ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಗು ಮಲಗಯ್ಯ ಹನುಮ ಕಲಿಭಂಜನ ಭೀಮ ಜಲಧಿ ಅಲವಬೋಧನಾಮಾ ಜೋ ಜೋ ಪ ತ್ರೇತೆಯಲಿ ರಾಮದೂತನಾಗಿ ನೀ ಬಂದು ಭೀತಿಯಿಲ್ಲದೆ ಲಂಕೆಯ ದಹಿಸಿದೆಯೊ ಅಂದು ಸೀತೆಯಿತ್ತಂಥ ಚೂಡಾಮಣಿಯನು ತಂದು ಪ್ರೀತಿಪಡಿಸಿದೆ ರಾಮನ ನೀ ದಯಾಸಿಂಧು 1 ದ್ವಾಪರಾಂತದಲಿ ಭೀಮನಾಗಿ ನೀ ಬಂದೆ ಪಾಪಿ ಕೀಚಕ ದುಶ್ಶಾಸನಾದ್ಯರ ಕೊಂದೆ ಸಿರಿ ಕೃಷ್ಣನ ಪಾದಕೆರಗಿ ನಿಂದೆ ಭಾಪು ಭಾಪುರೆಂದೆನಿಸಿಕೊಂಡೆ ಅವನಿಂದೆ 2 ನಾನೆ ದೇವರೆಂಬ ಮತವನು ಹೆಮ್ಮೆಯಿಂದ ದಾನವರೀ ಕಲಿಯುಗದಲಿ ಪೊಗಳೆ ಮುದದಿಂದ ನೀನವತರಿಸಿ ಮಧ್ವಮುನಿ ಪೆಸರಿನಿಂದ ಹೀನ ಮತವ ಮುರಿದೆಯೊ ವಾಗ್ಭಾಣಗಳಿಂದ 3 ಏಕಾದ್ಯಶ ಕರ್ಮಗಳ ಶ್ರೀ ಹರಿಗರ್ಪಿಸಿ ಆತನನು ನೀ ಬಹು ಸಂತೋಷವನುಪಡಿಸಿ ಜಾತರಹಿತನಾಗೆನುತ ಆಶಿಷವ ವಹಿಸಿ ವಾತಸುತ ಕುಳಿತಿಹೆ ಯಂತ್ರೋದ್ಧಾರನೆನಿಸಿ 4 ಕಂಗಳನು ಮುಚ್ಚಿ ಜಪಮಾಲೆಯನು ತಿರುಗಿಸುತ ರಂಗೇಶವಿಠಲನ ತಾನದೊಳು ಸ್ಮರಿಸುತ ಹಿಂಗೇಕೆ ಕುಳಿತಿಹೆ ಮಲಗೇಳಯ್ಯ ದಾತ ತುಂಗ ವಿಕ್ರಮ ನೀನು ತ್ರಿಭುವನದಿ ಪ್ರಖ್ಯಾತ 5
--------------
ರಂಗೇಶವಿಠಲದಾಸರು