ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲೋದ್ಭವನ ತಾಯೇ | ನಮಿಸುವೆನ್ನನು ಕಾಯೇ ಕಮಲಾಕ್ಷ ಹರಿ ಪ್ರೀಯೆ | ಚಿತ್ಪ್ರಕೃತೇ ಪ ಓಂಕಾರ ವಾಚ್ಯನ | ಶಂಕೆ ಇಲ್ಲದೆ ಭಜಿಸೇಸಂಖ್ಯೆ ರಹಿತ ರೂಪಳೇ |ಯಂಕಾಮಯೇ ತಂತಮು | ಗ್ರಂ ಕೃಣೋಮೆಂದು ಬಿಂಕದಿ ಶ್ರುತಿ ಪೇಳ್ವುದೇ 1 ಆಪಾಂಗ ವೀಕ್ಷಣ ಸೃಷ್ಠಿ | ವ್ಯಾಪಾರಂಗಳ ಹರಿಕೃಪೆಯಿಂದ - ಗೈಯ್ಯುವಳೇ |ಅಪವಿತ್ರರಿಗೆ ಯೋಗ್ಯ | ವಿಪರೀತ ಮತಿಯಿತ್ತು ಕುಪಥಾಂಧಂತದು ಪ್ರಾಪಕೇ 2 ಕಂಬು ಚಕ್ರಾಂಕಿತನ | ಅಂಬುಜಾಕ್ಷನ ಹೃದಯಾಂಬರದಲಿ - ತೋರಿಸೇ |ಇಂಬಿಟ್ಟು ಮನ ಬಯಕೆ | ತುಂಬಿಸುವುದು ಅನ್ಯಹಂಬಲ ನೀ ಕೊಡದೇ3 ಸನ್ನುತ | ಮೋಕ್ಷದಾಯಕ ಪರಮಾಕ್ಷರ ಶ್ರೀ ಹರಿಯ |ಈಕ್ಷಿಪ ಸುಖ ಕೊಡು | ಪೇಕ್ಷಿಸದಲೆ ತಾಯೆಲಕ್ಷಣವಂತೇ - ಗುಣವಂತೇ 4 ಕರವೀರ ಪುರದರಿಸಿ | ಶರದಿ ಸಂಭವೆ ಎನಿಸಿವರವ ನೀಡುತ ಪೊರೆವೇಗುರು ಗೋವಿಂದ ವಿಠ್ಠಲ | ಚರಣ ನೀರೇರುಹಕರುಣಿಸಿ ಸಲಹೇ - ಮಾತೇ 5
--------------
ಗುರುಗೋವಿಂದವಿಠಲರು
ಬೆಟ್ಟದ ಶೃಂಗವ ಹತ್ತಿ ಧುಮುಕುವೆ ನಾನು ಕೃಷ್ಣನೇ ಸರ್ವೋತ್ತಮ ಮತ್ತಾರೊಬ್ಬರಿಲ್ಲವೆಂದು ಪ ಪಂಕಜಾಸನಾಹಿಪ ಶಂಕರಾದಿಗಳು ಹರಿಗೆ ಕಿಂಕರರು ಮತ್ತು ಇವಗೆ ಪುತ್ರ ಪೌತ್ರರು `ಏಕೋ ನಾರಾಯಣ ಆಸೀನ್ನಬ್ರಹ್ಮೇ'ತಿ ಶ್ರುತಿಯೊಂದೇ ಸಾಕೊ ಮತ್ತಿನ್ಯಾಕೆ ಸಂಶಯ ಹರಿ ನೀನೆ ಗತಿಯೆಂದು 1 `ಯಂಕಾಮಯೇ' ಎಂಬ ಶ್ರುತಿ ಪಂಕಜಾಸನಾನಿಲ ಶಂಕರರೆಲ್ಲರೂ ಹರಿಕಿಂಕರರು ಸಿರಿಗೆ ಕಿಂಕರರೆಂಬುದ ನಿಶ್ಶಂಕವಾಗಿ ಪೇಳಲು ಶಂಕೆ ಯಾಕೊ ಸಲಹೊ ಶ್ರೀ ಪಂಕಜಲೋಚನನೆಂದು 2 ಜಾನಕಿ ವಿಯುಕ್ತನಾಗಿ ಕ್ಲೇಶಗಳಪಟ್ಟಿರುವ ಮತ್ತು ಜರಾಸಂಧಗಂಜಿ ಬೆಟ್ಟವೇರಿದನು ನಿರವದ್ಯ ನಿರನಿಷ್ಟ ಎಂಬೊ ಶ್ರುತಿಯನ್ನೆ ನೋಡಿ ನಿರ್ದೋಷನಿದನೆಂದು 3 ದೇವದತ್ತ ಯಜ್ಞದತ್ತ ಮೊದಲಾದ ಜನರಂತೆ ಪುರುಷನಾದ ಮೇಲೆ ಇವನಲ್ಪಗುಣನು ಎಂಬ ದುರ್ಮತಿಯ ಬಿಟ್ಟು ಗುಣಶ್ರುತ ಸವಿರುದ್ಧ ಎಂಬೋ ಶ್ರುತ್ಯರ್ಥವ ತಿಳಿದು ಹರಿಗುಣಪೂರ್ಣನೆಂದು 4 ಸೋಮಕುಲಶೇಖರನೆ ಭಾಮಾವಲ್ಲಭ ಬಲ ರಾಮನಿಗೆ ಸಹೋದರ ಸಾಮಗಪ್ರಿಯ ಶ್ರೀಮನ್ನಾಮಗಿರಿ ಶ್ರೀ ಸ್ವಾಮಿ ನೃಹರಿಯೆ ವಿದ್ಯಾ ರತ್ನಾಕರ ಯೋಗಿಯನ್ನು ಹರಿ ನೀನೆ ರಕ್ಷಿಸೆಂದು 5
--------------
ವಿದ್ಯಾರತ್ನಾಕರತೀರ್ಥರು
ಲಕ್ಷ್ಮೀದೇವಿ ಅಂಬೋರುಹೇಕ್ಷಣೆ ಅಂಬಾಲತೇ ಜಗ ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ ಪ ನಂಬಿದೆ ನಿನ್ನ ಪದಾಂಬುಜಯುಗಳವ ಕಂಬು ಕಂಧರಿ ಕನಕಾಂಬರ ಧಾರಿಣಿ ಬೆಂಬಲವೀಯೆ ವಿಳಂಬವ ಮಾಡದೆ ಅ.ಪ `ಯಂಕಾಮಯೇ'ತ್ಯಾದಿ ಶೃತಿಗಳೆಲ್ಲಾ ಪಂಕಜಭವಮುಖ ಸುಮನಸರು ಕಿಂಕರರೆನ್ನುತ ಪೊಗಳುತಿರೆ ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ ಶ ಶಾಂಕ ಸೋದರಿ ಆತಂಕವ ಬಿಡಿಸೆ 1 ನೀರಜಾತಗಣ ಕೃತ ನಿಲಯೇ ಮಾರಜನಕ ಹರಿ ಪ್ರಿಯ ಜಾಯೆ ಕೋರುವೆ ನಿನ್ನಯ ಪರಮದಯೆ ಸಾರಸಾಕ್ಷಿ ಸರಿಯಾರು ನಿನಗೆ ಕರು ಣಾರಸಮಯೆ ಸುವಿಶಾರದೆ ಜನನಿ 2 ಕನ್ಯೆ ನಿಖಿಲ ಸುರನರರೊಳಗೆ ಮಾನ್ಯೆ ನಿನ್ನ ಪೋಲುವರನ್ಯರುಂಟೆ ನಿನ್ನ ದಾಸನಾದ ಎನ್ನ ಮನೋರಥ ವನ್ನು ತಿಳಿಸೆ ಪ್ರಸನ್ನ ಶ್ರೀ ಹರಿಯಲಿ 3
--------------
ವಿದ್ಯಾಪ್ರಸನ್ನತೀರ್ಥರು