ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವ ಜಯದೇವ ಜಯಜಯ ಹನುಮಂತಾ | ದಯದೊಲವಿಂದಲಿ ಸಲಹು ಜಯ ಕೀರುತಿವಂತ ಪ ಅಂಜನೆ ಉದರದಿ ಬಂದು ಮೌಂಜೀಬಂಧನದಿ | ಕಂಜ ಸಖನ ಮಂಡಲ ತುಡಕಲು ಹವಣಿಸಿದಿ | ಭಂಜನೆ ಇಲ್ಲದೆ ರಾಮರ ಸೇವೆಗೆ ತತ್ಪರದಿ | ರಂಜಿಸುವಂದದಿ ಮಾಡಿದೆ ಇಳೆಯೊಳು ತನುಮನದಿ 1 ರಘುಪತಿ ಮುದ್ರೆಯ ಕೊಂಡು ಸಾಗರ ಲಂಘಿಸಿದೆ| ಭುಕುತಿಲಿ ಜಾನಕಿದೇವಿಗೆ ಅರ್ಪಿಸಿ ಕೈಮುಗಿದೆ | ಯಕುತಿಲಿ ವನವನೆ ಕಿತ್ತಿ ಲಂಕೆಯ ಸದೆಬಡಿದೆ| ಮಗುಳೆ ಪ್ರತಾಪದಿ ಬಂದು ಅಜಪದವಿಯ ಪಡೆದೆ 2 ಮೂರವತಾರ ನೀ ಆಗಿ ಪರಿಪರಿ ಚರಿತೆಯನು | ದೋರಿದೆ ಜಗದೊಳು ಅನುಪಮ ಹರಿಪ್ರಿಯನಾದವನು | ಚಾರು ಭಕ್ತೀಭಾವ ಪ್ರೇಮವ ಕಂಡವನು | ಅನುದಿನ ಮಹೀಪತಿನಂದನು ನಿಮ್ಮವನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು