ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವಿನಾಯಕ ಪಿನಾಕಿ ಸುತ ಜಗ ದೇಕನಾಥನ ನಾಭಿಮಂದಿರ ಲೇಖಕಾಗ್ರಣಿ ವಿಷ್ಣುಕೀರ್ತನ ಮಾನಿ ಸಾಧಕನೆ ಪರಾಕು ನುಡಿಯುವೆ ನೂಕಿ ವಿಘ್ನವ ಸಾಕು ನಮ್ಮನು ನೋಕನೀಯನ ಭಜಿಸಲನುವಾಗೆಂದು ಬೇಡುವೆನು 1 ಕಾಣೆ ನಿನಗೆಣೆ ಮೂರುಲೋಕದಿ ಮಾನ್ಯನಾಗಿಹೆ ಸರ್ವರಿಂದಲು ಶ್ರೀನಿಧಿಯ ದಯದಿಂದ ಪ್ರಾಣಾವೇಶಸಂಯುತನೆ ಧ್ಯಾನ ಮಾಡುವೆ ವಿಶ್ವತೈಜಸ ನನ್ನು ಮಹದಾಕಾಶಮಾನಿಯೆ ಆನತಾಮರಧೇನು ಸಿದ್ಧಿವಿನಾಯಕನೆ ನಮಿಪೆ 2 ದೈತ್ಯಗಣಗಳಿಗಿತ್ತು ವರವು ನ್ಮತ್ತರನು ಮಾಡುತಲಿ ಶ್ರೀಪುರು ಷೋತ್ತಮನ ಸೇವಿಸುವೆ ವಿದ್ಯಾಧೀಶ ಸುಖಭೋಕ್ತ ಮಾತರಿಶ್ವನ ದಾಸರಿಗೆ ಹರಿ ಭಕ್ತಿ ವಿಷಯ ವಿರಕ್ತಿ ನೀಡುವೆ ಶಕ್ತಿ ನೀ ನಾಲ್ಕೆರಡು ಕಲ್ಪದಿ ಸಾಧಿಸಿರೆ ಪದವಿ 3 ವಕ್ರ ತುಂಡನೆ ನೀಗಿಸೆನ್ನಯ ವಕ್ರಬುದ್ಧಿ ವಿವೇಕನೀಡುತ ದಕ್ಕಿಸೈ ಶಾಸ್ತ್ರಾರ್ಥ ಚಯನವ ಚಾರುವಟು ಗಣಪ ರಕ್ತಗಂಧಪ್ರೀಯ ಸೋಮನ ಸೊಕ್ಕು ಮುರಿದೆಯೊ ಭೂಪ ಭಕ್ತಿಯ ಉಕ್ಕಿ ಸೈ ಹರಿಯಲ್ಲಿ ತವಕದಿ ಮಂಗಳಪ್ರದನೆ 4 ರಂಗ ಮಂದಿರ ದಕ್ಷಿಣಸ್ಥವಿ ಹಂಗಗಮನನ ರಾಣಿ ರುಕ್ಮಿಣಿ ಯಂಗದಲಿ ಪುಟ್ಟುತಲಿ ದಿತಿಜಾಂತಕನೆನಿಸಿಕೊಂಡು ಗಂಗೆಪಿತನನು ಸೇವಿಸಿದೆ ಮಾ ತಂಗಮುಖ ಮಹಕಾಯ ನಾರೀ ಸಂಗವರ್ಜಿತ ಬೀರು ಕರುಣಾಪಾಂಗ ದೃಷ್ಟಿಯನು 5 ಮೊದಲು ಪೊಜೆಯ ನಿನಗೆ ವಿಹಿತವು ವಿಧಿ ಭವಾದ್ಯರ ಪೊರೆವ ವಿಶ್ವನು ಮುದದಿ ನೀಡಿಹ ವರವ ಸಿದ್ಧಿಯ ಕೊಡುವೆ ಭಕ್ತರಿಗೆ ಮದದಿ ಬಿಡುವರಿಗೆಲ್ಲ ಖೇದವೆ ಒದಗಿ ಬರ್ಪುದು ಬಾಗಿ ಭಜಿಸುವೆ ಸದಯನಾಗುತ ವಿಷ್ಣು ಭಕ್ತರ ಸಂಗ ನೀಡೆನಗೆ 6 ವ್ಯಾಪ್ತ ದರ್ಶಿಯೆ ವಂದಿಸುವೆ ಪರ ಮಾಪ್ತ ಹರಿ ಭಕ್ತರಿಗೆ ನೀನಿಹೆ ಸೂಕ್ತ ಸಾಧನೆ ಗೈಸು ಖೇಶನೆ ಸೋಮಪಾನಾರ್ಹ ಆರ್ತನಿಹೆ ಬಹುಮೂಢ ಖರೆವೇ ದೋಕ್ತಮರ್ಮವ ಭಾಸಗೈಸಿ ಕೃ ತಾರ್ಥನೆನಿಸೈ ಮೃದ್ಭವ ವಿರೂಪಾಕ್ಷ ತತ್ವೇಶ 7 ಬರೆದೆ ಭಾರತ ವೇದವ್ಯಾಸರ ಕರುಣದಿಂದಲಿ ಭಕ್ತಿಯೋಗಿಯೆ ಶರಣು ಶೇಷಶತಸ್ಥರಿಗೆ ಗುರುವಿರ್ಪೆ ಹೇರಂಭ ದುರಳ ಗಣಗಳ ಕಾಟತಪ್ಪಿಸಿ ಹರಿಗೆ ಸಮ್ಮತವಿಲ್ಲ ದೆಡೆಯಲಿ ಮರುಳುಗೊಲ್ಲದ ಮನವು ನನಗಿರಲೆಂದು ಹರಸೆಂಬೆ 8 ಜಯಜಯತು ವಿಶ್ವಂಭರ ಪ್ರೀಯ ಜಯಜಯವು ಮೈನಾಕಿತನಯಗೆ ಜಯಜಯವು ಶ್ರೀಕೃಷ್ಣವಿಠ್ಠಲನ ದಾಸವರ್ಯನಿಗೆ ಜಯಜಯವು ಸದ್ವಿದ್ಯೆಕೋಶಗೆ ಮೀನಾಂಕ ಭ್ರಾತೃವೆ ಜಯಜಯವು ವಿಘ್ನೇಶ ಮಂಗಳಮೂರ್ತಿ ಗಣಪನಿಗೆ 9
--------------
ಕೃಷ್ಣವಿಠಲದಾಸರು
ಹರುಷವಾಯಿತು ಮನಕೆ ಪ. ನಿರುತದಿ ಎನ್ನಯ ಹೃದಯದಲ್ಲೇ ನಿಂದು ಶ್ರೀ ಅನುದಿನ ಅ.ಪ. ತ್ರೇತ್ರಾಯುಗದಲಿ ಜನಿಸಿ ರಘುಪತಿಯ ದಾಸನೆಂದೆನಿಸೆ ಸೀತೆಗೆ ಉಂಗುರವಿತ್ತು ಶರಧಿಯ ಲಂಘಿಸಿ ಮಾತೆಯ ರತ್ನ ರಘುನಾಥ ಗೊಪ್ಪಿಸಿದೆಯೋ 1 ದ್ವಾಪರ ಯಗದಲಿ ಕುಂತಿಯ ಕುಮಾರನೆಂದೆನಿಸಿ ಪಾಪಿ ರಕ್ಕಸರನು ಸಂಹಾರ ಮಾಡಿ ಪ್ರಖ್ಯಾತಿಯ ಪಡೆದು ಭೀಮನೆಂದೆನಿಸಿ 2 ಮೂರನೆ ಅವತಾರದಿ ಮುನಿ ಮಧ್ವರೆಂದೆನಿಸಿ ಮಾರಮಣನ ಗುಣಗಳ ಪೊಗಳುತಲಿ ಮೂರುತಿ ರುಕ್ಮೀಣೀಶ ವಿಠಲನ ಕರುಣದಿ 3
--------------
ಗುಂಡಮ್ಮ
ಹೆಣ್ಣ ನಿಚ್ಛಿಸುವರೆ ಮೂಢ - ಇದನುಕಣ್ಣು - ಮೈ ಮನಗಳಿಂಗಳಿಂ ಸೋಂಕಲು ಬೇಡ ಪ.ತಾಯಾಗಿ ಮೊದಲು ಪಡೆದಿಹುದು - ಮತ್ತೆಬಾಯಯೆಂದನಿಸಿ ಕಾಮದಿ ಕೆಡಹುವುದುಕಾಯದಿ ಜನಿಸುತ ಬಹುದು - ಇಂತುಮಾಯೆಯು ನಿನ್ನ ಬಹು ವಿಧದಿ ಕಾಡುವುದು 1ಹಿತ ಶತ್ರುವಾಗಿ ಹೊಂದುವುದು - ನಿಮಿಷರತಿಗೊಟ್ಟುನಿತ್ಯ ಮುಕ್ತಿಯ ಸೆಳೆಯುವುದುಕ್ಷಿತಿಯ ಪೂಜ್ಯತೆ ಕೆಡಿಸುವುದು - ಮುಂದೆಶತಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು2ಬಗೆಯದು ತನುವೆಲುವುನರ - ಖಂಡ - ಅದರೊಳಗೆ ವಾಯುರಂದ್ರ ಕಿಸುಕುಳದ ಉದ್ಧಂಡಭಗವೆಂಬುದು ಮೂತ್ರದಭಾಂಡ - ಆದನೊಗಡಿಸದೆ ನಿಜಸುಖವಿಲ್ಲಕಂಡೆಯ3ವಶನಾದ ವಾಲಿಯ ಕೊಲಿಸಿಹುದು - ಹೀಗೆಹೆಸರು ಮಾತ್ರದಿ ದಶಶಿರನಳಿದಿಹುದುಶಶಿಯಂಗದಲಿ ಕ್ಷಯವಿಹುದು - ಹೀಗೆಹೆಸರು ಪಡೆದ ಕೀಚಕನನಳಿದಿಹುದು 4ಪಶುಪತಿಯ ದೆಸೆಗೆಡಿಸಿಹುದು - ಹೀಗೆವಸುಧೆಯೊಳ ಜೀವರ ಹಸಗೆಡಿಸಿಹುದುವಸುಧೇಶನ ನಾಮ ಮರೆಸುವುದು - ನಮ್ಮಅಸಮ ಪುರಂದರವಿಠಲನ ತೊರೆಸುವುದು 5
--------------
ಪುರಂದರದಾಸರು