ಯಕ್ಷಿಣೀ ಸರ್ವಲಕ್ಷ್ಮಿಣೀ
ರಕ್ಷಿಸು ಮಗನ ಅಪೇಕ್ಷವ ಪೂರೈಸಿ ಪ
ಕಂಟಕ ಸಕಲಪೂರ್ಣ
ಕರುಣವಿಟ್ಟು ಮಾಡು ಸಫಲ ತ್ರಾಣಿ
ಕರುಣದಿ ಬಡತನವಖಿಲ ಜಾಣೆ
ಪರಿಹರಿಸಿ ಕೊಡು ಎನಗೆ ಸುಫಲನ ಆಹ
ಮೊರೆಯಿಟ್ಟು ಬೇಡುವೆ ಪರಮಪಾವನೆ ಎನ್ನ
ಇರವ ತೀರಿಸು ತಾಯಿ ಸರುವ ಸಿದ್ಧಾಂತಳೆ 1
ಮನುಮುನಿಗಳಿಗಾದಿ ಒಲುಮೆ ನೀನು
ಘನ ಸಿದ್ಧಿನಿತ್ತು ಸದ್ಧರ್ಮಿ ಜಾಣ
ರೆನಿಸಿದಿ ದಯದಿ ಸುಪ್ರೇಮಿ ಮಾಣ
ದನುಪಮಮತಿ ನಿಜಮಹಿಮೆ ಆಹ
ವನರುಹ ಬ್ರಹ್ಮಾಂಡ ಘನ ಘನ ಎನುವಂಥ
ಅನುಪಮಪದದೆನ್ನ ಕನಿಕರದಿಂ ಕಾಯೆ 2
ಸರುವ ಸಿಧ್ದಿಯ ನೀಡಿ ಕರುಣಿ ಎನ್ನ
ಸರುವ ಶುದ್ಧವೆನಿಸೆ ಜನನೀ ಪೂರ್ಣೆ
ಸರ್ವಜ್ಞೆ ಪಾಲಿಸೆ ನಿಪುಣೆ ವಾಣಿ
ಸರ್ವಮಂಗಲಿ ಸುಪ್ರವೀಣೆ ಆಹ
ಸರ್ವಶಕ್ತ ಜಗದಾರ್ಯ ಶ್ರೀರಾಮನ
ಭಾರ್ಯೆ ಸಕಲ ಐಶ್ಚರ್ಯದಿಂ ಪೊರೆಯೆನ್ನ 3