ಅನಂತ ಹರಿ ವಿಠಲ | ಕಾಪಾಡೊ ಇವನಾ ಪ
ಅನಘ ಕರುಣಾಳು ಹರಿ | ನಿನಗೆ ಭಿನ್ನೈಪೇ ಅ.ಪ.
ಪಿತೃಮಾತೃ ಸೇವೆಯಲಿ | ರತಿಯ ಕರುಣಿಸು ಇವಗೆಹಿತ ವಹಿತ ವೆರಡರಲಿ | ಪ್ರೀತಿ ಸಮ ವಿರಲೀಮತಿ ಮತಾಂವರರಂಘ್ರಿ | ಹಿತದಿಂದ ಸೇವಿಸುವಮತಿಯನೇ ಕರುಣಿಸುತ | ಕಾಪಾಡೋ ಹರಿಯೇ 1
ಭಕುತಿ ಸುಜ್ಞಾನಾದಿ | ವ್ಯಕುತಿಗೈ ಇವನಲ್ಲಿಕಕುಲಾತಿ ಇರದಂತೆ | ಮುಕುತಿ ಸತ್ಪಥದೀಪ್ರಕಟಗೈ ಸ್ಥಿರಬುದ್ಧಿ | ಅಕಳಂಕ ಶ್ರೀಹರಿಯೆನಿಖಿಲಾಗಮ ಸುವೇದ್ಯ | ಭಕುತ ಪರಿಪಾಲಾ2
ಸ್ಮರಣೆ ಸುಖ ಸುಧೆ ಸುರಿದು | ಶರಧಿಭವ ಉತ್ತರಿಸೊಮರುತಾಂತರಾತ್ಮಕನೆ | ಕಾರುಣ್ಯ ಮೂರ್ತೇಆರುಹಲೇನಿಹುದಿನ್ನು | ಸರ್ವಜ್ಞ ನೀನಿರಲುಮೊರೆಇದನ ಸಲಿಸು ಗುರು | ಗೋವಿಂದ ವಿಠಲ3