ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ನಮ್ಮಾಳ್ವಾರ್ ವಕುಳಾಭರಣನೆ ಶರಣೆಂಬೆ ಸಕಲ ಬಂಧು ನೀ ಸಲಹೆಂಬ ಪ ನಿಖಿಲ ಲೋಕಿಗರ ಶಿಶುನಡೆನೂಕಿದೆ ಅಕಳಂಕನೆ ಶಠಗೋಪ ನೀನಾದೆ ಅ.ಪ ನಾಥನಾಯಕಿಯೆ ಕಾರಿಕುಮಾರ ಪೂತನೆ ಸೇನಾಪತಿಯವತಾರ ಪಾತಕಹರ ತಾಮ್ರಪರ್ಣಿತೀರ ಕೀರ್ತಿ ಪಡೆದ ಸುರಪೂಜ್ಯನುದಾರ 1 ಪದುಮ ಪವಿತ್ರನಂದದ ಪ್ರಭೆನೋಡಿ ಮಧುರಕವಿಯು ಬರೆ ಮುದಗೂಡಿ ಅದುಭುತ ಮಂತ್ರವನೊರೆದೆ ಹರಿಯಪಾಡಿ ಸದಮಲ ಸೇವಕನಲಿ ಮನೆಮಾಡಿ2 ಹದಿನಾರು ವರುಷಾಹಾರವಿಲ್ಲದೆ ಬದಿರಾಂಧ ಮೂಕನಾದ ಮುನಿ ವಿಧಿ ಪಿತನದುಭುತಧ್ಯಾನ ಮೈಗೂಡಿ ಸುಧೀಂದ್ರ ಶುಭದ ಅಮೃತಪದ 3 ನಾಥಗೊಲಿದು ತಿರುವಾಯ್ಮೊಳಿಯನು ಪ್ರೀತಿಯೊಳುಪದೇಶವ ಗೈದು ಪಾತಕ ಹರಿಸುತ ಪರಿಸರ ಪೊರೆಯುತ ದಾತಾರಂ ಸುಖದಾತಾರಂ 4 ಮಧುರಾಪೀಠವು ನೀರೊಳು ಮುಳುಗಲು ವಿಧಿಯಿಲ್ಲದೆ ಪಂಡಿತರೊರಲಿ ಅಧಿಕರಿಸುತ ತವ ಪದಗಳಿಗೆರಗೆ ಮಧುರವಾಣಿಯಿಂ ಹಾಡಿದ 5 ಹತ್ತಾಳ್ವಾರರ ಶರೀರವಾಗಿ ಪೆತ್ತಿಹ ಪರಮೌದಾರ ಮುನಿ ಎತ್ತಲು ಹರಿಗುರು ಸರ್ವೋತ್ತಮರೆನು ತುತ್ತುಮಪದವಿಯ ಮಾರ್ಗವತೋರಿದ6 ಆದಿವೈಷ್ಣವ ದೀಕ್ಷಾಚಾರ್ಯ ವೇದವ ದ್ರಾವಿಡದೊಳು ಪೇಳ್ದೆ ಶ್ರೀಧರಸನ್ನಿಧಿಯೊಳಗಿದ ಪಠಿಸಲು ಸಾದರದೊಲಿವಂ ಜಾಜೀಶಂ 7
--------------
ಶಾಮಶರ್ಮರು
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ | ಲೋಕೈಕ ಮಾತೆ ಪ. ಪರಮ ಪಾವನೆ | ಗೌರಿ ಮನೋಹರೆ || ಪರಮೇಶ್ವರಿ | ಕರುಣಾಕರೆ ಶ್ರೀಅ.ಪ. ಸುಂದರಾಂಗಿಯೆ || ಚಂದದೀ ಪೊರೆ | ಚಂದ್ರಚೂಡಪ್ರಿಯೆ1 ಆದಿಶಕ್ತಿ ದೇವಿ ಆದಿನಾರಾಯಣಿ | ಮೋದದೀ ಪೊರೆ | ಮೋದದಾಯಕಿಯೆ2 ಶಂಖಚಕ್ರಧರೆ | ಕಿಂಕರಪ್ರಿಯಕರೆ || ವೆಂಕಟೇಶನಾ | ಸೋದರಿ ಶಂಕರಿ3
