವಾಧಿಕ ನಿಶ್ಚಲ ಪ್ರೇಮ ಸಹಿತ
ಸರ್ವಕರ್ಮ ನಿನ್ನೊಳಗರ್ಪಣೆ ಮಾಡುವೆ 2
ತ್ರಿವಿಧ ಪೂಜೆಗಳಲಿ ರತಿಯು
ಹರಿಯ ಪ್ರಸನ್ನತೆಯಲಿ ನಂಬುಕೆಯು
ಹರಿದಾಸನು ನಾನೆಂಬುವ ನಂಬಿಕೆ
ಶರಣಾಗತಿಯಿದು ಮೋಕ್ಷಫಲಕೆ ಸಾಧನ 3