ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಯ್ಯ ರಘುನಾಥ ಧೀನಜನೋದ್ದಾರಿ ಪ ಕೇವಲ ಪತಿತ ಪಾಮರ ನಾನು ಕೇವಲ ಪಾವನ ಮೂರುತಿ ನೀನು ಕೇವಲ ಘನ ಅಪರಾಧಿಯು ನಾನು ದೇವನೀ ಕರುಣಾ ಸಾಗರ 1 ಭಾವ ಭಕ್ತಿಯ ಕೀಲವ ನರಿಯೇ ವಿವೇಕ ಮತಿ ನೀ ನೀಡುವ ಧೊರೆಯೇ ಆವಾಗ ವಿಷಯಾ ಸಕ್ತನು ಹರಿಯೇ ಕಾದ ದೈವನು ನೀನೈ 2 ನತ ನಾದೇ ತರಳನ ಕುಂದಾಲಿಸದಿರು ತಂದೇ ಗುರು ಮಹಿಪತಿ ಪ್ರಭು ನಮೋಯಂದೇ ಶರಣಾಗತ ಸಹಕಾರೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪ್ರದೋಷಕಾಲವಿದೀಗ ನೀ ಮರೆ- ಯದೇ ನೆನೆಯೊ ಶಿವನಾ ಶಂಕರನಾ ಪ ಸದಾ ಸಕಲ ಸುರರಿಂದ ಕೂಡಿ ತಕ ತಧಿಂ ಎನುತ ಕುಣಿಯುವ ಶಿವನೀಗಲೂ ಅ.ಪ ಸಕಲ ವಾದ್ಯಗಳೂ ಶಂಭೋ ಎಂಬ ಸುವಾದಗಳೂ ತುಂಬುರ ನಾರದರೂ ನುಡಿಸಿ ಹೇ- ರಂಬ ಜನಕ ವಿಶ್ವಂಭರ ಎಂದು ದಿ- ಗಂಬರನಾಗಿ ಚಿದಂಬರ ಕುಣಿಯುವ 1 ಭೂಷಣಗಳ ಮಾಡಿ ಭಿಕ್ಷವನೂ ಬೇಡಿ ತಾತನಾಗಿ ಮೆರೆದು ಹಿಮ ಶೈಲ- ಜಾತೆ ಸಹಿತ ಪ್ರಖ್ಯಾತನಾಗಿ ಭವ- ಭೀತಿ ಬಿಡಿಸಿ ದುಃಖೇತರ ಕೊಡುವನು 2 ಗಿರಿರಾಜಕುಮಾರಿ ಕೈಮುಗಿದು ತನಗರುಹು ತತ್ವವೆನಲು ಸುರರು ಭಲಾ ಎನಲು ಪರಮ ಗುಣಸಾಂದ್ರ | ಕೇಳು ದಿನ- ಪರಾತ್ಪರನು ಶ್ರೀ ಗುರುರಾಮವಿಠಲ ವರತಾರಕ ಮಂತ್ರವಿದೇ ಎಂದನು 3
--------------
ಗುರುರಾಮವಿಠಲ
ವರದೇಂದ್ರವಿಠಲರ ಹಾಡು ಆಶೆಯ ಬಿಡಿಸಯ್ಯಾ | ಶ್ರೀಶ ಪ್ರಾ |ಣೇಶ ದಾಸರಾಯಾ ||ವಾಸುದೇವನ ಕಥೆ ಸೋಸಿಲಿ ಪಾಡುವ |ಲೇಸು ಭಕುತಿ ನೀಡೋ | ನೋಡೋ ಪ ಹರಿ ಗುರುಗಳ ಪ್ರಿಯಾ ನೆನಿಸೀ |ಮೆರೆದಿಯೊ ಗುರುರಾಯಾ ||ಸರುವದ ಶ್ರೀ ಹರಿ ಸ್ಮರಣೆಯ ಮಾಡುತ |ಧರೆಯೊಳು ಚರಿಸಿದ | ಭರದಿ 1 ಜ್ಞಾನ ಶೂನ್ಯನಾಗೀ ಜಗದಿ |ಮಾನವರಿಗೆ ಬಾಗಿ |ದಾನವಾ ಧ್ಯಾನ ಮಾಡದೇ |ಹೀನನಾದೆನು ನಾನು | ಇನ್ನೇನು 2 ವರದೇಂದ್ರರ ಸದನಾ | ಬಳಿಯಾ |ಇರುತಿಹ್ಯ ಜಿತ ಮದನಾ ||ಮರುತ ಮತದ ಸದ್ಗ್ರಂಥದ ಸಾರವ |ತ್ಪರಿತದಿಂ ಪೇಳ್ದಿ | ಬಾಳ್ದಿ 3 ಕಂದನೆಂದುಯೆನ್ನ | ಕಾಯ್ವದು |ಸುಂದರ ಗುರು ಮುನ್ನಾ ||ನಂದ ಕಂದನ ಅಂದ ಪಾದವಾ |ಚಂದದಿ ತೋರೋ | ಬಾರೋ 4 ಭಾಗವತ ಪದಧೂಳಿಯಲಿ |ಪೊರಳಾಡಿಸೋ ಯಂದೇ | ತಂದೇ 5
--------------
ಶ್ರೀಶಪ್ರಾಣೇಶವಿಠಲರು