--------------
ವೆಂಕಟ್‍ರಾವ್
ಜನನಿ ಪಾಲಿಸೆ ಶುಭಾಂಗಿ ಸಲೆ ದಯದಿ ವಲಿಸುತಲಿ ಪಾಲಾಬ್ಧಿ ಬಾಲೆ ಶೀಲೆ ಪ ವಾರಿಜಾರೊ ಸಹೋದರಿಯೆ | ಮೂರು ಭುವನೋದ್ಧಾರಿ ಚಾರುಗಾತ್ರಿ ಶ್ರೀರಮಣಿ | ದೂರ ನೋಡದಿ ಬಾರೆ ಮನೆಗೆ 1 ದಾತೆ ಖ್ಯಾತೆ ಮಾತೆ | ಸುಜನೋಪಕಾರಿ ಪಾವನಿ ಪ್ರೀತೆ ಸದಯೆ 2 ಸ್ತೋಮವಂದಿತೆ ತ್ರಿಗುಣಮಾನಿ ಭಾಮೆ ಭಾಗ್ಯದಾಯಕಿಯೆ ಪ್ರೇಮವಾರಧಿ ಬೀರು ದಯವ 3
--------------
ಶಾಮಸುಂದರ ವಿಠಲ
ಪಾಲಿಸು ನಮ್ಮಮ್ಮ ಮುದ್ದು ಶಾರದೆ ನಮ್ಮ ನಾಲಿಗೆ ಯೊಳು ತಪ್ಪುಬಾರದೆ ನೀಲ ಕುಂತಳೆ ತಾಯೀ ನಿನ್ನ ನಂಬಿದೆ ಕಾಯೆ ಪ ಅಕ್ಷರಾಕ್ಷರ ವಿವೇಕಿಯೇ ನಿಮ್ಮ ಕುಕ್ಷಿಯೊಳೀರೇಳು ಲೋಕವೆ ಸಾಕ್ಷಾತ್ ಸ್ವರೂಪಿಣಿ ಮೋಕ್ಷದಾ ಯಕಿಯೆ ತಾಯೆ ಪಾಲಿಸಮ್ಮಮ್ಮ 1 ಸರ್ವಾಲಂಕಾರ ಮೂರ್ತಿಯ ಚರಣ ಭಜಿ ಸುವೆ ಕೀರ್ತಿಯ ಗುರುಮೂರ್ತಿ ಪರಮಾ ನಂದದೊಳ್ ಪಾಲಿಸಮ್ಮಮ್ಮ 2 ಶೃಂಗಪುರದ ನೆಲೆವಾಸಿಯೆ ನಿಮ್ಮ ಸಂಗೀತ ಶಾಸ್ತ್ರ ವಿಶಾಲಯ ಭೃಂಗ ಕುಂತಳೆ ತಾಯೆ ಭಳಿರೆ ಬ್ರಹ್ಮನರಾಣಿ ಪಾಲಿಸಮ್ಮಮ್ಮ 3
--------------
ಕವಿ ಪರಮದೇವದಾಸರು
ಪೊಗಳಲರಿಯೆನೆ ಲೋಕಮಾತೇ ನಿನ್ನ ಸೊಗಸಾದ ರೂಪುರೇಖೆಯ ಸಿಂಧುಜಾತೇ ನಿಗಮವಿಖ್ಯಾತೇ ಪ ಅಳಕ ನಿಚಯವು ಇಂದ್ರನೀಲಗಳು ತುಂಬಿಗಳು ತಳಪುಗಳು ಯೆಸೆವ ನಳಿನಗಳು ಬಾಳೆಗಳು ಚೆಲುವಹಿ ಸುನಾಸಿಕವು ಅಲಕೆ ಸುಮವು ಚಂಪಕವು ಅಲರ್ವಿಲ್ಲಿನ ಧನುವೋ ಪುರ್ಬುಗಳೋ ಪೊಳೆವರದನದಸಾಲುಗಳುಕಳಸಗಳೋ ಕುಂಡಲಗಳೋ ವಿಲಸದಧರವು ಬಿಂಬಫಲವೋ ನವವಿದ್ರುಮವೋ ಅಳವಟ್ಟ ಸವಿನುಡಿಯು ಗಿಣಿಯ ಸೋಲಿಪ ಪರಿಯೋ ಕಳೆ ಪೆರ್ಚಿದಾನನವೋ ಶಶಿಯೋ ಭಳಿರೆ ಮಳಯಜಗಂಧಿನಿ ಮಹೇಶರಿಪು ಜನನೀ 1 ಗಳವು