ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಜಯ ಜಯ ವೈಷ್ಣವ ಪಯನಿಧಿ ಚಂದ್ರಗೆ ಜಯ ಜಯ ವ್ಯಾಸಯತೀಂದ್ರರಿಗೆ ಪ ಜಯ ಜಯ ವರ ಕರ್ಣಾಟಕ ಪತಿಗೆ ಜಯ ಸಿಂಹಾಸನವೇರಿದಗೆ ಅ.ಪ ನಾಕು ಶಾಸ್ತ್ರಗಳ ಪಾರಂಗತರಿಗೆ ಕಾಕುಮತಗಳನು ತುಳಿದವಗೆ ಆ ಕಮಲಾಪತಿ ಭಕುತವರೇಣ್ಯಗೆ ಶ್ರೀಕರ ಚಂದ್ರಿಕಾಚಾರ್ಯರಿಗೆ 1 ಹನುಮನ ಭಾಷ್ಯವ ಅಣಿಮಾಡಿದಗೆ ಹನುಮಗೆ ಭವನಗಳನು ಕಟ್ಟಿದಗೆ ಹನುಮನ ಯಂತ್ರದಿ ಬಿಗಿದಪ್ಪಿದಗೆ ಮುನಿತ್ರಯದಲಿ ಸೇರಿದ ದೊರೆಗೆ 2 ಮಾಯಾವಾದಗಳನು ಗೆಲಿದವಗೆ ನ್ಯಾಯಾಮೃತಧಾರೆಯ ಅಭಿಷೇಕದಿ ಆ ಯದುಪತಿಯನು ಕುಣಿಸಿದಗೆ 3 ಚಕ್ರಧರನ ಸುಳುಗಳ ತಿಳಿದವಗೆ ಮಿಕ್ಕಮತಗಳನು ಅಳಿದವಗೆ ವಕ್ರಯುಕುತಿಗಳನು ತುಕ್ಕುಡಗೈಯ್ಯವ ತರ್ಕ ತಾಂಡವದಿ ನಲಿದವಗೆ 4 ಕೃಷ್ಣದೇವರಾಯನ ಕುಲಪತಿಗೆ ಕಷ್ಟದ ಕುಹಯೋಗವ ಕೊಂದವಗೆ ಶಿಷ್ಟಜನಗಳಿಗೆ ಇಷ್ಟಾರ್ಥಗಳನು ವೃಷ್ಟಿಯಗೈವ ಪ್ರಸನ್ನರಿಗೆ 5
--------------
ವಿದ್ಯಾಪ್ರಸನ್ನತೀರ್ಥರು
ಬಿಸಜ ಕಾನಮಿಪೇ ಪ ವಾತಸುತನೆನ್ನಿಸುತ | ಸೀತೆ ರಮಣನ ಕಂಡುಸೀತೆ ವಾರ್ತೆಯ ನರುಹಿ | ಖ್ಯಾತ ನೀನಾದೇ |ಮಾತರಿಶ್ವನೆ ಹರಿಯ | ಪ್ರೀತಿ ನಿನ್ನೊಳಗೆಂತೋಪೋತ ಭಾವ ದೊಳಾಂತೆ | ಪ್ರೀತಿ ಅಪ್ಪಿಗೆಯಾ 1 ಉರ ರಕ್ತವನು | ಕುಡಿದಂತೆ ತೋರಿ ಜಗನಡುಗುವಂತೆಸಗಿವೆಯೊ | ಕಡುಗಲಿಯ ಭೀಮಾ 2 ಸನ್ಯಾಸದಾಶ್ರಮವ ಅ | ನ್ಯಾಯದಲಿ ಗೊಂಡುಶೂನ್ಯ ಮತ ತತ್ವ ಪ್ರ | ಚ್ಛನ್ನದಲಿ ಪೇಳ್ದಾಅನ್ಯಾಯ ಕಳೆವುದಕೆ | ಜನ್ಯನಾಗುತ ಮಧ್ವಚೆನ್ನ ಪೆಸರಲಿ ಪೇಳ್ದ | ಘನ್ನ ತತ್ವಗಳಾ 3 ಆರು ಕೋಣ್ಯು ಪರಿಯಾ | ಕಾರದಲಿ ವಲಯಾಮೂರು ಕೋಟಿಯ ಸಂಖ್ಯೆ | ವಾನರಾಕೃತಿ ಬದ್ಧವೂ |ಚಾರು ಯಂತ್ರದಿ ಸೌಮ್ಯ | ದಾಕಾರದಲಿ ಜಪದಹಾರ ಪಿಡಿಯುತ ವ್ಯಾಸ | ತೀರಥಿರಿಗ್ವೊಲವೇ 4 ವಕ್ರ ಮನವನು ತ್ಯಜಿಸಿ | ಚಕ್ರತೀರ್ಥದಿ ಮಿಂದುವಕ್ರ ಬಕರಿಪು ನಿನ್ನ | ಚೊಕ್ಕ ರೂಪವ ಸೇವಿಸೀಅಕ್ರೂರ ವರದ ಗುರು | ಗೋವಿಂದ ವಿಠ್ಠಲನಅಕ್ಕರದಿ ಭಜಿಸುವಗೆ | ಚಕ್ರಿಪುರ ವೀವೇ5
