ಬ್ರಹ್ಮವದು ಹ್ಯಾಗಿದೆಬ್ರಹ್ಮ ಕೇಳ್ವನ ಹಾಗಿದೆಬ್ರಹ್ಮವದು ಹೀಗೆಂದು ತೋರಲಿಕೆ ಶಕ್ಯವೇ ಪ
ಬ್ರಹ್ಮವದು ಶೂದ್ರನೇಬ್ರಹ್ಮವದು ಭದ್ರನೇಬ್ರಹ್ಮವದು ರುದ್ರನೆಂದು ತೋರಿಸಲು ಶಕ್ಯವೇ 1
ಬ್ರಹ್ಮವದು ಯಂತ್ರವೇಬ್ರಹ್ಮವದು ತಂತ್ರವೇಬ್ರಹ್ಮವದು ಮಂತ್ರವೆಂದು ತೋರಿಸಲು ಶಕ್ಯವೇ 2
ಬ್ರಹ್ಮವದು ರೊಟ್ಟಿಯೇಬ್ರಹ್ಮವದು ಪುಟ್ಟಿಯೇಬ್ರಹ್ಮವದು ಹೊಟ್ಟೆಯೆಂದು ತೋರಿಸಲು ಶಕ್ಯವೇ 3
ಬ್ರಹ್ಮವದು ಜೋಳಿಗೆಬ್ರಹ್ಮವದು ಮಾಳಿಗೆಬ್ರಹ್ಮವದು ಹೋಳಿಗೆ ಎಂದು ತೋರಿಸಲು ಶಕ್ಯವೇ 4
ಹೇಗಿದೆಂದು ಕೇಳ್ವಡೆಹೀಗೆದೆಂದು ಪೇಳ್ವಡೆಹೇಗೆ ಹೀಗೆ ಎಂಬುದಕ್ಕೆ ಚಿದಾನಂದನ ನೋಡಿದೆ 5