ಶಂಖವು ಮೆರೆವ ಕದಪುಗಳು ಮುಖರಗಳು ಕುಸುಮ ಮಾಲೆಗಳು ಸುಲಲಿತವಯವವೋ ಲತಾವಳಿಗಳ ತರಂಗವೋ ತಳಿವ ಪೂಜಡೆಯೋ ಸುಲಿಪಲ್ಲವವೋ ತೊಳಗುವ ತೊಡೆಯೆನಲೋ ಸಲಿಲಜಾಗಾರೇ ಸಮ್ಮೋಹನಾಕಾರೇ ಸೌಂದರ್ಯಭರಿತೆ 2 ವರಜಂಘೆಗಳು ಪಂಚಶರನ ಶರಧಿಗಳೋ ಸರಸೀರುಹ ಕೆಂದಳಿರೋ ಚರಣಗಳು ನಖಗಳು ಸುರುಚಿರಾಂಬಕೀ ದಯಾಕಾರೇ ಶುಭಚರಿತೆ ವಿಖ್ಯಾತೆ ಪುರಹರ ಸುರೇಶ್ವರ ಸುಪೂಜಿತಾಂಘ್ರಿಸರೋಜೇ ಭಕ್ತ ಮಂದಾರೇ ವರವೇಲಾನಗರವಾಸಿ ವೈಕುಂಠಚನ್ನಿಗರಾಯನರಸಿ ಗುಣರಾಸಿ ದುರಿತಾಸಿ ನಮೋ ಪರಮಪದದಾಯಕಿಯೆ ಸೌಮ್ಯನಾಯಕಿಯೆ 3
--------------
ಬೇಲೂರು ವೈಕುಂಠದಾಸರು
ಮರೆಯದಿರು ಮಹಾಮಾಯೆ ಮಾರುತನ ತಾಯೆ ಕರುಣಿಕರಕಮಲವನು ಶಿರದೊಳಿರಿಸುತ ಕಾಯೆ ಪ. ಪುಷ್ಟಿಕರಿ ನೀ ಪೂರ್ಣ ದೃಷ್ಟಿಯಿಡಲೀಗಖಿಳ ಕಷ್ಟ ಪರಿಹಾರಗೈವುತಿಷ್ಟಾಪೂರ್ತಿಗಳು ಸ್ಪಷ್ಟವಾಗುವವು ಸಕಲೇಷ್ಟದಾಯಕ ನಮ್ಮ ವಿಠ್ಠಲನ ಸೇವೆಗುತ್ಕøಷ್ಟ ಸನ್ನಹವಹದು 1 ಲೋಕನಾಯಕಿಯೆ ಕರುಣಾಕಟಾಕ್ಷವನಿರಿಸು ಭೀಕರಿಸುತಿಹ ಮನದ ವ್ಯಾಕುಲವ ಹರಿಸು ಪಾಕ ಶಾಸನ ಪೂಜೈ ಪದಕಂಜ ಭಕ್ತಜನ ಶೋಕಸಾಗರ ಶೋಷಣೈಕ ನಿಧಿ ಹರಿಸಹಿತ 2 ಹಿಂದೆ ಬಹು ಥರದಿ ನಾನೊಂದ ಪರಿಯನು ಮನಕೆ ತಂದು ದಯದೋರಿ ನೀ ಬಂದಿರುವಿ ಮನೆಗೆ ಮುಂದೆನ್ನ ಬಿಡದೆ ಗೋವಿಂದ ವೆಂಕಟಪತಿಯ ಹೊಂದಿರುವನಲಿ ಮಮತೆಯಿಂದಿಲ್ಲಿ ನೆಲೆಯಾಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ಶುಂಭ ದಮನಿ ದುರ್ಗೆಯೇ ಮಹಾಕಾಳಿ ಪ ಶುಂಭ ದಮನಿ ದುರ್ಗೆ ಅಂಬುಜವದನೆಯೇ ||ಶುಂಭ ಅ.ಪ ವ್ಯಾಳ ವೇಣಿಯೇ ಸು | ರಾಳಿಪೂಜಿತೆಯೆ 1 ಭಕ್ತರ ಪೋಷಿಣಿ ಮುಕ್ತಿದಾಯಕಿಯೆ 2 ಪೋಷಿಸೆನುತ ಪಾವಂಜೇಶನ ದಾಸರ 3
--------------
ಬೆಳ್ಳೆ ದಾಸಪ್ಪಯ್ಯ