--------------
ಗುರುಗೋವಿಂದವಿಠಲರು
ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು | ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು | ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು 1 ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು | ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು 2 ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು | ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುಟ್ಟದಿರಿಗೋಪವನಿತೆಯರು ಗಲಭೆಯದೇನುತೊಲಗಿರೇ ತೊಟ್ಟಿಲಂ ತೂಗದಿರಿ ಕೃಷ್ಣನೆದ್ದರೆ ಕಾಡದಿರನೆನ್ನಾ ಪ ಮಿಸುನಿದೊಟ್ಟಿಲೊಳಂತೆ ದುಪ್ಪದುಪ್ಪಳಿನ ಹಾಸಿನಲಿ ಮಂದಾರ ಕುಸುಮಗಳ ಜಾಜಿ ಮಲ್ಲಿಗೆ ಸೇವಂತಿಗೆ ಪಂಕೇರುಹದಾ ಎಸಳುಗಳ ಪಸರಿಸಿಯೆ ಮಲಗಿಸಿದೆ ಪಾಲೆರದು ಮೊಲೆಯೂಡಿ ಪೀತಾಂಬರವನೆ ಹೊದ್ದಿಸೀ | ಹಸುಳೆಯನಮಲ ಕೋಮಲಾಂಗನನಂಗಕೋಟಿಗಳ ನಾ ಚಿಸಿ ಚಿತ್ತಿನ ಪುತ್ಥಳಿಯ ಸಚ್ಚಿದಾನಂದ ಮೂರುತಿಯಾ ಬಿಸಜಾಕ್ಷನಂ ಕೃಷ್ಣನಂ ಬಲದೇವಸಹಜಾತನಂ ಕುಸುಮನಾಭನಂ ಜಲದನೀಲನಂ ದಿವಿಜಪಾಲನಂ 1 ಬಿಡದೊತ್ತಿಯಪ್ಪಿ ಪರಮಾನಂದ ಜಲಧಿಯೊಳಗೋಲಾಡಿ ಸಂತುಷ್ಟಿಯಿಲ್ಲವಲ್ಲಾ ಒಡೆಯನೋ [ಇವ]ಯೆಮ್ಮೊಡನೆ ಪೊಡವಿಗೆ ಜೀವಂಗಳಿಗೆ ಒಡೆಯನೆಂಬಿರಿ ಪರಲೋಕದಾನಂದಕ್ಕೆ ಒಡೆಯನೇ ನಿಮಗೆನ್ನ ಕಂದ ಮುದ್ದು ಭಾಗ್ಯದ ಬೆಳಸು ಮಡಗಿ ತೊಟ್ಟಿಲೊಳಚ್ಯುತನನಂತನಂ ಮುಕುಂದನ 2 ನೋಡಲಿಹೆವೆಂತು ಲಾವಣ್ಯಸಿಂಧುವನೊಲಿದು ಸರವೆತ್ತಿ ನಾಡ ಹೆಂಗಳ ದೃಷ್ಟಿದೋಷದಿಂ ಪಾಲ್ಗುಡಿದು ನಲವಿಂದ ಲಾಡಲೊಲ್ಲನು ವಸುಂಧರೆಯ ತೊಟ್ಟಿಲಶಿಶುಗಳಂದದಿ ಮೊಲೆಯ ನೂಡಿದರೆ ಬಾಯ್ದೆರೆಯಲೊಲ್ಲ ಮಂತ್ರದಿಯಂತ್ರದಿಂದೊಮ್ಮೆ ಯೂಡಿ ಮಲಗಿಸಿದೆ ವಿಶ್ವನಂ ತ್ರೈಜಗಪ್ರಾಜ್ಞಮೂರುತಿಯಂ3 ರವಿಯಹುದು ಬಿಸಿಗದಿರದೆಲ್ಲಿ ಚಂದಿರನಹುದು ಹಿಮವೆಲ್ಲಿ ನವದೆಲ್ಲಿ ಇಂದುಧರನಹುದು ಫಣೆಗಣ್ಣೆಲ್ಲಿಯೆಂದು ಬರಿದೇಕೆ ಮರುಳಾಗುವಿರಿ ಅವಿರಳನದ್ವಯನನಾದಿಮಧ್ಯಾಂತರಹಿತನ ಧರ್ಮಸ್ಥಾಪನಾಚಾರ್ಯ ನ[ವಂ] ಮಹೀಭಾರವ ತವಿಸಲೆಂದವÀತರಿಸೆ ಜನನವಂ ಪಡೆದ ತಂದೆಯಂ ಭುವನಪಾವನ ಸುಪ್ರಗಧಾಮೂರ್ತಿಯಂ ಶ್ರವಣಮಂಗಳಸತ್ಕೀರ್ತಿಯಂ4 ನಿಗಮವೀ ಹರಿಯ ಮಹಿಮಾ ಸಮುದ್ರದ ತಡಿಯ ತೆರೆಗಳಲಿ ಮಿಗೆ ಸಿಲುಕಿ ಮುಳುಗಲರಿಯದೆ ಬೀಳುತೇಳುತಾಳುತಲಿವೇಕೋ ಮೊಗನಾಲ್ಕನಯ್ಯನ ಸಾಸಿರದೈವವಂ ಪಡೆದ ತಂದೆಯಂಅದೆಂತಲೆಂದಾರರಿವರೂ ಸುಗುಣ ಸರ್ವಜ್ಞನಂ ಸರ್ವಭೂತರಾತ್ಮಕನಂ ಜಗದೊಳ್ ಹೊರಗೆ ಪೂರ್ಣನಾಗಿ ಭುವನವ ಜಠರದೊಳಗಿಟ್ಟ ಅಗಣಿತನ ವೈಕುಂಠ ಪತಿಯ ಘನತೆಯನರಿತು ಪೊಗಳುವರೇ ಮುಗುದೆಯರು ನೀವೆತ್ತ ಮಾಯೆಯ ಕುಣಿಸಿ ನಗುವ ಹರಿಯೆತ್ತಾ 5
--------------
ಬೇಲೂರು ವೈಕುಂಠದಾಸರು
ಮೂರುತಿ ಪುಟ್ಟ ಮೂರುತಿ ಪ. ಸಾರುತಿ ಹರಿಗುಣ ಬೀರುತಿ ತ್ರಿಜಗದಿ ಅ.ಪ. ತ್ರೇತೆಯ ಯುಗದಲಿ ಜನಿಸಿ | ರಾಮ ದೂತಕಾರ್ಯಕೆ ಮನವಿರಿಸಿ ಪ್ರೀತಿಯೊಳ್ ರವಿಜನ ಉಳಿಸಿ | ಬಹು ಖ್ಯಾತಿಯ ವಾಲಿಯನಲ್ಲೇ ಅಳಿಸಿ ವಾತವೇಗದಿ ವನಧಿಯ ದಾಟಿ ಉಂಗುರ ಸೀತೆಗಿತ್ತು ಲಂಕೆ ವೀತಿಹೋತ್ರನಿಗಿತ್ತ 1 ದ್ವಾರಕಿನಿಲಯನ ಒಲಿಸಿ | ಬಲು ಧೀರ ಭೀಮಸೇನನೆನಿಸಿ ಸೋಮಕುಲದಲಿ ಜನಿಸಿ | ಬಲು ಕಾಮಿ ಕೀಚಕನನ್ನು ವರೆಸಿ ಕಾಮಿನಿಗೋಸುಗ ಕಾಮುಕ ಕುರುಕುಲ ಧೂಮವೆಬ್ಬಿಸಿದ ನಿಸ್ಸೀಮ ಸುಗುಣಧಾಮ 2 ಪುಟ್ಟಯತಿಯ ರೂಪತಾಳಿ | ಬಲು ಗಟ್ಟಿ ಗೋಪೀ ಗೆಡ್ಡೆ ಸೀಳಿ ಪುಟ್ಟ ಕೃಷ್ಣನ ಕಂಡು ತೋಳಿ | ನಿಂದ ನಿಷ್ಟೆಯೊಳ್ ನೆತ್ತಿಯೊಳ್ ತಾಳಿ ಕುಟ್ಟಿ ಕುಮತಗಳ ವೈಷ್ಣವಾಗ್ರಣಿಯಾದ 3 ಸಾಕಾಯಿತೇ ಸ್ವಾಮಿಕಾರ್ಯ | ಇಲ್ಲಿ ಬೇಕಾಯಿತೇ ಮೌನಚರ್ಯಾ ಆ ಕಾಲದ ಎಲ್ಲ ಶೌರ್ಯ ಉಡುಗಿ ಏಕಾಂತದಲಿ ಹರಿಚರ್ಯಾ ವಾಕು ಉಚ್ಚರಿಸದೆ ಈ ಕುಧರಜೆ ತೀರ ಏಕಾಂತವಾಸನೆ 4 ಅಪಾರಮಹಿಮನೆ ಹಂಪೆ | ಯಲ್ಲಿ ಪರಿ ಇರುವುದು ತಂಪೆ ಪತಿ ಪದಕಂಜ ಕಂಪೆ | ಇಲ್ಲಿ ನೀ ಪಾರಣೆಯೆ ಮಾಳ್ಪ ಸೊಂಪೆ ಗೋಪಾಲಕೃಷ್ಣವಿಠ್ಠಲದಾಸ ನಿನ್ನಲ್ಲಿ ಸ್ಥಾಪಿಸಿದರೆ ವ್ಯಾಸರೀಪರಿ ಯಂತ್ರದಿ 5
--------------
ಅಂಬಾಬಾಯಿ
ಯಂತ್ರೋದ್ಧಾರಕನೆ | ಪಾಲಿಸೊ ಯಂತ್ರೋದ್ಧಾರಕನೆ ಪ. ಸಂತತ ತವ ಪದಕ್ರಾಂತಳಾಗಿರುತಿರೆ ಇಂತು ನಿರ್ದಯವೇಕೊ ಸಂತಸದಲಿ ಪೊರೆ ಅ.ಪ. ಯತಿಗಳಿಂದ ಸಂಸ್ಥಿತನೆನಿಸುತ ಅ- ಪ್ರತಿಮ ಮಹಿಮ ಈ ಕ್ಷಿತಿಯೊಳು ನೆಲಸಿಹ 1 ತುಂಗ್ರಭದ್ರ ತೀರ ಮಂಗಳ ಮಹಿಮನೆ ಕಂಗೊಳಿಸೆನ್ನಂತರಂಗದಲಿ ನೆಲಸುತ 2 ಮಂತ್ರಿವರ್ಯ ಮಾಹಂತ ಹರಿಪ್ರಿಯ ಎಂತು ವ್ಯಾಸರಿಲ್ಲಿ ಯಂತ್ರದಿ ಬಿಗಿದರೊ 3 ಹನುಮ ಭೀಮ ಶ್ರೀ ಮುನಿ ಮಧ್ವಾರ್ಯನೆ ಸನುಮತದಲಿ ಎನ್ನ ಮನದಿಚ್ಛೆ ಸಲಿಸೊ 4 ಬೆಟ್ಟದೊಡೆಯ ಬಹು ನಿಷ್ಠೆಯೊಳ್ ಸ್ತುತಿಸುವೆ ಇಷ್ಟ್ಯಾಕೆ ತಡೆ ಹಂಪೆ ಪಟ್ಟಣವಾಸಿಯೆ 5 ಕಾಮಿತ ಫಲದನೆ ಕಾಮಿನಿಗುಂಗುರ ನೇಮದಿಂದಿತ್ತೆಯೊ ರಾಮನ ದೂತನೆ 6 ಎಷ್ಟು ಮಾನವೊ ಬೆಟ್ಟೆಲಿ ಜಪಮಣಿ ದೃಷ್ಟಿಸೊ ಗೋಪಾಲಕೃಷ್ಣವಿಠ್ಠಲ ದಾಸ 7
--------------
ಅಂಬಾಬಾಯಿ
ಲಿಸಂಗವಾಗಲಿ ಸಾಧು ಸಂಗವಾಗಸಂಗದಿಂದ ಲಿಂಗದೇಹ ಭಂಗವಾಗಲಿ ಪ.ಅಚ್ಯುತಾಂಘ್ರಿ ನಿಷ್ಠರಾದ್ಯದೃಚ್ಛಲಾಭ ತುಷ್ಟರಾಧನಿಶ್ಚಯ ಜ್ಞಾನವಂತರಾದ ಅಚ್ಚ ಭಾಗವತರನಿತ್ಯ1ತಂತ್ರಸಾರಅಷ್ಟಮಹಾಮಂತ್ರ ಪರಿಪೂರ್ಣ ಸ್ನೇಹಯಂತ್ರದಿಂದ ಜಗತ್ಸ್ವಾತಂತ್ರ್ರ್ಯನ ಗುರಿ ಮಾಡುವವರ 2ಪಂಚಸಂಸ್ಕಾರ ಭೇದ ಪಂಚಕಯುಕ್ತರಾಗಿ ಪ್ರಪಂಚಸೂತ್ರಪ್ರಸನ್ನವೆಂಕಟ ಪಂಚಬಾಣನಯ್ಯನವರ3
--------------
ಪ್ರಸನ್ನವೆಂಕಟದಾಸರು